
ಬೆಳಗಾವಿ: ಮದ್ಯ ಸೇವಿಸಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇಲೆ ಮತಗಟ್ಟೆ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಗೋಕಾಕ್ ಕ್ಷೇತ್ರದ ಮತಗಟ್ಟೆ ಸಂಖ್ಯೆ 231ರ ಸಿಬ್ಬಂದಿ ಪ್ರಕಾಶ್ ವೀರಭದ್ರಪ್ಪ ಅಮಾನತಾದವರು.
ಮತಗಟ್ಟೆ ಸಿಬ್ಬಂದಿ ಪ್ರಕಾಶ್ ವೀರಭದ್ರಪ್ಪ ನಾಶಿಪುಡಿ ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮತಗಟ್ಟೆಗೆ ಕುಡಿದು ತೂರಾಡಿಕೊಂಡು ಬಂದಿದ್ದಾರೆ. ತಪಾಸಣೆ ವೇಳೆ ಆಸ್ಪತ್ರೆಯಿಂದ ಪ್ರಕಾಶ್ ಎಸ್ಕೇಪ್ ಆಗಿದ್ದಾರೆ. ಹೀಗಾಗಿ ಚುನಾವಣಾ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದ ಮೇರೆಗೆ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಳ್ಳಿ ಆದೇಶಿಸಿದ್ದಾರೆ.
Published On - 11:12 am, Thu, 5 December 19