ತೋಟದ ಆವರಣದಲ್ಲಿ ರೇವತಿ ಜೊತೆ ಕಳೆದ ಕ್ಷಣಗಳನ್ನು ಹಂಚಿಕೊಂಡ ನಿಖಿಲ್
ಬೆಂಗಳೂರು: ಇತ್ತೀಚೆಗಷ್ಟೆ ಮದುವೆಯಾದ ನವ ಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಇಬ್ಬರು ಬಿಡದಿಯ ತೋಟದ ಮನೆಯ ಆವರಣದಲ್ಲಿ ಪ್ರೀತಿ ಪಕ್ಷಿಗಳಾಗಿ ಹಾರಾಡಿದ್ದಾರೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮಿಬ್ಬರ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ಬಾಳ ಸಂಗಾತಿಯ ಜೊತೆಗೆ ಕಳೆದ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಕೊರೊನಾ ನಡುವೆಯೇ ನಿಖಿಲ್ ಹಾಗೂ ರೇವತಿ ಇಬ್ಬರು ಏಪ್ರಿಲ್ 17 ರಂದು ಸಪ್ತಪದಿ ತುಳಿದಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಮನೆಬಿಟ್ಟು ಹೋಗಲಾರದ ಪರಿಸ್ಥಿತಿ ಇರುವುದರಿಂದ ಇಬ್ಬರು […]

ಬೆಂಗಳೂರು: ಇತ್ತೀಚೆಗಷ್ಟೆ ಮದುವೆಯಾದ ನವ ಜೋಡಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಇಬ್ಬರು ಬಿಡದಿಯ ತೋಟದ ಮನೆಯ ಆವರಣದಲ್ಲಿ ಪ್ರೀತಿ ಪಕ್ಷಿಗಳಾಗಿ ಹಾರಾಡಿದ್ದಾರೆ. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮಿಬ್ಬರ ಫೋಟೋ ಪೋಸ್ಟ್ ಮಾಡುವ ಮೂಲಕ ತಮ್ಮ ಬಾಳ ಸಂಗಾತಿಯ ಜೊತೆಗೆ ಕಳೆದ ಮಧುರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
ಕೊರೊನಾ ನಡುವೆಯೇ ನಿಖಿಲ್ ಹಾಗೂ ರೇವತಿ ಇಬ್ಬರು ಏಪ್ರಿಲ್ 17 ರಂದು ಸಪ್ತಪದಿ ತುಳಿದಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಮನೆಬಿಟ್ಟು ಹೋಗಲಾರದ ಪರಿಸ್ಥಿತಿ ಇರುವುದರಿಂದ ಇಬ್ಬರು ಎಲ್ಲೂ ಹೋಗಿಲ್ಲ. ಸದ್ಯ ಮದುವೆ ನಂತರ ಇದೇ ಮೊದಲ ಬಾರಿಗೆ ನಿಖಿಲ್ ದಂಪತಿ ಫೋಟೋ ಪೋಸ್ಟ್ ಮಾಡಿದ್ದಾರೆ. ಜೋಡಿ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. https://www.facebook.com/iamNikhilGowda/posts/2718321881607322
Published On - 8:04 am, Thu, 28 May 20




