AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಿತರ ಅಕೌಂಟ್​ನಿಂದ ನೆಟ್​ಫ್ಲಿಕ್ಸ್​ ನೋಡುತ್ತಿರುವವರಿಗೆ ಕಹಿ ಸುದ್ದಿ; ಶೀಘ್ರದಲ್ಲೇ ಬರಲಿದೆ ಹೊಸ ನಿಯಮ

ನೆಟ್​ಫ್ಲಿಕ್ಸ್​ ನೀಡಿರುವ ಮಾಹಿತಿ ಪ್ರಕಾರ ಅತಿ ಶೀಘ್ರದಲ್ಲೇ ಇನ್ನೊಬ್ಬರ ಅಕೌಂಡ್​ ಬಳಸುವ ಪದ್ಧತಿಗೆ ಕಡಿವಾಣ ಬೀಳಲಿದೆ. ದೂರದಲ್ಲೆಲ್ಲೋ ಇರುವ ಸ್ನೇಹಿತರ ನೆಟ್​ಫ್ಲಿಕ್ಸ್​ ಖಾತೆ ಬಳಸುವುದನ್ನು ತಡೆಯಲು ಈಗಾಗಲೇ ಪರೀಕ್ಷಾರ್ಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಲವೊಂದಷ್ಟು ನಿಯಮಗಳ ಮೂಲಕ ಅದನ್ನು ಆದಷ್ಟು ಬೇಗ ಜಾರಿಗೊಳಿಸುವ ಚಿಂತನೆಯಲ್ಲಿ ಸಂಸ್ಥೆ ಇದೆ.

ಸ್ನೇಹಿತರ ಅಕೌಂಟ್​ನಿಂದ ನೆಟ್​ಫ್ಲಿಕ್ಸ್​ ನೋಡುತ್ತಿರುವವರಿಗೆ ಕಹಿ ಸುದ್ದಿ; ಶೀಘ್ರದಲ್ಲೇ ಬರಲಿದೆ ಹೊಸ ನಿಯಮ
ನೆಟ್​​ಫ್ಲಿಕ್ಸ್​
Skanda
| Updated By: guruganesh bhat|

Updated on: Mar 12, 2021 | 12:11 PM

Share

ದೇಶದಲ್ಲಿ ತಂತ್ರಜ್ಞಾನ ಅಭಿವೃದ್ಧಿಯಾದಂತೆ, ಇಂಟರ್ನೆಟ್​ ಕ್ರಾಂತಿಯಾದಂತೆ ಮನರಂಜನೆಯ ವ್ಯಾಖ್ಯಾನ ಬದಲಾಗಿದೆ. ಮನರಂಜನೆಗಾಗಿ ಟಿವಿ, ರೇಡಿಯೋ, ಚಿತ್ರಮಂದಿರಗಳತ್ತ ಹೊರಳುತ್ತಿದ್ದ ಕಣ್ಣುಗಳನ್ನು ಅಂಗೈಯಷ್ಟು ಅಗಲದ ಮೊಬೈಲುಗಳು ಹಿಡಿದಿಟ್ಟುಕೊಂಡಿವೆ. ಕಳೆದ ವರ್ಷದ ಕೊರೊನಾ ಲಾಕ್​ಡೌನ್​ ಅವಧಿಯಲ್ಲಂತೂ ಜನರು ಇನ್ನಷ್ಟು ಪರಿಣಾಮಕಾರಿಯಾಗಿ ಇವುಗಳ ಬಳಕೆ ಆರಂಭಿಸಿದ್ದಾರೆ. ನೆಟ್​ಫ್ಲಿಕ್ಸ್​, ಅಮೇಜಾನ್​ ಪ್ರೈಂ, ಡಿಸ್ನಿ ಹಾಟ್​ಸ್ಟಾರ್​ನಂತಹ ಅಪ್ಲಿಕೇಶನ್​ಗಳಿಗೆ ಒಗ್ಗಿಕೊಂಡಿದ್ದಾರೆ. ಆದರೆ, ಆ ಪೈಕಿ ಅನೇಕ ಜನರು ಹಣ ಕೊಟ್ಟು ಸ್ವಂತ ಖಾತೆಯಲ್ಲಿ ವೀಕ್ಷಿಸುವುದಕ್ಕಿಂತ ಹೆಚ್ಚಾಗಿ ಸ್ನೇಹಿತರ ಖಾತೆಯನ್ನೇ ಬಳಸುತ್ತಾರೆ. ಇದೀಗ ಹೀಗೆ ಇನ್ನೊಬ್ಬರ ಅಕೌಂಟ್​ ಮೇಲೆ ಅವಲಂಬಿತರಾದವರಿಗೆ ಶಾಕ್​ ಕೊಡಲು ನೆಟ್​ಫ್ಲಿಕ್ಸ್​ ಸಿದ್ಧವಾಗುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.

ನೆಟ್​ಫ್ಲಿಕ್ಸ್​ ನೀಡಿರುವ ಮಾಹಿತಿ ಪ್ರಕಾರ ಅತಿ ಶೀಘ್ರದಲ್ಲೇ ಇನ್ನೊಬ್ಬರ ಅಕೌಂಟ್​ ಬಳಸುವ ಪದ್ಧತಿಗೆ ಕಡಿವಾಣ ಬೀಳಲಿದೆ. ದೂರದಲ್ಲೆಲ್ಲೋ ಇರುವ ಸ್ನೇಹಿತರ ನೆಟ್​ಫ್ಲಿಕ್ಸ್​ ಖಾತೆ ಬಳಸುವುದನ್ನು ತಡೆಯಲು ಈಗಾಗಲೇ ಪರೀಕ್ಷಾರ್ಥ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೆಲವೊಂದಷ್ಟು ನಿಯಮಗಳ ಮೂಲಕ ಅದನ್ನು ಆದಷ್ಟು ಬೇಗ ಜಾರಿಗೊಳಿಸುವ ಚಿಂತನೆಯಲ್ಲಿ ಸಂಸ್ಥೆ ಇದೆ. ಆದರೆ, ಇಲ್ಲಿಯ ತನಕ ಈ ನಿಯಮವನ್ನು ನೆಟ್​ಫ್ಲಿಕ್ಸ್​ ನಿರ್ದಿಷ್ಟವಾಗಿ ಹೇಗೆ ರೂಪಿಸಲಿದೆ. ಅದಕ್ಕಾಗಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ನೆಟ್​ಫ್ಲಿಕ್ಸ್​ ಸಂಸ್ಥೆಯ ಲೆಕ್ಕಾಚಾರದ ಪ್ರಕಾರ ಅಮೆರಿಕಾ ದೇಶವೊಂದರಲ್ಲೇ ಸುಮಾರು ಶೇ.40ರಷ್ಟು ಜನರು ತಮ್ಮದಲ್ಲದ ನೆಟ್​ಫ್ಲಿಕ್ಸ್​ ಖಾತೆಯನ್ನು ಬಳಸಿ ಮನರಂಜನೆ ಪಡೆಯುತ್ತಿದ್ದಾರೆ. ಅಂತೆಯೇ ನೆಟ್​ಫ್ಲಿಕ್ಸ್ ಖಾತೆ ಹೊಂದಿರುವವರ ಪೈಕಿ ಶೇ.72 ಮಂದಿ ತಮ್ಮ ಖಾತೆಯ ಪಾಸ್​ವರ್ಡ್​ ಮತ್ತು ಲಾಗಿನ್​ ಐಡಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಯಾವುದೇ ಅಭ್ಯಂತರ ತೋರಿಲ್ಲ. ಹೀಗಾಗಿ ಜನರ ಇಂತಹ ಮನಸ್ಥಿತಿ ಸಂಸ್ಥೆಗೆ ಕೊಂಚ ಮಟ್ಟಿಗೆ ಹೊಡೆತವನ್ನೇ ನೀಡುತ್ತಿದ್ದು, ಅದನ್ನು ತಪ್ಪಿಸಿಕೊಳ್ಳಲು ನೆಟ್​ಫ್ಲಿಕ್ಸ್ ಹೆಣಗಾಡುತ್ತಿದೆ ಎನ್ನಲಾಗುತ್ತಿದೆ.

ನೆಟ್​​ಫ್ಲಿಕ್ಸ್​ ಪರಿಚಯಿಸುತ್ತಿದೆ ಹೊಸ ಪ್ಲ್ಯಾನ್​ ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ಅನ್ನು ರೂ. 299ಕ್ಕೆ ಪರೀಕ್ಷೆ ನಡೆಸುತ್ತಿದೆ. ಕಿರು ತೆರೆಯ ಮೇಲೆ ಕಂಟೆಂಟ್ ನೋಡಬಯಸುವ ಗ್ರಾಹಕರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಹೊಸ ಯೋಜನೆ ರೂಪಿಸಲಾಗಿದೆ. ಈ ಯೋಜನೆ ಮೂಲಕ ಬಳಕೆದಾರರು ನೆಟ್​ಫ್ಲಿಕ್ಸ್ ಸಿನಿಮಾಗಳು ಮತ್ತು ಶೋಗಳನ್ನು ಸ್ಮಾರ್ಟ್​ಫೋನ್​​ನಲ್ಲಿ ಮಾತ್ರ ನೋಡಲು ಅವಕಾಶ ನೀಡುವುದು ಮಾತ್ರ ಅಲ್ಲ. ಜತೆಗೆ ಟ್ಯಾಬ್ಲೆಟ್, ಡೆಸ್ಕ್​​ಟಾಪ್ ಮತ್ತು ಲ್ಯಾಪ್​ಟಾಪ್​ಗಳಲ್ಲೂ ವೀಕ್ಷಿಸಬಹುದು. ವರದಿಯ ಪ್ರಕಾರ, ಕೆಲವೇ ಗ್ರಾಹಕರೊಂದಿಗೆ ಈ ಮೊಬೈಲ್ ಯೋಜನೆಯನ್ನು ಪರೀಕ್ಷಾರ್ಥವಾಗಿ ಬಳಸುತ್ತದೆ. ಸದ್ಯಕ್ಕೆ ನೆಟ್​​ಫ್ಲಿಕ್ಸ್​ನಿಂದ ರೂ. 199ರ ಮೊಬೈಲ್ ಪ್ಲಾನ್ ಇದೆ. ಅದು ಮೊಬೈಲ್ ಸಾಧನಗಳಿಗೆ ಮಾತ್ರ ಕಂಟೆಂಟ್ ಒದಗಿಸುತ್ತದೆ. ಹೊಸ ಮೊಬೈಲ್+ ರೂ. 299ರ ಪ್ಲಾನ್ ಮೂಲಕವಾಗಿ ಬಳಕೆದಾರರು ಹೆಚ್ಚು ಕಂಟೆಂಟ್ ಲೈಬ್ರರಿಯನ್ನು ನೋಡಬಹುದು ಎಂದು ತಿಳಿಸಿದೆ. ಹೊಸ ಪ್ಲಾನ್​ನಲ್ಲಿ ಎಚ್​ಡಿ ರೆಸಲ್ಯೂಷನ್ (720p) ಕಂಟೆಂಟ್ ಒದಗಿಸಲಾಗುತ್ತದೆ. 199ರ ಪ್ಲಾನ್ ಎಸ್​ಡಿ ರೆಸಲ್ಯೂಷನ್​ನಲ್ಲಿ ಇರುತ್ತವೆ. ಹೊಸ ಮೊಬೈಲ್+ ಪ್ಲಾನ್ ರೂ. 299ರ ಮೌಲ್ಯದ್ದು ಮ್ಯಾಕ್, ಪಿ.ಸಿ.ಗಳು ಹಾಗೂ ಕ್ರೋಮೋಬುಕ್​ಗಳನ್ನು ಸಪೋರ್ಟ್ ಮಾಡುತ್ತದೆ.

ಇದನ್ನೂ ಓದಿ: Netflix Mobile+ 299 Plan: ನೆಟ್​ಫ್ಲಿಕ್ಸ್​ನಿಂದ ಮೊಬೈಲ್+ ಪ್ಲಾನ್ ರೂ. 299ಕ್ಕೆ: ಏನಿದು ಪ್ಲಾನ್, ಯಾರಿಗೆ? ಆನ್​ಲೈನ್ ಕ್ಲಾಸ್ ತಂದ ಅವಾಂತರ: ವಿದ್ಯಾರ್ಥಿಗಳ ಆರೋಗ್ಯಕ್ಕೆ ಮಾರಕವಾಗ್ತಿದ್ಯಾ ಆನ್​ಲೈನ್​​ ಪಾಠ?

ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
ರಾಹುಲ್ ಬರುವ ಮೊದಲು ಶಾಸಕರ, ಕಾರ್ಯಕರ್ತರ ಸಭೆ: ಶಿವಕುಮಾರ್
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
‘ನಿಂಗ್ಯಾಕೆ ಬೇಕು ಇದೆಲ್ಲ’: ಪ್ರಥಮ್ ವಿರುದ್ಧ ನಿರ್ಮಾಪಕ ಕೆ ಮಂಜು
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸಿದ್ದರಾಮಯ್ಯರಿಂದ ಶಾಸಕರನ್ನೆಲ್ಲ ತಮ್ಮೆಡೆ ಸೆಳೆದುಕೊಳ್ಳುವ ಹುನ್ನಾರ: ಅಶೋಕ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಸತೀಶ್ ಜಾರಕಿಹೊಳಿ ಸೇರಿದಂತೆ ಯಾರೂ ತನ್ನ ಪರ ಮಾತಾಡಲಿಲ್ಲ: ಕರೆಮ್ಮ, ಶಾಸಕಿ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಧರ್ಮಸ್ಥಳ ಪ್ರಕರಣ: 2ನೇ ದಿನವೂ ಶವಗಳಿಗಾಗಿ ಮುಂದುವರಿದ ಶೋಧ
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಶಾಸಕರೊಂದಿಗೆ ಸಭೆ ನಡೆಸುವುದು ಸಿಎಂರ ಪರಮೋಚ್ಛ ಅಧಿಕಾರ: ಸುರೇಶ್
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಬೆಳಗಿನ ಜಾವ 3.50ಕ್ಕೆ ಸಂಭವಿಸಿರುವ ಅಪಘಾತ, ಲಾರಿಯ ಆರ್ಧಭಾಗ ರಸ್ತೆ ಮೇಲಿದೆ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಕೆಎಂಎಫ್​​ಗೆ ಮೆಜಾರಿಟಿ ಇರುವ ಪಕ್ಷದವರು ಅಧ್ಯಕ್ಷರಾಗುತ್ತಾರೆ: ಜಾರಕಿಹೊಳಿ
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪ್ರತಿಭಟನೆ ಸ್ವರೂಪವನ್ನು ಸಿಎಂ, ಡಿಸಿಎಂ ಇನ್ನೂ ನಿರ್ಧರಿಸಿಲ್ಲ: ಪರಮೇಶ್ವರ್
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪೊಲೀಸರು ಹಿಡಿದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ