ಮೊಹರಂ ಅಲೈ ಕುಣಿತದ ವೇಳೆ ವ್ಯಕ್ತಿಯ ಬರ್ಬರ ಕೊಲೆ
ಯಾದಗಿರಿ: ಮೊಹರಂ ಅಲೈ ಕುಣಿತದ ವೇಳೆ ವ್ಯಕ್ತಿಯೊಬ್ಬನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಹೊಸಹಳ್ಳಿ ತಾಂಡದಲ್ಲಿ ಬೆಳಕಿಗೆ ಬಂದಿದೆ. ಬಾಲಪ್ಪ (45) ಕೊಲೆಯಾದ ಹೊಸಹಳ್ಳಿ ತಾಂಡದ ನಿವಾಸಿ. ನಿನ್ನೆ ಅಲೈ ಕುಣಿಯೋಕೆ ತಮಟೆ ತರಲು ಪಕ್ಕದ ಮನೆಗೆ ಹೋದಾಗ ಬಾಲಪ್ಪನನ್ನು ಕೊಲೆಮಾಡಲಾಗಿದೆ. ಐವರು ದುಷ್ಕರ್ಮಿಗಳು ಬಡಿಗೆಯಿಂದ ಹೊಡೆದು ಬಾಲಪ್ಪನ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಇದೀಗ, ಪ್ರಕರಣಕ್ಕೆ ಸಂಬಂಧಿಸಿ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಆ 5ಮಂದಿ ವಿರುದ್ಧ FIR ದಾಖಲಾಗಿದೆ.

ಯಾದಗಿರಿ: ಮೊಹರಂ ಅಲೈ ಕುಣಿತದ ವೇಳೆ ವ್ಯಕ್ತಿಯೊಬ್ಬನನ್ನ ಕೊಲೆಗೈದಿರುವ ಘಟನೆ ಜಿಲ್ಲೆಯ ಗುರುಮಠಕಲ್ ತಾಲೂಕಿನ ಹೊಸಹಳ್ಳಿ ತಾಂಡದಲ್ಲಿ ಬೆಳಕಿಗೆ ಬಂದಿದೆ. ಬಾಲಪ್ಪ (45) ಕೊಲೆಯಾದ ಹೊಸಹಳ್ಳಿ ತಾಂಡದ ನಿವಾಸಿ.
ನಿನ್ನೆ ಅಲೈ ಕುಣಿಯೋಕೆ ತಮಟೆ ತರಲು ಪಕ್ಕದ ಮನೆಗೆ ಹೋದಾಗ ಬಾಲಪ್ಪನನ್ನು ಕೊಲೆಮಾಡಲಾಗಿದೆ. ಐವರು ದುಷ್ಕರ್ಮಿಗಳು ಬಡಿಗೆಯಿಂದ ಹೊಡೆದು ಬಾಲಪ್ಪನ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ. ಇದೀಗ, ಪ್ರಕರಣಕ್ಕೆ ಸಂಬಂಧಿಸಿ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಆ 5ಮಂದಿ ವಿರುದ್ಧ FIR ದಾಖಲಾಗಿದೆ.

Published On - 3:53 pm, Mon, 31 August 20



