ಒಂದೇ ಕಡೆ ನೂರಾರು ನಾಯಿಗಳ ತಲೆ ಬುರುಡೆ ಪತ್ತೆ! ಎಲ್ಲಿ?

ಹಾಸನ: ಹೊಳೆನರಸೀಪುರ ತಾಲೂಕಿನ ಕೊಲ್ಲಿಹಳ್ಳ ಪ್ರದೇಶದಲ್ಲಿ ನಾಯಿಗಳ ತಲೆ ಬುರುಡೆ ಪತ್ತೆಯಾಗಿದೆ. ಇದರಿಂದ ಮಾಂಸ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಒಂದೇ‌ ಕಡೆ ನೂರಾರು ನಾಯಿಗಳ ತಲೆ ಬುರುಡೆ ಸಿಕ್ಕಿರೋದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಹೊಳೆನರಸೀಪುರ ಪಟ್ಟಣದ ಅನತಿ ದೂರದಲ್ಲಿ ಈ ಘಟನೆ ನಡೆದಿದ್ದು, ಯಾವ ಕಾರಣಕ್ಕೆ ಶ್ವಾನಗಳ ಮಾರಣಹೋಮ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಜನರಲ್ಲಿ ಆತಂಕ, ಅನುಮಾನ ಮಾತ್ರ ಕಾಡ್ತಿದೆ. ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲಲಾಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ. ಅಥವಾ ಬೇರೆಡೆಯಿಂದ ಇಲ್ಲಿಗೆ […]

ಒಂದೇ ಕಡೆ ನೂರಾರು ನಾಯಿಗಳ ತಲೆ ಬುರುಡೆ ಪತ್ತೆ! ಎಲ್ಲಿ?

Updated on: Aug 30, 2020 | 9:36 AM

ಹಾಸನ: ಹೊಳೆನರಸೀಪುರ ತಾಲೂಕಿನ ಕೊಲ್ಲಿಹಳ್ಳ ಪ್ರದೇಶದಲ್ಲಿ ನಾಯಿಗಳ ತಲೆ ಬುರುಡೆ ಪತ್ತೆಯಾಗಿದೆ. ಇದರಿಂದ ಮಾಂಸ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಒಂದೇ‌ ಕಡೆ ನೂರಾರು ನಾಯಿಗಳ ತಲೆ ಬುರುಡೆ ಸಿಕ್ಕಿರೋದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಹೊಳೆನರಸೀಪುರ ಪಟ್ಟಣದ ಅನತಿ ದೂರದಲ್ಲಿ ಈ ಘಟನೆ ನಡೆದಿದ್ದು, ಯಾವ ಕಾರಣಕ್ಕೆ ಶ್ವಾನಗಳ ಮಾರಣಹೋಮ ನಡೆದಿದೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ಜನರಲ್ಲಿ ಆತಂಕ, ಅನುಮಾನ ಮಾತ್ರ ಕಾಡ್ತಿದೆ. ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲಲಾಗಿದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಅಥವಾ ಬೇರೆಡೆಯಿಂದ ಇಲ್ಲಿಗೆ ತಂದು ಬಿಸಾಡಿರುವ ಬಗ್ಗೆಯೂ ವದಂತಿ ಕೇಳಿ ಬರುತ್ತಿದೆ. ನಿರ್ಜನ ಪ್ರದೇಶದಲ್ಲಿ ನಾಯಿಗಳ ರುಂಡ ಭಾಗ ಮಾತ್ರ ಪತ್ತೆಯಾಗಿರುವ ಕಾರಣ ಕಳವಳ ಹೆಚ್ಚಾಗಿದೆ. ಇನ್ನು ಶ್ವಾನಗಳ ಸಾಮೂಹಿಕ ಸಂಹಾರಕ್ಕೆ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರು ತನಿಖೆ ನಡೆಸಿ ಶ್ವಾನ ಹತ್ಯೆ ರಹಸ್ಯ ಬಯಲು ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

Published On - 8:58 am, Sun, 30 August 20