ಕಂದಮ್ಮನ ಜೀವ ಉಳಿಸಬೇಕಾದ ಸರ್ಜನ್‌ಗೇ ಕೊರೊನಾ ಪಾಸಿಟೀವ್!

| Updated By: ಸಾಧು ಶ್ರೀನಾಥ್​

Updated on: Jul 16, 2020 | 4:58 PM

ಬೆಂಗಳೂರು: ಕೊರೊನಾ ಮಹಾಮಾರಿ ಈಗ ವೈದ್ಯಲೋಕಕ್ಕೆನೇ ಸವಾಲಾಗಿ ಪರಿಣಮಿಸಿದೆ. ಸಾಮನ್ಯ ಜನರು, ವಿಐಪಿಗಳು ಸೇರಿದಂತೆ ವೈದ್ಯರನ್ನೂ ಕೂಡಾ ಬಿಡ್ತಿಲ್ಲ ಈ ಹೆಮ್ಮಾರಿ ಕೊರೊನಾ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಒಂದೂವರೆ ತಿಂಗಳ ಮಗು ಈಗ ಸಾವು ಬದುಕಿನ ಹೊರಾಟದಲ್ಲಿದೆ. ಹೌದು ಕೊರೊನಾದಿದಂದಾಗಿ ವೈದ್ಯರು ಪ್ರಾಣ ಸಂಕಟದಲ್ಲಿದ್ದಾರೆ. ಒಂದು ಕಡೆ ಚಿಕಿತ್ಸೆ ಕೊಡೋಕೂ ಆಗ್ತಿಲ್ಲ.. ಮತ್ತೊಂದೆಡೆ ರೋಗಿಗಳ ನರಳಾಟ ನೋಡೋಕೂ ಆಗ್ತಿಲ್ಲ. ಇನ್ನೊಂದೆಡೆ ವೈದ್ಯರೇ ಸೋಂಕಿತರಾಗ್ತಿದ್ದಾರೆ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೋನಾ ಸೋಂಕು ತಗುಲಿದ […]

ಕಂದಮ್ಮನ ಜೀವ ಉಳಿಸಬೇಕಾದ ಸರ್ಜನ್‌ಗೇ ಕೊರೊನಾ ಪಾಸಿಟೀವ್!
Follow us on

ಬೆಂಗಳೂರು: ಕೊರೊನಾ ಮಹಾಮಾರಿ ಈಗ ವೈದ್ಯಲೋಕಕ್ಕೆನೇ ಸವಾಲಾಗಿ ಪರಿಣಮಿಸಿದೆ. ಸಾಮನ್ಯ ಜನರು, ವಿಐಪಿಗಳು ಸೇರಿದಂತೆ ವೈದ್ಯರನ್ನೂ ಕೂಡಾ ಬಿಡ್ತಿಲ್ಲ ಈ ಹೆಮ್ಮಾರಿ ಕೊರೊನಾ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಒಂದೂವರೆ ತಿಂಗಳ ಮಗು ಈಗ ಸಾವು ಬದುಕಿನ ಹೊರಾಟದಲ್ಲಿದೆ.

ಹೌದು ಕೊರೊನಾದಿದಂದಾಗಿ ವೈದ್ಯರು ಪ್ರಾಣ ಸಂಕಟದಲ್ಲಿದ್ದಾರೆ. ಒಂದು ಕಡೆ ಚಿಕಿತ್ಸೆ ಕೊಡೋಕೂ ಆಗ್ತಿಲ್ಲ.. ಮತ್ತೊಂದೆಡೆ ರೋಗಿಗಳ ನರಳಾಟ ನೋಡೋಕೂ ಆಗ್ತಿಲ್ಲ. ಇನ್ನೊಂದೆಡೆ ವೈದ್ಯರೇ ಸೋಂಕಿತರಾಗ್ತಿದ್ದಾರೆ. ಜಯದೇವ ಆಸ್ಪತ್ರೆಯ ವೈದ್ಯರಿಗೆ ಕೊರೋನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಒಂದು ತಿಂಗಳು ಹದಿನೈದು ದಿನದ ಮಗು ಈಗ ಸಾವು ಬದುಕಿನ ಹೋರಾಟದಲ್ಲಿದೆ.

ಕೆಂಗೇರಿ ಬಳಿಯ ಚನ್ನಸಂದ್ರ ಲೇಔಟ್ ನಿವಾಸಿ ಸತೀಶ್ ತಮ್ಮ ಹಸುಗೂಸನ್ನ ಜಯದೇವ ಆಸ್ಪತ್ರೆಗೆ ದಾಖಲು ಮಾಡಿದ್ರು. ಮಗುವಿನ ಹಾರ್ಟ್‌ನಲ್ಲಿ ಎರಡು ಹೋಲ್‌ಗಳಿದ್ದು, ನಾಳೆ ಆಪರೇಷನ್ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದ್ರೀಗ ಕಂದಮ್ಮನ ಜೀವ ಉಳಿಸಬೇಕಾದ ಸರ್ಜನ್‌ಗೇ ಕೊರೋನಾ ಪಾಸಿಟೀವ್ ದೃಢಪಟ್ಟಿದೆ. ಹೀಗಾಗಿ ಮಗುವಿಗೆ ಆಪರೇಷನ್ ಮಾಡೋಕೆ ಕಷ್ಟವಾಗ್ತಿದೆ.

ಈ ಬಗ್ಗೆ ಮಾತನಾಡಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಸಿ ಎನ್​. ಮಂಜುನಾಥ್ ಅವರು ನಮಗೆ ಏನು ಮಾಡಬೇಕು ಅನ್ನೋದೇ ಗೊತ್ತಾಗ್ತಿಲ್ಲ, ಮಗುಗೆ ಆಪರೇಷನ್ ಮಾಡಬೇಕಿದ್ದ ಸರ್ಜನ್‌ಗೆ ಕೊರೋನಾ ಬಂದಿರೋದ್ರಿಂದ ಮಗುವನ್ನು ಮುಟ್ಟೋಕೆ ಆಗೋದಿಲ್ಲ ಅಂತಾ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.

ಇಷ್ಟೇ ಅಲ್ಲ ನಮ್ಮ ಆಸ್ಪತ್ರೆಯ ಕೆಲ ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ. ಹೀಗಾಗಿ ಕೆಲವರು ಐಸೋಲೇಷನ್ ಆಗಿದ್ದಾರೆ. ಇನ್ನು ಕೆಲವರು ಕ್ವಾರಂಟೈನ್ ಆಗಿದ್ದಾರೆ. ಆಪರೇಷನ್ ಮಾಡೋಕೆ ಬೇರೆ ಏನಾದ್ರೂ ಸಾಧ್ಯತೆಗಳಿವೆಯಾ ಅನ್ನೋದನ್ನ ಚೆಕ್ ಮಾಡ್ತಿದ್ದೇವೆ ಎಂದು ಡಾ. ಮಂಜುನಾಥ್ ಆಲೋಚಿಸುತ್ತಿದ್ದಾರೆ..