ಕಾಂಪೌಂಡ್ ಒಳಗಿದ್ದ 8 ಬೈಕ್​ಗಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಖದೀಮನ ದುಷ್ಕೃತ್ಯ CCTVಯಲ್ಲಿ ಸೆರೆ

ಮನೆ ಮುಂದಿದ್ದ 8 ಬೈಕ್​ಗಳು ಸುಟ್ಟು ಕರಕಲಾಗಿವೆ. ಬೆಸ್ಕಾಂ ಗುತ್ತಿಗೆದಾರ ಶಿವಕುಮಾರ್ ಎಂಬುವರ ಮನೆಯಲ್ಲಿ ಘಟನೆ ನಡೆದಿದೆ.

  • TV9 Web Team
  • Published On - 10:31 AM, 18 Jan 2021
ಕಾಂಪೌಂಡ್ ಒಳಗಿದ್ದ 8 ಬೈಕ್​ಗಳಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ಖದೀಮನ ದುಷ್ಕೃತ್ಯ CCTVಯಲ್ಲಿ ಸೆರೆ
ಕಾರು ಮತ್ತು ಬೈಕಿಗೆ ಬೆಂಕಿ ಹಚ್ಚುತ್ತಿರುವ ಕಿಡಿಗೇಡಿ

ದೊಡ್ಡಬಳ್ಳಾಪುರ: ಮಧ್ಯರಾತ್ರಿ ದುಷ್ಕರ್ಮಿಯೊಬ್ಬ ಕಾಂಪೌಂಡ್​ ಒಳಗೆ ನಿಲ್ಲಿಸಿದ್ದ ಬೈಕ್​ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ದೊಡ್ಡಬಳ್ಳಾಪುರ ನಗರದ ಶ್ರೀನಗರದಲ್ಲಿ ನಡೆದಿದೆ.

ಜನವರಿ 12 ರಂದು ನಡೆದಿರುವ ಘಟನೆ ‌ತಡವಾಗಿ ಬೆಳಕಿಗೆ ಬಂದಿದ್ದು, ದುಷ್ಕರ್ಮಿಯ ಕುಕೃತ್ಯಕ್ಕೆ ಮನೆ ಮುಂದಿದ್ದ 8 ಬೈಕ್​ಗಳು ಸುಟ್ಟು ಕರಕಲಾಗಿವೆ. ಬೆಸ್ಕಾಂ ಗುತ್ತಿಗೆದಾರ ಶಿವಕುಮಾರ್ ಎಂಬುವರ ಮನೆ ಮುಂದೆ ಘಟನೆ ನಡೆದಿದೆ. ಮೊದಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ಕುಟುಂಬಸ್ಥರು ಅಭಿಪ್ರಾಯಪಟ್ಟಿದ್ದರು. ಆದ್ರೆ ಮನೆಯ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಖದೀಮನ ದುಷ್ಕೃತ್ಯ ಬೆಳಕಿಗೆ ಬಂದಿದೆ.

ಬೈಕ್​ನಲ್ಲಿ ಬಂದಿದ್ದ ಕಿಡಿಗೇಡಿ ಬೈಕ್ ಮತ್ತು ಕಾರಿನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದಾನೆ. ಕೃತ್ಯದ ವಿರುದ್ದ ಮನೆಯ ಮಾಲೀಕ ಶಿವಕುಮಾರ್ ಅವರಿಂದ ದೊಡ್ಡಬಳ್ಳಾಪುರ ಪೊಲೀಸರಿಗೆ ದೂರು ನೀಡಲಾಗಿದೆ. ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಅವಘಡ: 3 ಎಮ್ಮೆಗಳ ಸಜೀವ ದಹನ