‘ಎಲೆಕ್ಷನ್ ಗೆದ್ದ ಬಳಿಕ ಅವರೆಲ್ಲರಿಗೂ ಸಾಂವಿಧಾನಿಕ ಹುದ್ದೆ ಸಿಗುತ್ತೆ’

‘ಎಲೆಕ್ಷನ್ ಗೆದ್ದ ಬಳಿಕ ಅವರೆಲ್ಲರಿಗೂ ಸಾಂವಿಧಾನಿಕ ಹುದ್ದೆ ಸಿಗುತ್ತೆ’
ಸಚಿವ ಮಾಧುಸ್ವಾಮಿ

ಬೆಳಗಾವಿ: ಅನರ್ಹ ಶಾಸಕರಿಗೆ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ ಸುಪ್ರೀಂಕೋರ್ಟ್ ಆದೇಶವನ್ನು ಕಾ‌ನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ವಾಗತಿಸಿದ್ದಾರೆ.

ಚುನಾವಣೆ ನಿರ್ಬಂಧ ಹೇರಲು ಬರುವುದಿಲ್ಲ, ಅದೇ ರೀತಿ ತೀರ್ಪು ಬಂದಿದೆ. ಅನರ್ಹರು‌ ಮರಳಿ ಗೆಲುವು ದಾಖಲಿಸುವ ತನಕ ಸಾಂವಿಧಾನಿಕ ಹುದ್ದೆ ಅಲಂಕರಿಸಲು ಬರಲ್ಲ. ಹೀಗಾಗಿ ಉಪಚುನಾವಣೆಯಲ್ಲಿ ಗೆದ್ದ ಬಳಿಕ ಅವರೆಲ್ಲರಿಗೂ ಸಾಂವಿಧಾನಿಕ ಹುದ್ದೆ ಸಿಗಲಿದೆ ಎಂದರು.

ಬೈ ಎಲೆಕ್ಷನ್​ನಲ್ಲಿ ಹೆಚ್ಚು ಸ್ಥಾನ ಗೆಲ್ತೇವೆ: ಮೂರು ತಿಂಗಳ ಮೊದಲೇ ತೀರ್ಪು‌ ಬಂದಿದ್ದರೆ ಉಪ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗುತ್ತಿತ್ತು. ಆದ್ರೆ, ತೀರ್ಪು ತಡವಾಗಿ ಬಂದಿದ್ದರಿಂದ ಅನರ್ಹರಿಗೆ ಸ್ವಲ್ಪ ಕಷ್ಟವಾಗಲಿದೆ. ಆದ್ರೂ, ಉಪಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಶ್ವಾಸವ್ಯಕ್ತಪಡಿಸಿದ್ದಾರೆ.

ಅಸಮಾಧಾನಿತರನ್ನ ಸಮಾಧಾನ ಮಾಡ್ತೇವೆ: ಬಿ ಫಾರ್ಮ್ ಕೊಟ್ಟ ಮೇಲೆಯೇ ಅನರ್ಹರು ಬಿಜೆಪಿ ಸೇರಲಿದ್ದಾರೆ. ಈ ಬಗ್ಗೆ ಪಕ್ಷದ ಹಿರಿಯ ನಾಯಕರು ತೀರ್ಮಾನ ಕೈಗೊಳ್ಳಲಿದ್ದಾರೆ. ಅನರ್ಹರನ್ನು ಜತೆಗೆ ಕರೆದೊಯ್ಯುವ ಕೆಲಸವನ್ನು ನಮ್ಮ ಪಕ್ಷ ಮಾಡಲಿದೆ. ಪ್ರಸ್ತುತ ‌ರಾಜಕೀಯ ಸನ್ನಿವೇಶದಲ್ಲಿ ಟಿಕೆಟ್ ಸಿಗದ ಬಿಜೆಪಿ ಅಸಮಾಧಾನಿತರು ರಾಜಿ ಆಗುತ್ತಾರೆ. ಅಸಮಾಧಾನಿತರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತೇವೆ.

Published On - 11:59 am, Wed, 13 November 19

Click on your DTH Provider to Add TV9 Kannada