ಕ್ಯೂರಿಯಾಸಿಟಿ ಹುಟ್ಟಿಸಿದ ಹೊಂಬಾಳೆ ಫಿಲಮ್ಸ್, ಇಂದು ಮಧ್ಯಾಹ್ನ ಬಯಲಾಗುತ್ತೆ ಪ್ಯಾನ್ ಇಂಡಿಯಾ ಸೀಕ್ರೆಟ್

ಸ್ಯಾಂಡಲ್​ವುಡ್​ ನಲ್ಲಿ ಸದ್ಯಕ್ಕೆ ನಡೀತಿರೋ ಪ್ರಯತ್ನಗಳು ಪರಭಾಷಾ ಸಿನಿಮಾ ಮಂದಿಯನ್ನ ಬೆರಗು ಗಣ್ಣಿನಿಂದ ನೋಡುವಂತೆ ಮಾಡ್ತಿವೆ. ಅಂದ ಹಾಗೆ ಸದ್ಯ ಹೊಂಬಾಳೆ ಫಿಲಮ್ಸ್ ಹುಟ್ಟಿಸಿರೋ ಕ್ಯೂರಿಯಾಸಿಟಿಗೆ ಸ್ಯಾಂಡಲ್​ವುಡ್​ ನಲ್ಲಿ ಸಂಚಲನ ಶುರುವಾಗಿದೆ. ಹಾಗಾದ್ರೆ ಸದ್ದಿಲ್ಲದೇ ತೆರೆಮರೆಯಲ್ಲಿ ನಡೆದಿರೋ ಪ್ಯಾನ್ ಇಂಡಿಯಾ ಸಿನಿಮಾ ಪ್ಲಾನ್ ಎಂತಹದ್ದು. ಒಂದೇ ಒಂದು ಸಂದೇಶ ಸೃಷ್ಟಿಸಿರೋ ಸಂಚಲನ ಹೇಗಿದೆ ಅನ್ನೊದರ ಡಿಟೇಲ್ಸ್ ಇಲ್ಲಿದೆ ಓದಿ.

ಕ್ಯೂರಿಯಾಸಿಟಿ ಹುಟ್ಟಿಸಿದ ಹೊಂಬಾಳೆ ಫಿಲಮ್ಸ್, ಇಂದು ಮಧ್ಯಾಹ್ನ ಬಯಲಾಗುತ್ತೆ ಪ್ಯಾನ್ ಇಂಡಿಯಾ ಸೀಕ್ರೆಟ್
ಹೊಂಬಾಳೆ ಫಿಲಮ್ಸ್
Ayesha Banu

|

Dec 02, 2020 | 6:37 AM

ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಸದ್ಯ ಪ್ಯಾನ್ ಇಂಡಿಯಾ ಸಿನಿಮಾದ ಬಗ್ಗೆಯೇ ಚರ್ಚೆ ಜೋರಾಗಿದೆ. ಅಂದ ಹಾಗೆ ಇಂತಹದ್ದೊಂದು ಬಿಸಿ ಬಿಸಿ ಚರ್ಚೆ ಶುರುವಾಗಿರೋದಕ್ಕೆ ಕಾರಣ ಹೊಂಬಾಳೆ ಫಿಲಮ್ಸ್ ಬಿಟ್ಟಿರೋ ಒಂದೇ ಒಂದು ಪೋಸ್ಟರ್. ಸದ್ಯ ಡಿಸೆಂಬರ್ 2ರಂದು ಒಂದು ಮಹತ್ವದ ಸುದ್ದಿ ಹೊರ ಹಾಕ್ತಿವಿ ಅಂತ ಹೇಳಿರೋ ವಿಚಾರ ಈಗ ಸಾಕಷ್ಟು ಸದ್ದು ಮಾಡ್ತಿದೆ.

ಈ ಸುದ್ದಿ ತಿಳಿದ ಗಾಂಧಿನಗರದ ಮಂದಿ ಅಭಿಮಾನಿಗಳು ಒಳ ಒಳಗೆ ದೊಡ್ಡ ಲೆಕ್ಕಾಚಾರ ಹಾಕ್ತಿದ್ದಾರೆ. ಒಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡೋ ಪ್ಲಾನ್ ಮಾಡಿರೋ ಕ್ಯೂರಿಯಾಸಿಟಿ ಒಂದಾದ್ರೆ ಈ ಸಿನಿಮಾಗೆ ಆಯ್ಕೆ ಆಗೋ ನಟ ಯಾರು ಅನ್ನೋದು ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಹರಿದಾಡ್ತಿರೋ ಮಾಹಿತಿ ಪ್ರಕಾರ ಕೆಜಿಎಫ್ ನಂತಹ ಸೂಪರ್ ಹಿಟ್ ಸಿನಿಮಾ ಕೊಟ್ಟು ಹಲವು ಭಾಷೆಯ ಸಿನಿಮಾ ಮಂದಿ ಬೆರಗಾಗಿ ನೋಡುವಂತೆ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಇಂದು ಅನೌನ್ಸ್ ಆಗಲಿರೋ ಪ್ಯಾನ್ ಇಂಡಿಯಾ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಾರೆ ಎನ್ನಲಾಗಿದೆ.

ಪ್ಯಾನ್ ಇಂಡಿಯಾ ಸೀಕ್ರೆಟ್​ಗೆ ಇಂದು ತೆರೆ: ಆದ್ರೆ ಕುತೂಹಲದ ಕಣ್ಣುಗಳಿಂದ ಇಂದಿನ ಅಪ್ ಡೇಟ್ಸ್​ಗೆ ಕಾಯ್ತಿರೋದಕ್ಕೆ ಕಾರಣ ಇತ್ತಿಚೆಗಷ್ಟೇ ಪ್ರಶಾಂತ್ ನೀಲ್ ಸದ್ದಿಲ್ಲದೇ ಪ್ರಭಾಸ್ ಹಾಗೂ ಜ್ಯೂ ಎನ್.ಟಿ.ಆರ್. ಅವರನ್ನ ಭೇಟಿ ಮಾಡಿದ್ದಾರೆ ಅನ್ನೋ ಸುದ್ದಿ. ಹೀಗಾಗಿ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳೋದು ಬಾಹುಬಲಿ ಖ್ಯಾತಿಯ ಪ್ರಬಾಸ್​ಗೆ ಅನ್ನೋ ಮಾತು ಹರಿದಾಡ್ತಿದೆ. ಹಾಗಾದ್ರೆ ಇಂದು ಅದಕ್ಕೆ ಅಧಿಕೃತ ಮುದ್ರೆ ಬೀಳುತ್ತಾ ಅಥವಾ ಇದೆಲ್ಲವನ್ನೂ ಬಿಟ್ಟು ಕನ್ನಡದ ನಟನಿಗೆ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಾ ಅನ್ನೋದಕ್ಕೆ ಉತ್ತರ ಸಿಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಇಂದು ಮಧ್ಯಾಹ್ನ ಇಂಡಿಯನ್ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಅಂತ ದೊಡ್ಡ ಕ್ಯೂರಿಯಾಸಿಟಿ ಹುಟ್ಟಿಸಿರೋ ಹೊಂಬಾಳೆ ಫಿಲಮ್ಸ್ ಅದ್ಯಾವ ರೀತಿ ಉತ್ತರ ಕೊಟ್ಟು ಅಭಿಮಾನಿಗಳ ಕ್ಯೂರಿಯಾಸಿಟಿ ಇಮ್ಮಡಿಗೊಳಿಸುತ್ತೆ ಅಥವಾ ಅಂದಕೊಂಡ ನಿರೀಕ್ಷೆಯನ್ನೆಲ್ಲಾ ಉಲ್ಟಾ ಮಾಡಿ ಉಹಾಪೋಹಕ್ಕೆ ಬ್ರೇಕ್ ಹಾಕುತ್ತೆ ಅನ್ನೋ ಕುತೂಹಲಕ್ಕೆ ಬ್ರೇಕ್ ಬೀಳಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada