AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಸಿಕೆ ಬೆಲೆ ಕಡಿಮೆ ಮಾಡಲು ಉತ್ಪಾದಕರಿಗೆ ಕೇಂದ್ರ ಸರ್ಕಾರ ಸೂಚನೆ

ಕೊವಿಡ್​ ಲಸಿಕೆಯ ದರ ಜಾಸ್ತಿ ಆಯ್ತು ಎಂಬ ಟೀಕೆಯ ಮಧ್ಯೆ ಕೊವಿಡ್​ ಲಸಿಕೆ ಉತ್ಪಾದನೆ ಮಾಡುವ ಎರಡು ಕಂಪೆನಿಗಳಿಗೆ ಕೇಂದ್ರ ಸರಕಾರ ಇಂದು ಲಸಿಕೆಯ ದರ ಕಡಿಮೆ ಮಾಡುವಂತೆ ಕೋರಿದೆ.

ಕೊವಿಡ್ ಲಸಿಕೆ ಬೆಲೆ ಕಡಿಮೆ ಮಾಡಲು ಉತ್ಪಾದಕರಿಗೆ ಕೇಂದ್ರ ಸರ್ಕಾರ ಸೂಚನೆ
ಪ್ರಾತಿನಿಧಿಕ ಚಿತ್ರ
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Apr 26, 2021 | 10:23 PM

Share

ದೆಹಲಿ: ಕೊವಿಡ್​ ​ ಲಸಿಕೆಯ ದರ ಹೆಚ್ಚಾಯಿತೆಂದು ಹಲವಾರು ವರ್ಗದ ಜನ ಹೇಳಿರುವ ಹಿನ್ನೆಲೆಯಲ್ಲಿ,  ಮೇ 1 ರಿಂದ ರಾಷ್ಟ್ರವ್ಯಾಪಿ ಜಾರಿಗೊಳ್ಳಲಿರುವ ಮೂರನೇ ಹಂತದ ಕೊವಿಡ್​ ಲಸಿಕಾ ಅಭಿಯಾನಕ್ಕೆ ಮುಂಚಿತವಾಗಿ ಕೋವಿಡ್ -19 ವಿರುದ್ಧದ ಲಸಿಕೆಗಳ ಬೆಲೆಯನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಸೋಮವಾರ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್‌ಗೆ ಸೂಚಿಸಿದೆ.  ಮೇ 1 ರಿಂದ 18 ವರ್ಷ ವಯಸ್ಸಿನವರಿಗೆ ಡೋಸೇಜ್ ನೀಡಲಾಗುತ್ತದೆ.

ಎಸ್‌ಐಐ ಮತ್ತು ಬ್ರಿಟಿಷ್  ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ಕೋವಿಶೀಲ್ಡ್ ಅನ್ನು ಉತ್ಪಾದಿಸುತ್ತಿದ್ದರೆ , ಭಾರತ್ ಬಯೋಟೆಕ್ ಕಂಪೆನಿಯು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಕೊವಾಕ್ಸಿನ್ ಅನ್ನು ಉತ್ಪಾದಿಸುತ್ತಿದೆ. ಎರಡೂ ಲಸಿಕೆಗಳಿಗೆ ಈ ವರ್ಷದ ಜನವರಿ 3 ರಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಜಿಸಿಐ) ತುರ್ತು ಬಳಕೆಗಾಗಿ ಅನುಮೋದನೆ ನೀಡಿತು.

ಲಸಿಕೆ ಅಭಿಯಾನದ ಮೂರನೇ ಹಂತಕ್ಕಿಂತ ಮುಂಚಿತವಾಗಿ ಲಸಿಕೆ ಬೆಲೆಗಳ ಬಗ್ಗೆ ಸತತವಾಗಿ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಈ ಸೂಚನೆ ಮಹತ್ವ ಪಡೆದಿದೆ. ಮೂರನೇ ಹಂತದ ಅಡಿಯಲ್ಲಿ, ಲಸಿಕೆ ತಯಾರಕರು ತಮ್ಮ ಮಾಸಿಕ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ಪ್ರಮಾಣವನ್ನು ಶೇ 50 ರಷ್ಟು ಕೇಂದ್ರ ಸರ್ಕಾರಕ್ಕೆ ಪೂರೈಸುತ್ತಾರೆ ಮತ್ತು ಉಳಿದ ಶೇ 50ರಷ್ಟು ಪ್ರಮಾಣವನ್ನು ರಾಜ್ಯಗಳಿಗೆ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಪೂರೈಸಲು ಅವಕಾಶವಿದೆ.

ಎಸ್‌ಐಐನ ಕೋವಿಶೀಲ್ಡ್ ಅನ್ನು ಪ್ರತಿ ಡೋಸ್‌ಗೆ ₹ 400 ರಂತೆ ರಾಜ್ಯಗಳಿಗೆ ಮಾರಾಟ ಮಾಡಲಾಗುವುದು ಮತ್ತು ಖಾಸಗಿ ಆಸ್ಪತ್ರೆಗಳು ಪ್ರತಿ ಡೋಸ್‌ಗೆ ₹ 600 ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.  ಕೊವಾಕ್ಸಿನ್ ಅನ್ನು ಪ್ರತಿ ಸರ್ಕಾರಿ ಆಸ್ಪತ್ರೆಗಳಿಗೆ ರೂ. 600 ಮತ್ತು ಖಾಸಗಿ ಆಸ್ಪತ್ರೆಗಳಿಗೆ 1,200 ಕ್ಕೆ  ಮಾರಾಟ ಮಾಡಲು ನಿರ್ಧರಿಸಿದೆ. ಆದಾಗ್ಯೂ, ಎರಡೂ ಲಸಿಕೆಗಳನ್ನು  ಕೇಂದ್ರ ಸರ್ಕಾರವು ಪ್ರತಿ ಡೋಸ್‌ಗೆ ₹ 150 ದರದಲ್ಲಿ ಖರೀದಿಸುತ್ತದೆ. ಕೇಂದ್ರ ಸರಕಾರದ ಈ ಕೋರಿಕೆಗೆ ಎರಡೂ ಸಂಸ್ಥೆಗಳು ಇನ್ನು ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಕೊರೊನಾ ಮೊದಲ ಅಲೆಗಿಂತ ಈಗ ಆಕ್ಸಿಜನ್​ ಬೇಡಿಕೆ ಜಾಸ್ತಿ ಆಗಿದ್ದು ಏಕೆ? ಇಲ್ಲಿದೆ ಉತ್ತರ

(Central government asks Serum Institute and Bharat Biotech to reduce the prices of Covid 19 vaccine)

ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ