AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜರಂತೆ ಮೆರೆಯುತ್ತಿದ್ದ ಧೋನಿ ಟೀಮ್ ಸೋಲಿನ ಸರಮಾಲೆ.. IPLನಲ್ಲಿ ಮೊದಲ ಬಾರಿಗೆ ಪ್ಲೇ ಆಫ್​ನಿಂದ ಚೆನ್ನೈ ಔಟ್?

ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ಸೀಸನ್​ನಲ್ಲೂ ಐಪಿಎಲ್ ಅನ್ನೋ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಧೂಳೆಬ್ಬಿಸುತ್ತಿದ್ದ ತಂಡ. ಇಲ್ಲಾ ಅಂದ್ರೆ ಸುಮ್ನೇನಾ.. ಐಪಿಎಲ್​ನಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ.. ಐದು ಬಾರಿ ರನ್ನರ್ ಅಪ್.. 8 ಬಾರಿ ಫೈನಲ್​​ಗೆ ಎಂಟ್ರಿ ಕೊಡೋದಕ್ಕೆ ಸಾಧ್ಯವಾಗೋದು. ಆದ್ರೀಗ ಅದೇ ಚೆನ್ನೈ ತಂಡ ಈ ಸೀಸನ್​ನಲ್ಲಿ, ಕಂಡು ಕೇಳರಿಯದ ಹೀನಾಯ ಪ್ರದರ್ಶನ ನೀಡ್ತಿದೆ. ರಾಜಸ್ಥಾನ್​ನ ಉರಿ ದಾಳಿಗೆ ಚೆನ್ನೈ ಪ್ಲೇ ಆಫ್ ಕನಸು ಭಗ್ನ? ನಿನ್ನೆ ರಾಜಸ್ಥಾನ್ ವಿರುದ್ಧದ ಅಳಿವು ಉಳಿವಿನ ಪಂದ್ಯದಲ್ಲಾದ್ರೂ […]

ರಾಜರಂತೆ ಮೆರೆಯುತ್ತಿದ್ದ ಧೋನಿ ಟೀಮ್ ಸೋಲಿನ ಸರಮಾಲೆ.. IPLನಲ್ಲಿ ಮೊದಲ ಬಾರಿಗೆ ಪ್ಲೇ ಆಫ್​ನಿಂದ ಚೆನ್ನೈ ಔಟ್?
ಆಯೇಷಾ ಬಾನು
|

Updated on: Oct 20, 2020 | 9:20 AM

Share

ಚೆನ್ನೈ ಸೂಪರ್ ಕಿಂಗ್ಸ್ ಪ್ರತಿ ಸೀಸನ್​ನಲ್ಲೂ ಐಪಿಎಲ್ ಅನ್ನೋ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಧೂಳೆಬ್ಬಿಸುತ್ತಿದ್ದ ತಂಡ. ಇಲ್ಲಾ ಅಂದ್ರೆ ಸುಮ್ನೇನಾ.. ಐಪಿಎಲ್​ನಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ.. ಐದು ಬಾರಿ ರನ್ನರ್ ಅಪ್.. 8 ಬಾರಿ ಫೈನಲ್​​ಗೆ ಎಂಟ್ರಿ ಕೊಡೋದಕ್ಕೆ ಸಾಧ್ಯವಾಗೋದು. ಆದ್ರೀಗ ಅದೇ ಚೆನ್ನೈ ತಂಡ ಈ ಸೀಸನ್​ನಲ್ಲಿ, ಕಂಡು ಕೇಳರಿಯದ ಹೀನಾಯ ಪ್ರದರ್ಶನ ನೀಡ್ತಿದೆ.

ರಾಜಸ್ಥಾನ್​ನ ಉರಿ ದಾಳಿಗೆ ಚೆನ್ನೈ ಪ್ಲೇ ಆಫ್ ಕನಸು ಭಗ್ನ? ನಿನ್ನೆ ರಾಜಸ್ಥಾನ್ ವಿರುದ್ಧದ ಅಳಿವು ಉಳಿವಿನ ಪಂದ್ಯದಲ್ಲಾದ್ರೂ ಚೆನ್ನೈ ಸಿಡಿದೇಳುತ್ತೆ. ಪ್ಲೇ ಆಫ್ ರೇಸ್​ನಲ್ಲಿ ಜೀವಂತವಾಗಿರುತ್ತೆ ಅನ್ನೋ ನಿರೀಕ್ಷೆಯೂ ಹುಸಿಯಾಯ್ತು. ರಾಜಸ್ಥಾನ್ ಬೌಲರ್​ಗಳ ಉರಿದಾಳಿಗೆ ಚೆನ್ನೈ ಬ್ಯಾಟ್ಸ್​ಮನ್​ಗಳು, ನಾವೆಲ್ಲಾ ಒಂದು ಕಾಲದ ಚಾಂಪಿಯನ್ ಆಟಗಾರರು ಅನ್ನೋದನ್ನ ಮರೆತು ಔಟಾಗಿಬಿಟ್ರು.

ಈ ಸೀಸನ್​ನಲ್ಲಿ ಚೆನ್ನೈ ಈ ಬಾರಿಯ ಐಪಿಎಲ್ ಸೀಸನ್​ನಲ್ಲಿ 10 ಪಂದ್ಯಗಳನ್ನಾಡಿರೋ ಚೆನ್ನೈ, ಕೇವಲ 3 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ರೆ, 7 ಪಂದ್ಯಗಳಲ್ಲಿ ಮುಗ್ಗರಿಸಿ ಕೇವಲ 6 ಪಾಯಿಂಟ್ ಸಂಪಾದಿಸಿ, ಕೊನೆ ಸ್ಥಾನದಲ್ಲಿದೆ.

ಐಪಿಎಲ್​ನಲ್ಲಿ ಇದೇ ಮೊದಲ ಬಾರಿ ಚೆನ್ನೈ ಹೀನಾಯ ಪ್ರದರ್ಶನ! ಐಪಿಎಲ್ ಇತಿಹಾಸದಲ್ಲೇ ಚೆನ್ನೈ ತಂಡ ಈ ಸೀಸನ್​ನಲ್ಲಿ ನೀಡಿದ ಕಳಪೆ ಪ್ರದರ್ಶನವನ್ನ ಯಾವ ಸೀಸನ್​ನಲ್ಲೂ ನೀಡಿರಲಿಲ್ಲ. ಕಳೆದ 12 ಸೀಸನ್​ನಲ್ಲೂ ಚೆನ್ನೈ ತಂಡ ಪ್ಲೇ ಆಫ್​ಗೆ ಎಂಟ್ರಿ ಕೊಡದೇ ನಿರ್ಗಮಿಸಿದ್ದೇ ಇಲ್ಲ. ಆದ್ರೆ ಈ ಸೀಸನ್​ನಲ್ಲಿ ಚೆನ್ನೈ ತಂಡದ ಪ್ಲೇ ಆಫ್ ಕನಸು ಬಹುತೇಖ ಭಗ್ನವಾಗಿ ಹೋದಂತಾಗಿದೆ.

ಅಂದು ಲಕ್ಕಿ ಟೀಮ್.. ಇಂದು ಅನ್​ಲಕ್ಕಿ ಟೀಮ್! ಚೆನ್ನೈ ತಂಡ ಎಷ್ಟರ ಮಟ್ಟಿಗೆ ಅದೃಷ್ಟದ ತಂಡವಾಗಿತ್ತು ಅಂದ್ರೆ, ಬೇರೆ ಫ್ರಾಂಚೈಸಿಯಲ್ಲಿ ಎಷ್ಟೇ ಕಳಪೆ ಪ್ರದರ್ಶನ ನೀಡಿದ ಆಟಗಾರನಾದ್ರೂ ಸರಿ. ಆತ ಧೋನಿ ನಾಯಕತ್ವದ ಚೆನ್ನೈ ತಂಡ ಸೇರಿಕೊಂಡ್ರೆ, ಆತನ ಅದೃಷ್ಟವೆ ಬದಲಾಗಿ ಬಿಡ್ತಿತ್ತು. ಅಷ್ಟರ ಮಟ್ಟಿಗೆ ಧೋನಿ ತಂಡ ಐಪಿಎಲ್​ನಲ್ಲಿ ಲಕ್ಕಿ ಟೀಮ್ ಎನಿಸಿಕೊಂಡಿತ್ತು. ಆದ್ರೀಗ ಅದೇ ಚೆನ್ನೈ ತಂಡ ಅನ್​ಲಕ್ಕಿ ಟೀಮ್ ಎನಿಸಿಕೊಳ್ತಿದೆ.

ಯಾವ ಚೆನ್ನೈ ತಂಡ ಅಂದ್ರೆ ಸೋಲ್ತೀವಿ ಅಂತಾ ಮೊದಲೇ ನಿರ್ಧರಿಸ್ತಿದ್ರೋ.. ಅದೇ ಚೆನ್ನೈ ತಂಡ ಅಂದ್ರೆ ಇವತ್ತು ನಾವೇ ಗೆದ್ವಿ ಅಂತಾ ಮೊದಲೇ ನಿರ್ಧರಿಸಿಕೊಳ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಸೀಸನ್​ನ ಐಪಿಎಲ್​ನಲ್ಲಿ ಚೆನ್ನೈ ತಂಡ ಮಂಕಾಗಿ ಹೋಗಿದೆ. ಧೋನಿ ಜಲ್ವಾ ಕಣ್ತುಂಬಿಸಿಕೊಳ್ತಿದ್ದ ಚೆನ್ನೈ ಅಭಿಮಾನಿಗಳಿಗೆ, ಈ ಸೀಸನ್​ನಲ್ಲಿ ನಿರಾಸೆಯಾದಂತಾಗಿದೆ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್