ಪರೀಕ್ಷೆ ಅಕ್ರಮ: ಕಿಂಗ್ ಪಿನ್ ರುದ್ರಗೌಡನ ಟವರ್ ಲೋಕೆಷನ್ ಜಾಡು ಹಿಡಿದು ಹೊರಟಿದ್ದ ಪೊಲೀಸರಿಗೆ ಶಾಕ್
ಕಿಂಗ್‌ಪಿನ್ ಆರ್‌ಡಿ ಪಾಟೀಲ್ ಎಲ್ಲೂ ಹೋಗಿರಲಿಲ್ಲ ಬದಲಿಗೆ ಕಲಬುರಗಿ ನಗರದಲ್ಲಿ ಬಚ್ಚಿಟ್ಟುಕೊಂಡಿದ್ದ. ಪೊಲೀಸರನ್ನು ಯಮಾರಿಸಲೆಂದೇ ತನ್ನ ಫೋನನ್ನು ಬೇರೆಯವರಿಗೆ ಕೊಟ್ಟ ಉತ್ತರ ಪ್ರದೇಶಕ್ಕೆ ಕಳಿಸಿದ್ದ. ಕೊನೆಗೆ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಕಲಬುರಗಿಯಲ್ಲೇ ಇದ್ದಾನೆ ಎಂದು ತಿಳಿದ ಬಳಿಕ ಪೊಲೀಸರು ಆತನನನ್ನು ಬಂಧಿಸಲು ಬಂದಾಗ ಕಪೌಂಡ್ ಹಾರಿ ಎಸ್ಕೇಪ್ ಆಗಿದ್ದಾನೆ.
ಕಲಬುರಗಿ, ನ.08: ಕೆಇಎ ಪರೀಕ್ಷೆಯಲ್ಲಿ (KEA Exam) ಅಕ್ರಮ ಎಸಗಿ ಪೊಲೀಸರಿಗೆ ಯಮಾರಿಸಿ ಎಸ್ಕೇಪ್ ಆಗಿದ್ದ ಕಿಂಗ್‌ಪಿನ್ ಆರ್‌ಡಿ ಪಾಟೀಲ್ (RD Patil) ನೆರೆಯ ಮಹಾರಾಷ್ಟ್ರ, ತೆಲಂಗಾಣ ಅಥವಾ ಉತ್ತರ ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪ್ರತಿಯೊಬ್ಬರು ಅಂದುಕೊಂಡಿದ್ದರು. ಅದರಂತೆ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ನ ಮೊಬೈಲ್ ಲೋಕೇಷನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ. ಹೌದು.. ಟವರ್ ಲೋಕೆಷನ್ ಜಾಡು ಹಿಡಿದು ಹೊರಟಿದ್ದ ಪೊಲೀಸ್ ರಿಗೆ ರುದ್ರಗೌಡ ಟವರ್ ಲೋಕೆಷನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿದೆ.ಈ ಹಿನ್ನೆಲೆಯಲ್ಲಿ ರುದ್ರಗೌಡ ಕಲಬುರಗಿಯಲ್ಲಿ ಇಲ್ಲ ಎಂದು ಪೊಲೀಸರು ಸಹ ಸುಮ್ಮನಾಗಿದ್ದರು. ಆದ್ರೆ, ಕಿಂಗ್‌ಪಿನ್ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಲು ತನ್ನ ಫೋನ್ ಬೇರೊಬ್ಬರಿಗೆ ನೀಡಿ ಉತ್ತರ ಪ್ರದೇಶಕ್ಕೆ ಕಳುಹಿಸಿ ತಾನು ಕಲಬುರಗಿಯಲ್ಲೇ ತಲೆಮರಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಮೊದಲು ರುದ್ರಗೌಡ ಟವರ್ ಲೋಕೆಷನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿತ್ತು. ಪೊಲೀಸರನ್ನು ಯಮಾರಿಸಲೆಂದೇ ತನ್ನ ಫೋನನ್ನು ಬೇರೆಯವರಿಗೆ ಕೊಟ್ಟ ಉತ್ತರ ಪ್ರದೇಶಕ್ಕೆ ಕಳಿಸಿದ್ದ. ಕೊನೆಗೆ ಕಿಂಗ್‌ಪಿನ್ ರುದ್ರಗೌಡ ಪಾಟೀಲ್ ಕಲಬುರಗಿಯಲ್ಲೇ ಇದ್ದಾನೆ ಎಂದು ತಿಳಿದ ಬಳಿಕ ಪೊಲೀಸರು ಆತನನನ್ನು ಬಂಧಿಸಲು ಬಂದಾಗ ಕಪೌಂಡ್ ಹಾರಿ ಎಸ್ಕೇಪ್ ಆಗಿದ್ದಾನೆ. ಇದೀಗಾ ಪೊಲೀಸರ ನಿರ್ಲಕ್ಷ್ಯದಿಂದಲೇ ಆತ ತಪ್ಪಿಸಿಕೊಂಡ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಕಳೆದ ತಿಂಗಳ ಅಕ್ಟೋಬರ್ 28 ರಂದು ನಡೆದಿದ್ದ ಕೆಇಎ ಪರೀಕ್ಷೆಯಲ್ಲಿ ಅಕ್ರಮವೆಸಗಿದ್ದ ರುದ್ರಗೌಡ ಪಾಟೀಲ್ ಅನೇಕ ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾಬಂದಿದ್ದಾನೆ. ಪೊಲೀಸರು, ರುದ್ರಗೌಡ ಪಾಟೀಲ್ ಟವರ್ ಲೋಕೆಷನ್ ಜಾಡು ಹಿಡಿದಿದ್ದರು. ಆದ ರುದ್ರಗೌಡ ಟವರ್ ಲೋಕೆಷನ್ ಉತ್ತರ ಪ್ರದೇಶದಲ್ಲಿ ಪತ್ತೆಯಾಗಿತ್ತು. ಉತ್ತರ ಪ್ರದೇಶದಲ್ಲಿ ಟವರ್ ಲೊಕೇಷನ್ ತೋರಿಸಿದಕ್ಕೆ ಕಲಬುರಗಿಯಲ್ಲಿ ಇಲ್ಲ ಎಂದು ಪೊಲೀಸರು ಸುಮ್ಮನಾಗಿದ್ದರು. ಆದರೆ ರುದ್ರಗೌಡ ಪಾಟೀಲ್ ತನ್ನ ಮೊಬೈಲ್ ಮತ್ತೊಬ್ಬರ ಕೈಗೆ ಕೊಟ್ಟು ಉತ್ತರ ಪ್ರದೇಶಕ್ಕೆ ಕಳುಹಿಸಿದ್ದ. ಕೆಲ ದಿನಗಳ ಬಳಿಕ ಪೊಲೀಸರಿಗೆ ರುದ್ರಗೌಡ ಕಲಬುರಗಿಯಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಆಗ ಎಚ್ಚೆತ್ತ ಪೊಲೀಸರು ಮಾಹಿತಿ ಕ್ರಾಸ್ ಚೆಕ್ ಮಾಡಲು ಅಪಾರ್ಟ್‌ಮೆಂಟ್ ಗೆ ಹೋಗಿದ್ದಾರೆ. ಆಗ ಪೊಲೀಸರು ಬರುವ ಮಾಹಿತಿ ಪಡೆದು ರುದ್ರಗೌಡ ಪಾಟೀಲ್ ಎಸ್ಕೇಪ್ ಆಗಿದ್ದಾನೆ.
ರುದ್ರಗೌಡ ಪಾಟೀಲ್ಗಾಗಿ ಹುಡುಕಾಟ ನಡೆಸುತ್ತಿರುವ 4 ವಿಶೇಷ ತಂಡಗಳು
ಆರೋಪಿ ರುದ್ರಗೌಡ ಪಾಟೀಲ್ ಬಂಧನಕ್ಕೆ ಹುಡುಕಾಟ ಮುಂದುವರಿದಿದೆ. 4 ವಿಶೇಷ ತಂಡಗಳು ಕಲಬುರಗಿ ಜಿಲ್ಲೆಯ ವಿವಿಧಡೆ ಮತ್ತು ಮಹಾರಾಷ್ಟ್ರ ಹಲವೆಡೆ ಹುಡುಕಾಟ ನಡೆಸುತ್ತಿವೆ. ಮಹಾರಾಷ್ಟ್ರದ ಸೊಲ್ಹಾಪುರ, ಪುಣೆಯಲ್ಲಿ ರುದ್ರಗೌಡ ಅಡಗಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಆರೋಪಿ ರುದ್ರಗೌಡ ಪಾಟೀಲ್ ಸಲೀಸಾಗಿ ಪರಾರಿಯಾಗುತ್ತಿರೋದನ್ನು ಗಮನಿದರೆ ಪೊಲೀಸರ ಚಲನವಲನಗಳ ಬಗ್ಗೆ ಸುಳಿವು ರವಾನೆಯಾಗುತ್ತಿದೆ!
ಪರೀಕ್ಷೆ ವೇಳೆ ಅಗತ್ಯ ಮುನ್ನೆಚ್ಚರಿಕೆ ಕೈಗೊಂಡಿದ್ದರೂ ಅಕ್ರಮ ನಡೆದಿದೆ
ಇನ್ನು ಕೆಇಎ ಪರೀಕ್ಷೆ ಅಕ್ರಮದ ಆರೋಪಿ R.D.ಪಾಟೀಲ್ ನಾಪತ್ತೆ ಕೇಸ್ ಸಂಬಂಧ ಕಲಬುರಗಿಯಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವು ಸಂದರ್ಭದಲ್ಲಿ ನಮ್ಮವರೇ ಇರುತ್ತಾರೆ. ಮೊಬೈಲ್ ಫಾರೆನ್ಸಿಕ್ ರಿಪೋರ್ಟ್ ಗಾಗಿ ಕಳಿಸಲಾಗಿದೆ. ಪರೀಕ್ಷೆಯಲ್ಲಿ ಏನೇಲ್ಲ ಮುಂಜಾಗ್ರತಾ ಕ್ರಮ ತೊಗೆದುಕೊಳ್ಳಬೇಕು ನಾವು ತೆಗೆದುಕೊಂಡಿದ್ದೇವೆ. ಆದರೂ ಕೆಲವು ಕಡೆಗಳಲ್ಲಿ ಪರೀಕ್ಷೆ ಅಕ್ರಮ ನಡೆದಿದೆ. ಪ್ರಕರಣದ ಗಂಭೀರತೆ ಮೇಲೆ ಸರ್ಕಾರ ತನಿಖಾ ಸಂಸ್ಥೆಗೆ ಕೇಸ್ ನೀಡುತ್ತೆ. ಪ್ರಾಥಮಿಕ ತನಿಖಾ ವರದಿ ರೆಡಿ ಮಾಡಿ ತನಿಖಾ ಸಂಸ್ಥೆಗೆ ನೀಡಬೇಕಾಗುತ್ತೆ. ದಯವಿಟ್ಟು ಬಿಜೆಪಿ ಅವರೇ ಆತ್ಮಾವಲೋಕನ ಮಾಡಿಕೊಳ್ಳಿ. ನಿಮ್ಮ ಅವಧಿಯಲ್ಲಿ ಗೃಹ ಸಚಿವರೇ ಆರೋಪಿಗಳ ಮನೆಗೆ ಹೋಗಿ ದ್ರಾಕ್ಷಿ, ಗೋಡಂಬಿ ತಿಂದು ಬಂದಿದ್ದರು. ಓರ್ವ ಮಾಜಿ ಸಚಿವರು ಆರೋಪಿ ಒಬ್ಬರನ್ನು ಬಿಡುವಂತೆ ಹೇಳಿದ್ರು. ಬಿಜೆಪಿ ಸರ್ಕಾರದಲ್ಲಿ ನಿಮ್ಮ ಮಂತ್ರಿಗಳು, ಶಾಸಕರೇ ಆರೋಪಿಗಳಿಗೆ ಸಹಕಾರ ಕೊಟ್ಟಿದ್ದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ಅವರೇ ಆಳವಾಗಿ ಅಧ್ಯಯನ ಮಾಡಿ, ನೀವು ಎಷ್ಟು ಆಳವಾಗಿ ತೋಡುತ್ತಿರೋ ಗುಂಡಿಯಲ್ಲಿ ನೀವೆ ಬಿಳ್ತಿರಾ ಎಂದು ಆರೋಪಿಸಿದ್ದಾರೆ.
ಅರೆಸ್ಟ್ಗೆ ತೆರಳುವ ಬಗ್ಗೆ ಆರ್‌ಡಿ ಪಾಟೀಲ್ಗೆ ಅಧಿಕಾರಿಗಳೆ ಮೇಸೆಜ್ ಕೊಟ್ಟಿದ್ರಾ?
ನಮ್ಮ ಅಧಿಕಾರಿಗಳು ಯಾರಾದ್ರು ಇದರಲ್ಲಿ ಇದ್ದರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ನನ್ನ ಮಾಹಿತಿ ಪ್ರಕಾರ ಆರ್ ಡಿ ಅಪಾರ್ಟ್ಮೆಂಟ್ ನಲ್ಲಿ ಇರುವ ಮಾಹಿತಿ ಖಚಿತ ಪಡಿಸಲು ಹೋಗಿದ್ದರು. ಕೆಲವು ಅಧಿಕಾರಿಗಳು ಇನ್ನೂ ಬಿಜೆಪಿ ಸರ್ಕಾರದ ಹ್ಯಾಂಗ್ ಓವರ್ ನಲ್ಲಿ ಇದ್ದಾರೆ. ಅದಕ್ಕೆಲ್ಲ ಸರಿಪಡಿಸಲು ನಮಗೂ ಇನ್ನು ಸ್ವಲ್ಪ ಟೈಂ ಬೇಕು. ಬಿಜೆಪಿ ಅವರು ಪಾಪ ಯಾರೋ ಹೇಳಿದನ್ನ ಕೇಳ್ತಾರೆ. ಬಿಜೆಪಿ ಐಟಿ ಸೆಲ್ ಸುಳ್ಳಿನ ಕಾರ್ಖಾನೆ ಇದೆ. ನಮ್ಮದು 40% ಸರ್ಕಾರ ಅಲ್ಲ, ಯಾರು ಭ್ರಷ್ಟಾಚಾರ ಮಾಡಿದ್ದಾರೆ ಅವರು ನೀರು ಕುಡಿಯಲೇಬೇಕು ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:17 am, Wed, 8 November 23