ಎಸ್‌ಎಸ್‌ಎಲ್‌ಸಿ ಎಕ್ಸಾಂಗೆ ಗ್ರೀನ್ ಸಿಗ್ನಲ್, ಮಾರ್ಗಸೂಚಿ ಬಿಡುಗಡೆ..
ಬೆಂಗಳೂರು: ಕೊರೊನಾ ಇಡೀ ವಿಶ್ವಕ್ಕೆ ಕೊಟ್ಟಿರುವ ಕಾಟ ಒಂದೆರಡು ಸ್ವರೂಪದ್ದಲ್ಲ. ಕರುನಾಡಿನಲ್ಲಂತೂ ಎಸ್‌ಎಸ್ಎಲ್‌ಸಿ ಮಕ್ಕಳ ಮೇಲೆ ಕೊರೊನಾದ ನೇರಾ ಎಫೆಕ್ಟ್ ಬಿದ್ದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಘೋಷಿಸಿದ್ರೂ ಪರೀಕ್ಷೆ ನಡೆಸಬೇಕಾ. ಬೇಡ್ವಾ ಅನ್ನೋ ಪರ ವಿರೋಧ ಎದ್ದಿತ್ತು. ಈ ವಿಚಾರ ಹೈಕೋರ್ಟ್ ಮೆಟ್ಟಿಲು ಕೂಡ ಹತ್ತಿತ್ತು. ಆಗ ಕೋರ್ಟ್ ಈಗ ಎಕ್ಸಾಂ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಎಸ್‌ಎಸ್‌ಎಲ್‌ಸಿ.. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟ. ಜೀವನ ಎಂಬ ಮೆಟ್ಟಿಲು ಹತ್ತೋಕೆ ಇರೋ ಪ್ರಮುಖ ದಾರಿ. ಎಸ್‌ಎಸ್‌ಎಲ್‌ಸಿ ಪಾಸ್ […]

ಬೆಂಗಳೂರು: ಕೊರೊನಾ ಇಡೀ ವಿಶ್ವಕ್ಕೆ ಕೊಟ್ಟಿರುವ ಕಾಟ ಒಂದೆರಡು ಸ್ವರೂಪದ್ದಲ್ಲ. ಕರುನಾಡಿನಲ್ಲಂತೂ ಎಸ್‌ಎಸ್ಎಲ್‌ಸಿ ಮಕ್ಕಳ ಮೇಲೆ ಕೊರೊನಾದ ನೇರಾ ಎಫೆಕ್ಟ್ ಬಿದ್ದಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ದಿನಾಂಕ ಘೋಷಿಸಿದ್ರೂ ಪರೀಕ್ಷೆ ನಡೆಸಬೇಕಾ. ಬೇಡ್ವಾ ಅನ್ನೋ ಪರ ವಿರೋಧ ಎದ್ದಿತ್ತು. ಈ ವಿಚಾರ ಹೈಕೋರ್ಟ್ ಮೆಟ್ಟಿಲು ಕೂಡ ಹತ್ತಿತ್ತು. ಆಗ ಕೋರ್ಟ್ ಈಗ ಎಕ್ಸಾಂ ನಡೆಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ.
ಎಸ್‌ಎಸ್‌ಎಲ್‌ಸಿ.. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರಮುಖ ಘಟ್ಟ. ಜೀವನ ಎಂಬ ಮೆಟ್ಟಿಲು ಹತ್ತೋಕೆ ಇರೋ ಪ್ರಮುಖ ದಾರಿ. ಎಸ್‌ಎಸ್‌ಎಲ್‌ಸಿ ಪಾಸ್ ಆದ್ರೆ ಜೀವನ ಎಂಬ ಪರೀಕ್ಷೆಯಲ್ಲಿ ಪಾಸ್ ಆದಂತೆ. ಆದ್ರೆ 2019-2020 ಸಾಲಿನ ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಕೊರೊನಾ ಶಾಪವಾಗಿ ತಟ್ಟಿದೆ. ಕೊರೊನಾದಿಂದ ಏಪ್ರಿಲ್‌ನಲ್ಲಿ ನಡೆಯಬೇಕಾದ ಪರೀಕ್ಷೆ ಜೂನ್‌ಗೆ ಹೋಗಿದೆ. ಪರೀಕ್ಷೆ ದಿನಾಂಕ ಘೋಷಿಸಿದ್ದರೂ ಎಕ್ಸಾಂ ವಿಚಾರದಲ್ಲಿ ಪರ, ವಿರೋಧ ಚರ್ಚೆ ಮಾತ್ರ ನಿಂತಿಲ್ಲ.
ಪರ ವಿರೋಧದ ನಡುವೆ ಎಸ್‌ಎಸ್ಎಲ್‌ಸಿ ಎಕ್ಸಾಂ! ರಾಜ್ಯದಲ್ಲಿ ಕೊರೊನಾ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದೆ. ಆದ್ರೆ ಸರ್ಕಾರ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಪರೀಕ್ಷೆ ನಡೆಸಲು ಪ್ಲ್ಯಾನ್ ಮಾಡಿದೆ. ಈ ವಿಚಾರ ಹೈಕೋರ್ಟ್ ಮೆಟ್ಟಿಲು ಕೊಡ ಏರಿತ್ತು. ಈಗ ಎಸ್‌ಎಲ್‌ಎಲ್‌ಸಿ ಪರೀಕ್ಷೆ ನಡೆಸಲು ಕೋರ್ಟ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಪರೀಕ್ಷೆ ರದ್ದು ಕೋರಿದ್ದ PIL ಇತ್ಯರ್ಥಪಡಿಸಿದ ಹೈಕೋರ್ಟ್: ಹೌದು, ಎಸ್‌ಎಸ್ಎಲ್‌ಸಿ ಪರೀಕ್ಷೆ ರದ್ದು ಕೋರಿದ್ದ PILನ್ನ ಹೈಕೋರ್ಟ್ ಇತ್ಯರ್ಥಪಡಿಸಿದೆ. ಜೂನ್ 25ರಿಂದ ಎಸ್ಎಸ್ಎಲ್ಸಿ ಪರೀಕ್ಷೆಗೆ ನಡೆಸುವ ಬಗ್ಗೆ ಕೆಎಸ್ಇಇ ಬೋರ್ಡ್ ಹೈಕೋರ್ಟ್ ಮಾರ್ಗಸೂಚಿ ಸಲ್ಲಿಕೆ ಮಾಡಿತ್ತು. ಮಾರ್ಗಸೂಚಿ ನೀಡಿದ ಹಿನ್ನೆಲೆ ಕೋರ್ಟ್ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ.
ಎಸ್‌ಎಸ್‌ಎಲ್‌ಸಿ ಮಾರ್ಗಸೂಚಿ: ಕೆಎಸ್ಇಇ ಬೋರ್ಡ್ ಹೈಕೋರ್ಟ್‌ಗೆ ನೀಡಿದ ಮಾರ್ಗಸೂಚಿಯಲ್ಲಿ ಕಂಟೇನ್ಮೆಂಟ್ ಜೋನ್‌ಗಳಲ್ಲಿ ಪರೀಕ್ಷಾ ಕೇಂದ್ರಗಳಿಲ್ಲ. ಪ್ರತಿ ಕೊಠಡಿಯಲ್ಲಿ 18ರಿಂದ 20 ವಿದ್ಯಾರ್ಥಿಗಳು ಮಾತ್ರ ಇರಬೇಕು ಹಾಗೂ ಪ್ರತಿ ಕೇಂದ್ರದಲ್ಲಿ ಎರಡು ಕೊಠಡಿ ಪ್ರತ್ಯೇಕವಾಗಿಡಬೇಕು. ಹಾಗೇ ಕೆಮ್ಮು, ನೆಗಡಿ, ಜ್ವರವಿರುವ ವಿದ್ಯಾರ್ಥಿಗಳಿಗೆ ಮತ್ತು ಕಂಟೇನ್ಮೆಂಟ್ ಜೋನ್ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡ್ಬೇಕು . ಎಸ್‌ಎಸ್‌ಎಲ್‌ಸಿ ಪರೀಕ್ಷಾರ್ಥಿಗಳಿಗೆ ಸರ್ಕಾರಿ ಸಾರಿಗೆಯಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ. ಶಾಲೆ, ಪೋಷಕರ ಮನವಿಯ ಮೇರೆಗೆ ಡಿಡಿಪಿಐ ಡಿಸಿಯೊಂದಿಗೆ ಸಮಾಲೋಚಿಸಿ ಬಸ್ ವ್ಯವಸ್ಥೆ. ಖಾಸಗಿ ಶಾಲಾ ಬಸ್‌ಗಳನ್ನು ಬಳಸಿಕೊಳ್ಳಲು ಅನುಮತಿ ಪಡೆಯಬೇಕು.
ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ಪ್ರತಿ ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ. ಎರಡು ಡೆಸ್ಕ್‌ಗಳ ಮಧ್ಯೆ ಮೂರು ಅಡಿ ಅಂತರ ಇರಬೇಕು. ಎಲ್ಲಾ ವಿದ್ಯಾರ್ಥಿಗಳು ಮಾಸ್ಕ್ ಧರಿಸಿರಬೇಕು. ಮಾಸ್ಕ್ ಇಲ್ಲದಿದ್ದರೆ ಅರೆ ವೈದ್ಯಕೀಯ ಸಿಬ್ಬಂದಿ ಮಾಸ್ಕ್‌ಗಳನ್ನು ನೀಡಬೇಕು. ಪ್ರತಿ ಕೇಂದ್ರದಲ್ಲೂ ಅರೆ ವೈದ್ಯಕೀಯ ಸಿಬ್ಬಂದಿ ಇರಲೇ ಬೇಕು ಎಂಬ ಮಾರ್ಗಸೂಚಿಯನ್ನ ಕೆಎಸ್ಇಇ ಬೋರ್ಡ್ಹೈಕೋರ್ಟ್ಗೆ ಸಲ್ಲಿಕೆ ಮಾಡಿದೆ.
ಎಸ್ಎಸ್ಎಲ್ಸಿ ಪರೀಕ್ಷಾ ಮಾರ್ಗಸೂಚಿಯನ್ನ ಗಮನಿಸಿ ಹೈಕೋರ್ಟ್ ಪರೀಕ್ಷೆ ರದ್ದು ಕೋರಿದ್ದ PIL ಇತ್ಯರ್ಥಪಡಿಸಿದೆ. ಇದು ಖುಷಿಯ ವಿಚಾರ. ಹಾಗೇ ಕೊರೊನಾ ಭಯ ಕೂಡ ಇದೆ. ಹೀಗಾಗಿ ಮಕ್ಕಳ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಿ ಪರೀಕ್ಷೆ ಬರೆಸಬೇಕಿದೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಮಕ್ಕಳ ಭವಿಷ್ಯ ಹಾಳಾಗಿ ಹೋಗುತ್ತೆ.
Published On - 7:28 am, Thu, 28 May 20




