ನಿಮ್ಮ ಮೇಲೆ ಕ್ರಶ್ ಆಗಿದೆ ಎಂದ ಅಭಿಮಾನಿಗಳಿಗೆ ಮಾಧವನ್‌ ಕೊಟ್ಟ ಉತ್ತರವೇನು ಗೊತ್ತಾ?

ಬಾಲಿವುಡ್‌, ಕಾಲಿವುಡ್‌ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರೋ ನಟ ಮಾಧವನ್, ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಎಬ್ಬಿಸಿದ್ದಾರೆ. ಮಾಧವನ್‌ ಮೇಲೆ ಕ್ರಶ್ ಆಗಿರೋ ಸುದ್ದಿ ಹಾಗೂ ರತನ್‌ ಟಾಟಾ ಸಿನಿಮಾ ಮಾಡ್ತೀರಾ ಅನ್ನೋ ಸುದ್ದಿ ಮ್ಯಾಡಿ ಕೊಟ್ಟ ಉತ್ತರ ಫ್ಯಾನ್ಸ್ ಮತ್ತಷ್ಟು ಫಿದಾ ಆಗುವಂತೆ ಮಾಡಿದೆ.

ನಿಮ್ಮ ಮೇಲೆ ಕ್ರಶ್ ಆಗಿದೆ ಎಂದ ಅಭಿಮಾನಿಗಳಿಗೆ ಮಾಧವನ್‌ ಕೊಟ್ಟ ಉತ್ತರವೇನು ಗೊತ್ತಾ?
ನಟ ಮಾಧವನ್‌
Follow us
|

Updated on: Dec 17, 2020 | 7:47 AM

ಸ್ಟಾರ್‌ಗಳ ಬಗ್ಗೆ ಅವರ ಅಭಿಮಾನಿಗಳಿಗಿರೋ ಕುತೂಹಲೇ ಸ್ಪೆಷಲ್‌ ಆಗಿರುತ್ತೆ. ತಮಗಿರೋ ಅಭಿಮಾನ ವ್ಯಕ್ತಪಡಿಸಿದ್ರೆ ತಮ್ಮ ಫೇವರೆಟ್ ಸ್ಟಾರ್‌ ಹೇಗೆ ರಿಯಾಕ್ಟ್‌ ಮಾಡಬಹುದು ಅನ್ನೋ ಕುತೂಹಲದಲ್ಲೇ ಕಾಯ್ತಿರ್ತಾರೆ. ಒಂದೊಮ್ಮೆ ತಮ್ಮ ನೆಚ್ಚಿನ ನಟನನ್ನ ಹತ್ತಿರದಿಂದ ನೋಡಿದ್ರೆ ಸಾಕು.

ಕೈ ಕುಲುಕಿದ್ರೆ ಸಾಕು. ಅವಕಾಶ ಸಿಕ್ರೆ ಸೆಲ್ಫಿ ತೆಗೆದುಕೊಂಡ್ರೆ ಸಾಕು ಅಂತ ಕನವರಿಸ್ತಿರ್ತಾರೆ. ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಆ್ಯಕ್ಟಿವ್‌ ಆಗ್ತಿರೋ ಸ್ಟಾರ್‌ಗಳು ಕೂಡ ತಮ್ಮ ಅಭಿಮಾನಿಗಳ ಕ್ಯೂರಿಯಾಸಿಟಿಗೆ ಸಾಧ್ಯವಾದ ಉತ್ತರವನ್ನೂ ಕೊಟ್ಟು ಕುತೂಹಲಕ್ಕೆ ಬ್ರೇಕ್‌ ಹಾಕ್ತಿದ್ದಾರೆ. ಈಗ ಆ ಸಾಲಿಗೆ ಮಾಧವನ್‌ ಕೂಡ ಸೇರಿದ್ದಾರೆ.

ನಿಮ್ಮ ಮೇಲೆ ಕ್ರಶ್ ಆಗಿದೆ: ಅಂದ್ಹಾಗೆ ಸದ್ಯ ಇಂತಹ ಚರ್ಚೆಗೆ ಕಾರಣವಾಗಿರೋದು ನಟ ಮಾಧವನ್‌ ಮೇಲೆ ಕ್ರಶ್‌ ಆಗಿದೆ ಅಂತ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿರೋ ಅಭಿಮಾನಿಗಳಿಗೆ ಮಾಧವನ್‌ ಕೊಟ್ಟ ಉತ್ತರ. ಹೌದು.. ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಧವನ್‌ಗೆ ಫ್ಯಾನ್ಸ್ ಒಬ್ಬರು ನಮಗೆ ನಿಮ್ಮ ಮೇಲೆ ಎರಡು ದಶಕಗಳಿಂದ ಕ್ರಶ್‌ ಆಗಿದೆ ಅಂತ ಟ್ವೀಟ್‌ ಮಾಡಿದ್ದಾರೆ. ಅಭಿಮಾನಿಯ ಮಾತು ಕೇಳಿ ಥ್ರಿಲ್‌ ಆಗಿರೋ ಮಾಧವನ್‌ ಯಪ್ಪಾ.. ಅಂತ ಹಾರ್ಟ್‌ ಸಿಂಬಲ್‌ ಹಾಕಿ ಉತ್ತರಿಸಿದ್ದಾರೆ. ಸದ್ಯ ಈ ವಿಷಯ ಫುಲ್‌ ವೈರಲ್ ಆಗಿದೆ.

ಇನ್ನೊಂದೆಡೆ ಮಾರಾ ಸಿನಿಮಾದ ರಿಲೀಸ್‌ ಎದುರು ನೋಡ್ತಿರೋ ಮಾಧವನ್‌ ಉದ್ಯಮಿ ರತನ್‌ ಟಾಟಾ ಬಯೋಪಿಕ್‌ನಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಮಾಧವನ್‌ ನೀವು ರತನ್‌ ಟಾಟಾ ಬಯೋಪಿಕ್‌ನಲ್ಲಿ ನಟಿಸ್ತೀರಾ. ಒಂದು ವೇಳೆ ನೀವು ಆ ಚಿತ್ರ ಮಾಡಿದ್ರೆ ಹಲವರಿಗೆ ಪ್ರೇರಣೆ ಆಗುತ್ತೆ ಅಂತ ಹೇಳಿದ್ದಾರೆ. ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿರೋ ಮಾಧವನ್‌ ದುರಾದೃಷ್ಟವಶಾತ್‌ ಅದು ನಿಜವಲ್ಲ. ಕೆಲವು ಅಭಿಮಾನಿಗಳು ಪೋಸ್ಟರ್‌ ಮಾಡಿದ್ದಾರೆ. ಅಂತಹ ಯಾವುದೇ ಯೋಜನೆ ಚರ್ಚೆಯಾಗಿಲ್ಲ ಅಂತ ಹೇಳೋ ಮೂಲಕ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕಿದ್ದಾರೆ.

ಒಟ್ನಲ್ಲಿ ಸ್ಟಾರ್‌ಗಳು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಪಾಸಿಟಿವ್‌, ನೆಗೆಟಿವ್‌ ಎಲ್ಲಾ ಕಮೆಂಟ್‌ಗಳನ್ನ ಗಮನಿಸ್ತಾ ಸೂಕ್ತ ಉತ್ತರ ಕೊಡ್ತಿರೋ ಹಲವು ಬೆಳವಣಿಗೆಗಳು ಇತ್ತೀಚೆಗೆ ನಡೀತಾನೇ ಇವೆ. ಈ ಸಾಲಿಗೆ ಈಗ ಮಾಧವನ್‌ ಕೂಡ ಸೇರಿದ್ದಾರೆ. ಈ ಮೂಲಕ ನಟ ಮಾಧವನ್‌ ಕೂಡ ಸಖತ್‌ ಆ್ಯಕ್ಟಿವ್‌ ಆಗಿ ಫ್ಯಾನ್ಸ್‌ಗಳ ಸಂಖ್ಯೆ ಕೂಡ ಹೆಚ್ಚು ಮಾಡಿಕೊಳ್ತಿದ್ದಾರೆ.

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ