6 ಅಡಿ ಅಂತರ ಕಾಯ್ದುಕೊಂಡರೂ ಕೊರೊನಾ ಅಪಾಯ ತಪ್ಪಿದ್ದಲ್ಲ: ಎಂ​ಐಟಿ ಅಧ್ಯಯನ

ಆರು ಅಡಿಗಳ ಅಂತರ ನಮಗೆ ನೆನಪಿಡಲು ಸುಲಭ ಮತ್ತು ಅದನ್ನು ಜಾರಿಯಲ್ಲಿಟ್ಟಿಕೊಳ್ಳಲು ಅಷ್ಟೇನೂ ಕಷ್ಟವಾಗದಾದರೂ ಹೊಸ ಅಧ್ಯಯನ ಈ ನಿಯಮ ಪ್ರಯೋಜನಕಾರಿ ಅಲ್ಲವೆಂದು ಹೇಳುತ್ತಿದೆ.

6 ಅಡಿ ಅಂತರ ಕಾಯ್ದುಕೊಂಡರೂ ಕೊರೊನಾ ಅಪಾಯ ತಪ್ಪಿದ್ದಲ್ಲ: ಎಂ​ಐಟಿ ಅಧ್ಯಯನ
ಸಾಮಾಜಿಕ ಅಂತರ ಕಾಯ್ದುಕೊಂಡಿರುವುದು
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Apr 27, 2021 | 9:42 AM

ದೋ ಗಜ್ ಕೀ ದೂರಿ (ಆರು ಆಡಿಗಳ ಅಂತರ) ಕಾಯ್ದುಕೊಂಡರೆ ಕೊವಿಡ್-19 ಪಿಡುಗಿನಿಂದ ಸೇಫ್ ಅಂತ ನೀವು ಅಂದುಕೊಂಡಿದ್ದರೆ ದಯವಿಟ್ಟು ನಿಮ್ಮ ಅಭಿಪ್ರಾಯ ಬದಲಿಸಿಕೊಳ್ಳಿ. ಯಾಕೆಂದರೆ ಒಳಾಂಗಣಗಳಲ್ಲಿ ನೀವು 6 ಅಡಿ ಅಂತರ ಕಾಯ್ದುಕೊಳ್ಳುವುದು ಅಥವಾ 60 ಅಡಿ ದೂರ ಇರುವುದು ಎರಡೂ ಒಂದೇ ಎಂದು ಮ್ಯಾಸಚೂಸೆಟ್ಸ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ ನಡೆಸಿದ ಅಧ್ಯಯನವೊಂದರಿಂದ ಪತ್ತೆಯಾಗಿದೆ. 6 ಅಡಿ ಅಂತರದ ನಿಯಮ; ಕೊರೊನಾ ವೈರಸ್ ಒಳಾಂಗಣ ಸ್ಥಳಗಳಲ್ಲಿ ಹೇಗೆ ಸರಿದಾಡುತ್ತದೆನ್ನುವುದರ ಬಗ್ಗೆ ಹಿಂದೆ ನಡೆಸಿದ ಅಧ್ಯಯನಗಳ ಮೇಲೆ ಆಧಾರಗೊಂಡಿದೆ ಎಂದು ಎಂಐಟಿ ನಡೆಸಿರುವ ಸಂಶೋಧನೆ ತಿಳಿಸುತ್ತದೆ.

ಎಂ​ಐಟಿಯ ವಿಜ್ಞಾನಿಗಳ ಪ್ರಕಾರ, ಇತರೆ ಆಯಾಮಗಳು ಅಂದರೆ ಸ್ಥಳದಲ್ಲಿರುವ ಜನರ ಸಂಖ್ಯೆ, ಅವರು ಮಾಸ್ಕ್ ಧರಿಸಿದ್ದಾರೆಯೇ, ಅವರೇನು ಮಾಡುತ್ತಿದ್ದರು ಮತ್ತು ಆ ಸ್ಥಳದಲ್ಲಿ ಗಾಳಿ-ಬೆಳಕಿನ ಪ್ರಮಾಣ ಮುಂತಾದವುಗಳು ಬಹಳ ಮುಖ್ಯವಾಗಿರುತ್ತವೆ.

ವಿಶ್ವದೆಲ್ಲೆಡೆ 6-ಅಡಿ ನಿಯಮ ಜಾರಿಯಲ್ಲಿದೆ ಆರು ಅಡಿಗಳ ಅಂತರ ನಿಯಮವನ್ನು ವಿಶ್ವದೆಲ್ಲೆಡೆ ಬೇರೆ ಬೇರೆ ಆಯಾಮಗಳಲ್ಲಿ ಬಳಸಲಾಗುತ್ತಿದೆ. ಒಳಾಂಗಣವಿರಲಿ ಅಥವಾ ಹೊರಾಂಗಣ-6 ಅಡಿಗಳ ಆಂತರವಿರಬೇಕೆಂದು ಸಿಡಿಸಿ (ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್) ಸಲಹೆ ನೀಡಿದರೆ, ಬ್ರಿಟನ್​ನಲ್ಲಿ 2 ಮೀಟರ್​ಗಳ ಅಂತರವನ್ನು ಪ್ರತಿಪಾದಿಸುತ್ತದೆ. ಯೂರೋಪಿನ ಅನೇಕ ಭಾಗಗಳಲ್ಲಿ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸಹ ಇದೇ ಅಂತರ ಕಾಯ್ದುಕೊಳ್ಳಬೇಕೆಂದು ಹೇಳಿತ್ತು.

ಆರು ಅಡಿಗಳ ಅಂತರ ನಮಗೆ ನೆನಪಿಡಲು ಸುಲಭ ಮತ್ತು ಅದನ್ನು ಜಾರಿಯಲ್ಲಿಟ್ಟಿಕೊಳ್ಳಲು ಅಷ್ಟೇನೂ ಕಷ್ಟವಾಗದಾದರೂ ಹೊಸ ಅಧ್ಯಯನ ಈ ನಿಯಮ ಪ್ರಯೋಜನಕಾರಿ ಅಲ್ಲವೆಂದು ಹೇಳುತ್ತಿದೆ. ಒಳಾಂಗಣಗಳಲ್ಲಿ ವೈಯಕ್ತಿಕ ಲೆಕ್ಕಾಚಾರದ ಆಧಾರದಲ್ಲಿ ಅಂತರ ಕಾಯ್ದುಕೊಳ್ಳಬೇಕೆಂದು ಎಂಐಟಿ ಅಧ್ಯಯನ ಹೇಳುತ್ತದೆ.

ಅಂತರದ ಪ್ರಶ್ನೆ ಉದ್ಭವಿಸದು! ಕೆಲವು ಪ್ರಕರಣಗಳಲ್ಲಿ 6 ಅಡಿ ಮತ್ತು 60 ಅಡಿ ನಡುವೆ ಹೆಚ್ಚಿನ ವ್ಯತ್ಯಾಸವೇನೂ ಇರದು ಎಂದು ಎಂ​ಐಟಿಯಲ್ಲಿ ಗಣಿತಶಾಸ್ತ್ರದ ಪ್ರೊಫೆಸರ್​ಗಳಾಗಿರುವ ಮತ್ತು ಅಧ್ಯಯನದಲ್ಲಿ ಭಾಗಿಯಾಗಿದ್ದ ಮಾರ್ಕ್ ಬಾಜಂಟ್ ಮತ್ತು ಜಾನ್ ಬುಷ್ ಹೇಳುತ್ತಾರೆ. ಒಂದು ಕೋಣೆಯಲ್ಲಿ ಸೋಂಕಿತನೊಬ್ಬನ ಪ್ರವೇಶವಾದ ನಂತರ ಸೋಂಕಿತನಲ್ಲದ ವ್ಯಕ್ತಿಗೆ ಅಪಾಯದ ಹಂತ ತಲುಪಲು ಎಷ್ಟು ಸಮಯ ಬೇಕಾಗುತ್ತದೆ ಎನ್ನುವುದನ್ನು ಅಳೆಯಲು ಅವರು ಒಂದು ಸೂತ್ರವನ್ನು ರೂಪಿಸಿದ್ದಾರೆ. ವೈಜ್ಞಾನಿಕ ಗ್ರಹಿಕೆಯು ಗಾಳಿಯಲ್ಲಿ ಕೊರೊನಾ ವೈರಸ್ ಹರಡುವಿಕೆಯ ವ್ಯಾಖ್ಯಾನಗಳಿಗೆ ಸವಾಲೊಡ್ಡುತ್ತಿದೆ ಮತ್ತು ಹರಡುವಿಕೆಯನ್ನು ತಗ್ಗಿಸಲು ವಿಧಾನಗಳನ್ನು ರೂಪಿಸುತ್ತಿದೆ.

ಕೊವಿಡ್-19 ಮಹಾಮಾರಿ ಹರಡಲು ಶುರುಮಾಡಿದ ಆರಂಭದ ದಿನಗಳಲ್ಲಿ ಸೋಂಕಿತನೊಬ್ಬ ಕೆಮ್ಮಿದಾಗ, ಸೀನಿದಾಗ, ಇಲ್ಲವೇ ಉಗುಳಿದಾಗ ವೈರಸ್ ಹರಡುತ್ತದೆ ಅಂತ ಭಾವಿಸಲಾಗಿತ್ತು. ಆದರೆ ಹೊಸ ಅಧ್ಯಯನದ ಪ್ರಕಾರ ವೈರಸ್ ವಾತಾವರಣದಲ್ಲಿರುವ ದ್ರವಕಣಗಲ್ಲಿ ತೇಲಾಡುತ್ತಾ ಮೊದಲಿನ ವೈರಸ್​ಗಿಂತ ವೇಗವಾಗಿ ಚಲಿಸುತ್ತದೆ. ಇದೇ ಆಧಾರದ ಮೇಲೆ ಎಂ​ಐಟಿ ಸಂಶೋಧಕರು, ರೂಮಿನಲ್ಲಿರುವ ಜನರು ಇರುವ ಪರಿಣಾಮ, ಅವರ ವರ್ತನೆ ಮತ್ತು ಗಾಳಿಯಲ್ಲಿ ಎಷ್ಟು ಹೊತ್ತಿನವರಗೆ ವೈರಸ್ ಓಲಾಡುತ್ತದೆ ಮೊದಲಾದ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡರು. ಪ್ರಶಾಂತವಾದ ವಾತಾವರಣವೊಂದರಲ್ಲಿ ಈ ಕಣಗಳು ನಿಧಾನವಾಗಿ ನೆಲಕ್ಕೆ ಬೀಳುವುದನ್ನು ಅವರು ಗಮನಿಸಿದ್ದಾರೆ.

ಆದರೆ, ಗಜಿಬಿಜಿಯಾಗಿರುವ ರೂಮಿನ ವಾತಾವರಣದಲ್ಲಿ ಅಂದರೆ ಅಲ್ಲಿರುವ ಜನ, ಮಾತಾಡುತ್ತಾ, ತಿನ್ನುತ್ತಾ, ಕುಡಿಯುತ್ತಾ, ಹಾಡುತ್ತಾ, ಸೀನುತ್ತಾ ಇರುವಾಗ ದ್ರವದ ಕಣಗಳು ಗಾಳಿಯಲ್ಲೇ ನೇತಾಡುತ್ತಿದ್ದವು ಮತ್ತು ರೂಮಿನ ಸುತ್ತ ಹರಡಿದವು ಎಂದು ಸಂಶೋಧಕರು ಹೇಳುತ್ತಾರೆ. ಕಿಟಕಿ ಅಥವಾ ಫಿಲ್ಟ್ರೇಶನ್ ಮೂಲಕ ವೈರಸ್​ಯುಕ್ತ ಕಣಗಳನ್ನು ಗಾಳಿಯಲ್ಲಿ ಸುತ್ತಾಡದಂತೆ ಹೊರ ಹಾಕಬಹುದೆಂದು ಅವರು ಹೇಳುತ್ತಾರೆ.

ವೆಬ್​ಸೈಟ್​ ರೂಪಿಸಲಾಗಿದೆ​ ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಮಾದರಿ ಹೇಗೆ ಕೆಲಸ ಮಾಡುತ್ತದೆ ಎಂದು ವಿವರಿಸಲು ಒಂದು ವೆಬ್​ಸೈಟನ್ನು ರೂಪಿಸಲಾಗಿದೆ. ಉದಾಹರಣೆಗೆ ಹೇಳುವುದಾದರೆ, ಸೋಂಕಿತನೊಬ್ಬ ಯಾರೊಬ್ಬರೂ ಮಾಸ್ಕ್ ಧರಿಸದ ಮತ್ತು ಮಾತಿನಲ್ಲಿ ತೊಡಗಿರುವ 25 ಜನರ ಕ್ಲಾಸ್​ರೂಮೊಂದರಲ್ಲಿ ಪ್ರವೇಶಿಸಿದರೆ ಅವರಲ್ಲಿ ಪ್ರತಿಯೊಬ್ಬನೂ ಸೋಂಕಿತನಾಗುವ ಸಾಧ್ಯತೆಯಿರುತ್ತದೆ ಎಂದು ವೆಬ್​ಸೈಟ್​ ಹೇಳುತ್ತದೆ. ಅವರು 6 ಅಡಿ ಅಂತರದ ನಿಯಮವನ್ನು ಕಾಯ್ದುಕೊಂಡಿದ್ದಾರೆಯೇ ಇಲ್ಲವೇ ಎನ್ನುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ. ಅದಕ್ಕೆ ತದ್ವಿರುದ್ಧವಾಗಿ ಎಲ್ಲ 25 ಜನ ಮಾಸ್ಕ ಧರಿಸಿದ್ದರೆ ಸುಮಾರು 20 ಗಂಟೆಗಳ ಕಾಲ ಅಲ್ಲಿನ ಗಾಳಿ ಉಸಿರಾಡಲು ಸುರಕ್ಷಿತವಾಗಿರುತ್ತದೆ.

ಅವರು ಮಾಸ್ಕ್ ಧರಿಸದೆ ಹಾಡು ಹೇಳುತ್ತಿದ್ದರೆ, ಕೇವಲ ಮೂರೇ ನಿಮಿಷಗಳಲ್ಲಿ ಅವರು ಸೋಂಕಿಗೊಳಗಾಗುವ ಅಪಾಯವಿರುತ್ತದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು, 6-ಅಡಿಗಳ ಆಂತರ ಸುರಕ್ಷಿತವಲ್ಲ ಎನ್ನುವುದನ್ನು ಮನಗಾಣಲಾರಂಭಿಸಿವೆ. ಇಲ್ಲಿ ನೆನಪಿಸಿಕೊಳ್ಳಬೇಕಾದ ಅಂಶವೆಂದರೆ, ಕೆ-12 ಶಾಲೆಗಳಲ್ಲಿ 3 ಅಡಿಗಳ ಅಂತರ ಸಾಕೆಂದು ಸಿಡಿಸಿ ಹೇಳಿತ್ತು. ಹಾಗೆಯೇ, ತಜ್ಞರು ಜನರಿಂದ 6-ಅಡಿ ಆಂತರ ಕಾಯ್ದುಕೊಳ್ಳುವುದು ಸಾಧ್ಯವಿದ್ದರೆ, ಮಾಸ್ಕ್ ಧರಿಸುವ ಅಗತ್ಯವಿಲ್ಲ ಅಂತ ಹೇಳಿದ್ದರು.

ಇದನ್ನೂ ಓದಿ: Karnataka Lockdown Guidelines: ಕೊರೊನಾ ಕರ್ಫ್ಯೂ ಹೊಸ ಮಾರ್ಗಸೂಚಿ ಬಿಡುಗಡೆ: ಏನಿರುತ್ತೆ? ಏನಿರಲ್ಲ? ಯಾವುದಕ್ಕೆ ಅನುಮತಿ? ಇಲ್ಲಿದೆ ಮಾಹಿತಿ

ಇದನ್ನೂ ಓದಿ: #KarnatakaLockdown: ‘ಉಪಚುನಾವಣೆ ಮುಗೀತಾ ಮುಖ್ಯಮಂತ್ರಿಗಳೇ’: ಲಾಕ್​ಡೌನ್ ಘೋಷಣೆಯ ಬೆನ್ನಲ್ಲೇ ಟ್ವಿಟರ್​ನಲ್ಲಿ ಮೀಮ್​ಗಳ ಸುರಿಮಳೆ

Published On - 10:36 pm, Mon, 26 April 21

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ