ಬೆಂಗಳೂರು: ಇಂದು ಬೆಂಗಳೂರಿನಲ್ಲಿ ಉಪ ಚುನಾವಣೆಯ ಕಾವು ಹೆಚ್ಚಾಗಿದೆ. ಇದರ ಬಿಸಿ ಪುಟಾಣಿ ಮಗುವಿನ ಬರ್ತ್ಡೆಗೂ ತಟ್ಟಿದೆ. ಮಹಾಲಕ್ಷ್ಮಿ ಲೇಔಟ್ನ ಕಿರಣ್ ಗೆ ಇವತ್ತು ಬರ್ತ್ಡೆ ಸಂಭ್ರಮ. ಹುಟ್ಟುಹಬ್ಬದ ದಿನವೇ ಉಪಚುನಾವಣೆಯೂ ಇದ್ದಿದ್ರಿಂದ ಕಿರಣ್ಗೆ ಹೊಸ ಬಟ್ಟೆ ತೊಡಿಸಿ ಮತಗಟ್ಟೆಗೆ ಕರೆದುಕೊಂಡು ಬಂದು ಕಿರಣ್ ಹೆತ್ತವರು ಸಂಭ್ರಮ ಪಟ್ಟಿದ್ದಾರೆ.
ಬರ್ತ್ಡೆ ದಿನ ಅವನಿಗೆ ಮತಗಟ್ಟೆ ತೋರಿಸಿದ್ದೇವೆ. ಒಳ್ಳೆಯ ಪ್ರಜೆಯಾಗಬೇಕು. ಅದಕ್ಕಾಗಿ ಹುಟ್ಟಿದ ಹಬ್ಬವನ್ನು ಈ ರೀತಿ ಸ್ಪೆಷಲ್ ಆಗಿ ಆಚರಣೆ ಮಾಡುತ್ತಿದ್ದೇವೆ ಎಂದು ಪೋಷಕರು ಸಂಭ್ರಮ ವ್ಯಕ್ತಪಡಿಸಿದರು. ಪುಟ್ಟ ಬಾಲ ಕಿರಣ್ ಪಂಚೆ ಉಟ್ಟು ಇಡೀ ಮತಗಟ್ಟೆ ತುಂಬಾ ಆಡವಾಡಿದ. ಈ ರೀತಿ ಹೆತ್ತವರು ಬೇಬಿ ಬರ್ತ್ಡೆ ದಿನ ಪುಟಾಣಿಗೆ ಮತಗಟ್ಟೆ ರೌಂಡ್ ಹೊಡೆಸಿ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದಾರೆ.
Published On - 10:31 am, Thu, 5 December 19