Horoscope; ದಿನ ಭವಿಷ್ಯ | ಸಿಂಹ ರಾಶಿಯವರಿಗೆ ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವುದು

ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು , ಶುಕ್ಲಪಕ್ಷ, ಚೌತಿ ತಿಥಿ, ಸೋಮವಾರ, ಫೆಬ್ರವರಿ 15, 2021ರ ಭವಿಷ್ಯ.

Horoscope; ದಿನ ಭವಿಷ್ಯ | ಸಿಂಹ ರಾಶಿಯವರಿಗೆ ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವುದು
ದಿನ ಭವಿಷ್ಯ
Edited By:

Updated on: Feb 16, 2021 | 7:04 PM

ನಿತ್ಯ ಪಂಚಾಂಗ: ಶಾರ್ವರಿನಾಮ ಸಂವತ್ಸರ, ಉತ್ತರಾಯಣ, ಮಾಘಮಾಸ, ಶಿಶಿರ ಋತು , ಶುಕ್ಲಪಕ್ಷ, ಚೌತಿ ತಿಥಿ, ಸೋಮವಾರ, ಫೆಬ್ರವರಿ 15, 2021. ಉತ್ತರಾಭಾದ್ರೆ ನಕ್ಷತ್ರ, ರಾಹುಕಾಲ: ಬೆಳಿಗ್ಗೆ 8:8ಇಂದ ಬೆಳಿಗ್ಗೆ 9:34 ವರೆಗೆ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.42. ಸೂರ್ಯಾಸ್ತ: ಸಂಜೆ 6.17.

ದಿನಾಂಕ 15-02-2021 ರ ಸೋಮವಾರದ, ರಾಶಿಭವಿಷ್ಯ

ಮೇಷ: ಅಪಮಾನ,ಅಪವಾದದಂತಹ ಸಮಸ್ಸೆಗೆ ಸಿಲುಕದಂತೆ ಜಾಗರೂಕರಾಗಿರಿ.ಈ ಸಮಯದಲ್ಲಿ ಮಾತನಾಡುವ ಬದಲು ಮಾತು ಕೇಳುವದು ಉತ್ತಮ.ಮಕ್ಕಳು ಶಾಲಾ ಕಾಲೇಜುಗಳಲ್ಲಿ ಸಾಧನೆ ತೋರುವರು. ಶುಭ ಸಂಖ್ಯೆ: 6

ವೃಷಭ: ವಿನಯಪೂರ್ವಕ ಕಾರ್ಯ ಸಾಧಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗುವಿರಿ.ವಿವಿಧ ಮೂಲದಿಂದ ಧನಪ್ರಾಪ್ತಿ ಯೋಗವಿದೆ. ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಯೋಗವಿದೆ. ವಾಹನ ಖರೀದಿ ಯೋಗವಿರುವದು. ಶುಭ ಸಂಖ್ಯೆ: 2

ಮಿಥುನ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಇರುವದು. ಅಹಂಭಾವದಿಂದ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಪ್ರಸಂಗವಿದೆ ಎಚ್ಚರಿಕೆ ವಹಿಸಿರಿ. ನಮೃತೆಗೆ ಯೋಗ್ಯ ಸಮ್ಮಾನ ದೊರೆಯುವದು. ಶುಭ ಸಂಖ್ಯೆ: 8

ಕರ್ಕ: ಭಾವುಕತೆಯಿಂದ ಕಾರ್ಯಸಾಧಿಸಲು ಪ್ರಯತ್ನಿಸುವಿರಿ. ಪರಾವಲಂಬಿ ವ್ಯವಹಾರದಲ್ಲಿ ಹೂಡಿಕೆ ಬೇಡ. ಸಂಶಯಿತ ನಡೆಯಿಂದ ಮನಸ್ತಾಪ. ಸಣ್ಣಪುಟ್ಟ ಕೆಲಸಗಳೂ ವಿಳಂಬವಾಗುವ ಸಾಧ್ಯತೆ ಇದೆ. ಅಭದ್ರತೆ ಕಾಡುವದು. ಶುಭ ಸಂಖ್ಯೆ:  1

ಸಿಂಹ: ವಿಶ್ರಾಂತಿ ಇಲ್ಲದ ದುಡಿಮೆ ಬೇಸರ ತರುವದು. ಜವಾಬ್ದಾರಿಗಳ ಹಂಚಿಕೆ ಮಾಡುವ ಪ್ರಮೇಯ ಉಂಟಾಗುವದು. ಮಿತಿ ಮೀರಿದ ಆಲೋಚನೆಗಳು ದಿಕ್ಕು ತಪ್ಪಿಸುವ ಸಾಧ್ಯತೆ ಇದೆ. ಆರ್ಥಿಕ ಲಾಭ ಇಲ್ಲದಿದ್ದರೂ ಹಾನಿ ಇರುವದಿಲ್ಲ. ಶುಭ ಸಂಖ್ಯೆ: 7

ಕನ್ಯಾ: ಹಣಕಾಸಿನ ವಿಷಯದಲ್ಲಿ ಬಂಧುಗಳೊಂದಿಗೆ ಮನಸ್ತಾಪವಾಗುವ ಸಾಧ್ಯತೆ ಇದೆ. ಸಹಾನುಭೂತಿಗೆ ಮಣಿಯದೆ ಇರುವದು ಒಳಿತು. ಉನ್ನತ ಅಧಿಕಾರಿಗಳಿಂದ ತೊಂದರೆ ಉಂಟಾಗುವದು. ಆತ್ಮವಿಶ್ವಾಸದಿಂದ ಮುಂದುವರೆಯಿರಿ. ಶುಭ ಸಂಖ್ಯೆ: 3

ತುಲಾ: ಉದ್ಯೋಗದ ಬಗ್ಗೆ ಆತ್ಮಸಂತೃಪ್ತಿ ಇರುವದು. ಮನೋಚಿಂತಿತ ಕಾರ್ಯ ಕೈಗೂಡುವದು. ಸ್ವಪ್ರಯತ್ನದಿಂದಲೇ ಎಲ್ಲವೂ ಸಾಧ್ಯವಾಗುವದು. ಪರರ ಸಹಾಯದ ಅನಿವಾರ್ಯತೆ ಇರಲಾರದು. ಆರೋಗ್ಯದ ಕಾಳಜಿ ಇರಲಿ. ಶುಭ ಸಂಖ್ಯೆ: 9

ವೃಶ್ಚಿಕ: ಮನಸ್ಸು ಚಂಚಲವಾಗಿ ಮಾಡುವ ಕಾರ್ಯ ಅರ್ದಕ್ಕೆ ನಿಲ್ಲುವ ಸಂಭವವಿದೆ. ಕಷ್ಟಕಾಲದಲ್ಲಿಯೂ ಪರೋಪಕಾರದ ಬುದ್ಧಿ ತೋರುವಿರಿ. ಸಹಕಾರಿ ವಲಯದದಲ್ಲಿ ಅಪೇಕ್ಷಿತ ಲಾಭ ದೊರೆಯುವದು. ವಿದೇಶ ಪ್ರಯಾಣದ ಯೋಗವಿದೆ. ಶುಭ ಸಂಖ್ಯೆ: 4

ಧನು: ವ್ಯಾಪಾರದಲ್ಲಿ ಪ್ರಗತಿ ಇರುವದು. ವೈವಾಹಿಕ ತೊಂದರೆಗಳು ಪರಿಹಾರವಾಗುವವು. ಸಂಕುಚಿತ ಭಾವನೆ ಅಥವಾ ಸಂದೇಹಗಳಿಂದ ದೂರವಿರಿ. ಮನೆಯಲ್ಲಿ ಸಂತಸದ ವಾತಾವರಣ ಇರುವದು. ಶುಭ ಸಂಖ್ಯೆ: 6

ಮಕರ: ಮಿತ್ರರ ಸಕಾರಾತ್ಮಕ ಧೋರಣೆಯಿಂದ ವ್ಯವಹಾರಿಕ ಅಭಿವೃದ್ಧಿ ಕಂಡು ಬರುವದು.ಕುಟುಂಬದ ಜವಾಬ್ದಾರಿ ಹೆಚ್ಚುವದು. ಮಕ್ಕಳ ವಿದ್ಯಾಬ್ಯಾಸ ಹಾಗೂ ಆರೋಗ್ಯದ ಚಿಂತೆ ಕಂಡುಬರುವದು. ನಿರ್ಲಕ್ಷತೆ, ಕೆಲಸ ಮುಂದೂಡುವ ಸ್ವಭಾವದಿಂದ ಹಾನಿ ಸಂಭವ. ಶುಭ ಸಂಖ್ಯೆ: 2

ಕುಂಭ: ದಿಟ್ಟತನ, ಮನೋಸ್ಥೈರ್ಯ, ನೇರ,ನಿಷ್ಟುರ ನಡೆಗಳಿಗೆ ಉತ್ತಮ ಫಲಪಾಪ್ತವಾಗುವುದು. ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವವು. ಅವಿವಾಹಿತರಿಗೆ ವಿವಾಹ ಯೋಗ ಕೂಡಿ ಬರುವದು. ಶುಭ ಸಂಖ್ಯೆ: 5

ಮೀನ: ಬಹುಜನರ ಪ್ರಶಂಸೆಗೆ ಪಾತ್ರವಾಗುವ ಆಡಳಿತಾತ್ಮಕ ನಿರ್ಧಾರ. ಇದ್ದಕ್ಕಿದಂತೆ ಶುಭಕರ ಒಲವು. ಸಲ್ಲುವ ವಿಚಾರದಲ್ಲಿ ಕುಟುಂಬದ ಒಗ್ಗಟ್ಟು ವೃದ್ಧಿ. ಆರ್ಥಿಕಾನೂಕೂಲದಿಂದ ಸರಳ ವ್ಯವಹಾರ. ಹೆಂಗಳೆಯರದು ಮೌನವಾದ ಕೆಲಸ. ಆದರೆ ಪರಿಣಾಮ ಜಾಸ್ತಿ. ಶುಭ ಸಂಖ್ಯೆ: 7

ಬಸವರಾಜ ಗುರೂಜಿ(ಡಾ.ಬಸವರಾಜ ಗುರೂಜಿ ಸಂಪರ್ಕ ಸಂಖ್ಯೆ: 9972848937)

Published On - 6:34 am, Mon, 15 February 21

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us