ಆರ್ಕೆಸ್ಟ್ರಾ ಕಲಾವಿದರ ಪ್ರತಿಭಟನೆಗೆ ಕಿಚ್ಚ ಸುದೀಪ್ ಬೆಂಬಲ; ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಒತ್ತಾಯ
ದೂರದರ್ಶನಗಳು ಇಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾಬಳಗವನ್ನು ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
ಬೆಂಗಳೂರು: ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ವಾದ್ಯಗೋಷ್ಠಿ ಕಲಾವಿದರ ಬೆಂಬಲಕ್ಕೆ ನಟ ಕಿಚ್ಚ ಸುದೀಪ್ ನಿಂತಿದ್ದಾರೆ.
ಆರ್ಕೆಸ್ಟ್ರಾ ಕಲಾವಿದರಿಗೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿರುವ ಸುದೀಪ್, ನಾನು ಪ್ರತಿಭಟನಾ ನಿರತ ವಾದ್ಯಗೋಷ್ಠಿ ಕಲಾವಿದರ ಜತೆಗೆ ಇದ್ದೇನೆ. ಅವರ ಹೋರಾಟಕ್ಕೆ ನನ್ನ ಬೆಂಬಲವಿದೆ. ಅವರಿಗೆ ನಿಮ್ಮಿಂದಾದ ನೆರವು ನೀಡಿ ಎಂದು ನನ್ನ ಸ್ನೇಹಿತರು ಮತ್ತು ಅಭಿಮಾನಿಗಳನ್ನು ವಿನಂತಿಸುತ್ತೇನೆ.
ಹಾಗೆಯೇ.. ಈ ಕಲಾವಿದರ ಪರವಾಗಿ ಸರ್ಕಾರ ಸಹ ಪೂರಕ ಕ್ರಮ ಕೈಗೊಳ್ಳಬೇಕು ಎಂದೂ ಕೋರುತ್ತೇನೆ. ದೂರದರ್ಶನಗಳು ಇಲ್ಲದ ಕಾಲದಿಂದಲೂ ನಮ್ಮನ್ನು ರಂಜಿಸುತ್ತಿರುವ ಈ ಕಲಾ ಬಳಗವನ್ನು ಮುಂದಿನ ತಲೆಮಾರುಗಳ ತನಕ ಕಾಪಾಡಿಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯ ಎಂಬುದು ನನ್ನ ಭಾವನೆ. ನಮ್ಮ ಈ ಪ್ರತಿಭೆಗಳ ಪರವಾಗಿ ನಾವೇ ನಿಲ್ಲದಿದ್ದರೆ, ಇನ್ಯಾರು ನಿಲ್ಲುತ್ತಾರೆ ಅಲ್ಲವೇ? ಎಂದು ಹೇಳಿದ್ದಾರೆ.
???????? a request to all my fnzz, colleagues and Govt. pic.twitter.com/BiiZVldJZH
— Kichcha Sudeepa (@KicchaSudeep) January 18, 2021
ಹಾಡುವವರ ಪಾಡು ಕೇಳೋರು ಯಾರೂ ಇಲ್ಲ.. ಆದ್ರೆ ಹಾಡು ಹಕ್ಕಿಗೂ ಬೇಕಿದೆ ಒಂದು ಗೂಡು, ನೆಲೆ!
Published On - 3:04 pm, Mon, 18 January 21