AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರಿನಲ್ಲಿ ಹರ್ಷ-ಭುವಿ ರೊಮ್ಯಾನ್ಸ್​: ಟಾಕ್​ ಆಫ್​ ದಿ ಟೌನ್​ ಆದ ಕನ್ನಡತಿ ಜೋಡಿ

ಹರ್ಷ ಭುವಿಯನ್ನು ಸತಾಯಿಸಲು ನದಿಗೆ ಇಳಿದಿದ್ದರು. ಹರ್ಷ ನೀರಿನಲ್ಲಿ ಮುಳುಗಿ ಭುವಿಗೆ ಟೆನ್ಶನ್​ ನೀಡಿದ್ದರು. ಎಷ್ಟೇ ಹೊತ್ತಾದರೂ ಹರ್ಷ ಹೊರ ಬರದ್ದನ್ನು ನೋಡಿದ ಭುವಿ ಆತಂಕಗೊಂಡಿದ್ದರು.

ನೀರಿನಲ್ಲಿ ಹರ್ಷ-ಭುವಿ ರೊಮ್ಯಾನ್ಸ್​: ಟಾಕ್​ ಆಫ್​ ದಿ ಟೌನ್​ ಆದ ಕನ್ನಡತಿ ಜೋಡಿ
ಹರ್ಷ-ಭುವಿ
ರಾಜೇಶ್ ದುಗ್ಗುಮನೆ
|

Updated on: Feb 04, 2021 | 5:41 PM

Share

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ‘ಕನ್ನಡತಿ’ ಧಾರಾವಾಹಿ ಜನಮನ್ನಣೆಗೆ ಪಾತ್ರವಾಗಿದೆ. ಹರ್ಷ ಅಲಿಯಾಸ್​​​ ಕಿರಣ್​ ರಾಜ್​ ಹಾಗೂ ಭುವಿ ಅಲಿಯಾಸ್​ ರಜನಿ ರಾಘವನ್​ ಜೋಡಿ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಹರ್ಷ ಹಾಗೂ ಭುವಿ ನಡುವೆ ಮೊಳೆತಿರುವ ಪ್ರೀತಿ ಬಗ್ಗೆ ಎಲ್ಲರಿಗೂ ಆಸಕ್ತಿ ಹೆಚ್ಚಾಗಿದೆ. ಇಬ್ಬರಲ್ಲಿ ಯಾರು ಮೊದಲು ಪ್ರೀತಿ ವ್ಯಕ್ತಪಡಿಸುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳದ್ದು. ಈ ಮಧ್ಯೆ, ನದಿಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ತುಂಬಾನೇ ವೈರಲ್​ ಆಗಿದೆ.

ಕಲರ್ಸ್​ ಕನ್ನಡ ವಾಹಿನಿಯ ಕನ್ನಡತಿ ಧಾರಾವಾಹಿಯಲ್ಲಿ ಭುವಿ ತಮ್ಮ ಊರು ಹಸಿರುಪೇಟೆಗೆ ತೆರಳಿದ್ದರು. ತಂಗಿ ಬಿಂದು ಹಾಗೂ ಹರ್ಷ ಕೂಡ ಭುವಿ ಜತೆ ಹಸಿರುಪೇಟೆಗೆ ಬಂದಿದ್ದರು. ತಂದೆಯ ಅಪರಕಾರ್ಯಗಳನ್ನು ಪೂರ್ಣಗೊಳಿಸಿ ಭುವಿ, ಹರ್ಷ  ಹಾಗೂ ಬಿಂದು  ಜತೆ ಕಾರಿನಲ್ಲಿ ಬೆಂಗಳೂರಿಗೆ ಹೊರಟಿದ್ದರು. ಈ ವೇಳೆ ಕಾರು ನಿಲ್ಲಿಸಿ ಮೂವರು ಮಣ್ಣುಗುಂಡಿ ಹೆಸರಿನ ಹೊಳೆಯ ಸಮೀಪ ತೆರಳಿದ್ದರು.

ಹರ್ಷ ಭುವಿಯನ್ನು ಸತಾಯಿಸಲು ನದಿಗೆ ಇಳಿದಿದ್ದರು. ಹರ್ಷ ನೀರಿನಲ್ಲಿ ಮುಳುಗಿ ಭುವಿಗೆ ಟೆನ್ಶನ್​ ನೀಡಿದ್ದರು. ಎಷ್ಟೇ ಹೊತ್ತಾದರೂ ಹರ್ಷ ಹೊರ ಬರದ್ದನ್ನು ನೋಡಿದ ಭುವಿ ಆತಂಕಗೊಂಡು ನದಿಗೆ ಇಳಿದಿದ್ದರು. ನಂತರ ಹರ್ಷ ನೀರಿನಿಂದ ಎದ್ದಿದ್ದರು.  ಹರ್ಷ ಹಾಗೂ ಭುವಿ ಇಬ್ಬರೂ ನದಿಯಲ್ಲಿ ತುಂಬಾನೇ ಹತ್ತಿರ ನಿಂತಿದ್ದರು. ಈ ದೃಶ್ಯ ತುಂಬಾನೇ ರೊಮ್ಯಾಂಟಿಕ್​ ಆಗಿತ್ತು. ಸದ್ಯ, ಈ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಷ್ಟೇ ಅಲ್ಲ, ಅನೇಕರು ನದಿಯಲ್ಲೇ ಹರ್ಷ ಪ್ರೀತಿ ವ್ಯಕ್ತಪಡಿಸಬೇಕಿತ್ತು ಎಂದಿದ್ದಾರೆ.

ದಿನ ಕಳೆದಂತೆ ಕನ್ನಡತಿ ಧಾರಾವಾಹಿ ಪ್ರೇಕ್ಷಕರಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸುತ್ತಿದೆ. ಡ್ರಗ್​ ಹೊಂದಿದ ಆರೋಪದ ಮೇಲೆ ವರುಧಿನಿ ಇನ್ನೂ ಜೈಲಿನಲ್ಲೇ ಇದ್ದಾರೆ. ಅವರನ್ನು ಬಿಡಿಸಲು ಹರ್ಷ ಹಾಗೂ ಭುವಿ ಪ್ರಯತ್ನಪಡುತ್ತಿದ್ದಾರೆ. ಇತ್ತ, ಭುವಿಯ ಹತ್ತಿರ ಐ ಲವ್​​ ಯು ಹೇಳಿಸುತ್ತೇನೆ ಎಂದು ಹರ್ಷ ತಂಗಿ ಬಳಿ ಚಾಲೆಂಜ್​ ಮಾಡಿದ್ದಾರೆ. ಹೀಗಾಗಿ, ಧಾರಾವಾಹಿ ಎಲ್ಲಿಗೆ ಹೋಗಿ ನಿಲ್ಲುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಗಟ್ಟಿಮೇಳ ಧಾರಾವಾಹಿಯ ವೇದಾಂತ್​ ಸಂಭಾವನೆ ಎಷ್ಟು ಗೊತ್ತಾ?

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More