ಯಾದಗಿರಿ: ಕ್ವಾರಂಟೈನ್ ಕೇಂದ್ರದ ಬೀಗ ಒಡೆದು ವಲಸೆ ಕಾರ್ಮಿಕರು ಹೊರಬಂದ ಘಟನೆ ಶೆಟ್ಟಿಗೇರ ಬಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕ್ವಾರಂಟೈನ್ ಕೇಂದ್ರದಲ್ಲಿ ನಡೆದಿದೆ.
ಮಹಾರಾಷ್ಟ್ರದಿಂದ ಬಂದಿದ್ದ 206 ಜನರಿಗೆ ಕ್ವಾರಂಟೈನ್ ಮಾಡಲಾಗಿತ್ತು. ಕ್ವಾರಂಟೈನ್ ಅವಧಿ ಮುಗಿದ್ರೂ ಮನೆಗೆ ಕಳಿಸಿಲ್ಲ ಎಂದು ಆರೋಪಿಸಿ ಕೇಂದ್ರದ ಗೇಟಿನ ಬೀಗ ಮುರಿದು ಹೊರಬರಲು ಯತ್ನಿಸಿದ್ದಾರೆ. ತಮಗೆ ಮನೆಗೆ ಹೋಗಲು ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ವಲಸೆ ಕಾರ್ಮಿಕರ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡು ಹೋಗಿ 15 ದಿನ ಕಳೆದ್ರು ರಿಪೋರ್ಟ್ ನೀಡಿಲ್ಲ. ಹೀಗಾಗಿ ಕ್ವಾರಂಟೈನ್ ಅವಧಿ ಮುಗಿದರೂ ಕಾರ್ಮಿಕರನ್ನ ಮನೆಗೆ ಕಳುಹಿಸಲಾಗಿಲ್ಲ. ಅದಕ್ಕೆ ರೊಚ್ಚಿಗೆದ್ದು ಮನೆಗೆ ಹೋಗಲು ಬಿಡಿ ಅಂತಾ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಥಳದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಇಲ್ಲದೆ ಇದಿದ್ದರೆ ಕಾರ್ಮಿಕರು ತಮ್ಮ ಮನೆಗಳಿಗೆ ಹೋಗೆ ಬಿಡ್ತಾಯಿದ್ರು.