2 ಲಕ್ಷ ಖರ್ಚು ಮಾಡಿ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಭರ್ಜರಿ ಬಾಡೂಟ ಪಾರ್ಟಿ.. ಸಾರ್ವಜನಿಕರಿಂದ ಆಕ್ರೋಶ

ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಲೇಡೀಸ್ ಹಾಸ್ಟೆಲ್ ಹಿಂಭಾಗದಲ್ಲಿ ಕಿಮ್ಸ್ ಆಡಳಿತಾಧಿಕಾರಿ ಸೇರಿದಂತೆ 60 ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಬಾಡೂಟ ತಯಾರಿಸಿ ಪಾರ್ಟಿ ಮಾಡಿದ್ದಾರೆ. ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಉತ್ತಮ ಹೆಸರು ಮಾಡಿದ್ದ ಕಿಮ್ಸ್, ಸದ್ಯ ಬಾಡೂಟ ಆಯೋಜನೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

2 ಲಕ್ಷ ಖರ್ಚು ಮಾಡಿ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಭರ್ಜರಿ ಬಾಡೂಟ ಪಾರ್ಟಿ.. ಸಾರ್ವಜನಿಕರಿಂದ ಆಕ್ರೋಶ
ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಭರ್ಜರಿ ಬಾಡೂಟ ಪಾರ್ಟಿ.
Follow us
ಆಯೇಷಾ ಬಾನು
|

Updated on: Dec 15, 2020 | 9:03 AM

ಹುಬ್ಬಳ್ಳಿ: ಜಿಲ್ಲೆಯ ಕಿಮ್ಸ್‌ ಆಸ್ಪತ್ರೆ ಆವರಣದಲ್ಲಿ ಭರ್ಜರಿ ಬಾಡೂಟ ಪಾರ್ಟಿ ನೆರವೇರಿದೆ. ಆಸ್ಪತ್ರೆ ವೈದ್ಯರು, ಸಿಬ್ಬಂದಿ ಸೇರಿ ಸುಮಾರು 60ಕ್ಕೂ ಹೆಚ್ಚು ಆಸ್ಪತ್ರೆ ಸಿಬ್ಬಂದಿ ಬಾಡೂಟ ತಯಾರಿಸಿ ಮೋಜು, ಮಸ್ತಿ ಮಾಡಿ ಎಂಜಾಯ್ ಮಾಡಿದ್ದಾರೆ. ಸಿಬ್ಬಂದಿಯ ಈ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಲೇಡೀಸ್ ಹಾಸ್ಟೆಲ್ ಹಿಂಭಾಗದಲ್ಲಿ ಕಿಮ್ಸ್ ಆಡಳಿತಾಧಿಕಾರಿ ಸೇರಿದಂತೆ 60 ಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಬಾಡೂಟ ತಯಾರಿಸಿ ಪಾರ್ಟಿ ಮಾಡಿದ್ದಾರೆ. ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಉತ್ತಮ ಹೆಸರು ಮಾಡಿದ್ದ ಕಿಮ್ಸ್, ಸದ್ಯ ಬಾಡೂಟ ಆಯೋಜನೆ ಮಾಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆ ಎನ್ನುವ ಸಣ್ಣ ಜ್ಞಾನವೂ ಇಲ್ಲದೇ ಮೋಜು ಮಸ್ತಿ ಮಾಡಿದ್ದಾರೆ. ಕೊರೊನಾ ವಾಡ್೯, ದೊಡ್ಡಾಸ್ಪತ್ರೆ ಇರೋದನ್ನ ಲೆಕ್ಕಿಸದೇ ಪಾರ್ಟಿ ಮಾಡಿದ್ದಾರೆ. ಸರ್ಕಾರಿ ಸಂಸ್ಥೆಯ ಆವರಣದಲ್ಲಿ ಬಾಡೂಡ ನಿಷೇಧವಿದ್ರೂ ನಿಯಮಗಳನ್ನ ಗಾಳಿಗೆ ತೂರಿ ಪಾರ್ಟಿ ಆಯೋಜನೆ‌ ಮಾಡಿದ್ದಾರೆ. ಅಲ್ಲದೆ ಕಿಮ್ಸ್ ಆಡಳಿತ ಮಂಡಳಿಯಿಂದಲೇ ಪಾರ್ಟಿಗೆ 2 ಲಕ್ಷ ಹಣ ನೀಡಲಾಗಿದೆ. 2 ಲಕ್ಷ ಖರ್ಚು ಮಾಡಿ ಪಾರ್ಟಿ ಮಾಡಿದ್ದು ಏಕೆ ಎಂದು ಸಾರ್ವಜನಿಕರು ಆಕ್ರೋಶ‌‌ಗೊಂಡಿದ್ದಾರೆ.