BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಎಲ್ಲ ಸ್ಪರ್ಧಿಗಳ ಆಟದ ಸ್ವರೂಪ ಬದಲಾಗುತ್ತಿದೆ. ಈ ಬಾರಿ ಯಾರು ವಿನ್​ ಆಗುತ್ತಾರೆ ಎಂಬ ಲೆಕ್ಕಾಚಾರ ಈಗಲೇ ಶುರು ಆಗಿದೆ.

BBK8: ಲ್ಯಾಗ್​ ಮಂಜು ಬಿಗ್​ ಬಾಸ್​ ವಿನ್ನರ್​; ಶಮಂತ್​ ಶೀಘ್ರವೇ ಔಟ್​! ಹೀಗೆ ಭವಿಷ್ಯ ನುಡಿದಿದ್ದು ಯಾರು?
ಮಂಜು ಪಾವಗಡ - ಶಮಂತ್​ ಬ್ರೋ ಗೌಡ

Updated on: Mar 22, 2021 | 12:11 PM

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಹಣಾಹಣಿ ನಾಲ್ಕನೇ ವಾರಕ್ಕೆ ಮುಂದುವರಿದಿದೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇ ವಾರ ನಟಿ ಗೀತಾ ಭಾರತಿ ಭಟ್​ ಎಲಿಮಿನೇಟ್ ಆದರು. ಸದ್ಯ 14 ಜನರ ನಡುವೆ ಪೈಪೋಟಿ ನಡೆಯುತ್ತಿದೆ. ಎಲ್ಲರೂ ತಮ್ಮದೇ ಸ್ಟ್ರ್ಯಾಟಜಿಗಳ ಮೂಲಕ ಆಟ ಮುಂದುವರಿಸಿದ್ದಾರೆ. ಅಂತಿಮವಾಗಿ ಯಾರು ವಿನ್​ ಆಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ.

ಮುಂದಿನ ವಾರ ಶಮಂತ್​ ಬ್ರೋ ಗೌಡ ಔಟ್​ ಆಗುತ್ತಾರೆ. ಫಿನಾಲೆಯಲ್ಲಿ ಮಂಜು ಪಾವಗಡ ವಿನ್ನರ್​ ಆಗುತ್ತಾರೆ ಎಂದು ಭವಿಷ್ಯ ನುಡಿಯಲಾಗಿದೆ. ಅಂದಹಾಗೆ, ಈ ರೀತಿ ಭವಿಷ್ಯ ನುಡಿದಿರುವುದು ಗೀತಾ ಭಾರತಿ ಭಟ್​! ಮಾ.21ರಂದು ಗೀತಾ ಎಲಿಮಿನೇಟ್​ ಆದರು. ನಂತರ ವೇದಿಕೆಗೆ ಬಂದು ಕಿಚ್ಚ ಸುದೀಪ್​ ಜೊತೆ ಅವರು ಕೆಲವು ನಿಮಿಷ ಮಾತನಾಡಿದರು.

ಈ ವೇಳೆ ಗೀತಾಗೆ ಸುದೀಪ್​ ಒಂದು ಪ್ರಶ್ನೆ ಕೇಳಿದ್ದಾರೆ. ಮುಂದಿನ ವಾರ ಹೊರಬರುವುದು ಯಾರು ಹಾಗೂ ಅಂತಿಮವಾಗಿ ವಿನ್​ ಆಗುವುದು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ, ಶಮಂತ್​ ಔಟ್​ ಆಗುತ್ತಾರೆ, ಮಂಜು ವಿನ್​ ಆಗುತ್ತಾರೆ ಎಂದು ಗೀತಾ ಹೇಳಿದ್ದಾರೆ. ಅವರು ಹೇಳಿದ್ದು ನಿಜವಾಗುತ್ತೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವ ಕೌತುಕ ಬಿಗ್​ ಬಾಸ್​ ವೀಕ್ಷಕರಲ್ಲಿ ಮನೆ ಮಾಡಿದೆ.

ಮೂರು ವಾರಗಳ ಕಾಲ ಪೈಪೋಟಿ ನೀಡಿದ ಗೀತಾ ದೊಡ್ಮನೆಯಲ್ಲಿ ಆಗಾಗ ಕಣ್ಣೀರು ಹಾಕುತ್ತಿದ್ದರು. ಅದು ಕೆಲವರಿಗೆ ಕಿರಿಕಿರಿ ಉಂಟುಮಾಡಿತ್ತು. ಅನೇಕ ವಿಚಾರಗಳಿಗೆ ಗೀತಾ ಸಹಜವಾಗಿಯೇ ಎಮೋಷನಲ್​ ಆಗುತ್ತಿದ್ದರು. ಆದರೆ ಅದನ್ನು ಮೊಸಳೆ ಕಣ್ಣೀರು ಎಂದು ಹೇಳಲಾಯಿತು. ಅದೇನೇ ಇದ್ದರೂ ಎಲಿಮಿನೇಟ್​ ಆದಾಗ ಮಾತ್ರ ಗೀತಾ ನಗುಮೊಗದಿಂದಲೇ ಮನೆಯಿಂದ ಹೊರಬಂದಿದ್ದಾರೆ. ಮೂರನೇ ವಾರದ ಎಲಿಮಿನೇಷನ್​ನಲ್ಲಿ ಗೀತಾ ಮತ್ತು ಶಮಂತ್​ ತಲೆ ಮೇಲೆ ತೂಗುಗತ್ತಿ ಇತ್ತು. ಶಮಂತ್​ ಅವರೇ ಔಟ್​ ಆಗುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ ಅಂತಿಮವಾಗಿ ಗೀತಾಗೆ ಅದೃಷ್ಟ ಕೈಕೊಟ್ಟಿತು.

‘ಬ್ರಹ್ಮಗಂಟು’ ಸೀರಿಯಲ್​ ಮೂಲಕ ಅವರು ರಾಜ್ಯಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಗಳಿಸಿದ್ದರು. ಈಗ ಬಿಗ್​ ಬಾಸ್​ನಿಂದಾಗಿ ಅವರ ಖ್ಯಾತಿ ಇನ್ನಷ್ಟು ಹೆಚ್ಚಿದೆ. ಗೀತಾ ಮುಂದಿನ ಪಯಣ ಹೇಗಿರಲಿದೆ ಎಂಬ ನಿರೀಕ್ಷೆ ಅವರ ಅಭಿಮಾನಿಗಳಿಗಿದೆ.

ಇದನ್ನೂ ಓದಿ: Bigg Boss Kannada 8 Elimination: ಬಿಗ್​ ಬಾಸ್​ ಮನೆಯಿಂದ ಗೀತಾ ಭಾರತಿ ಭಟ್​ ಔಟ್​; ಎಲಿಮಿನೇಷನ್​ಗೆ ಇಲ್ಲಿದೆ ಬಲವಾದ ಕಾರಣ

Bigg Boss Kannada: ಕಾಯಿಲೆ ಬಿದ್ದ ತಂದೆ ಜೊತೆ 2 ವರ್ಷದಿಂದ ಮಾತನಾಡಿಲ್ಲ ಬಿಗ್​ ಬಾಸ್​ ರಾಜೀವ್​! ಕಾರಣ ಏನು?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us