ಗ್ರಾ.ಪಂ. ಚುನಾವಣೆ ವೈಷಮ್ಯ? ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ..
ಗ್ರಾ.ಪಂ. ಚುನಾವಣೆ ವೈಷಮ್ಯ ಹಿನ್ನೆಲೆಯಲ್ಲಿ ಕೈ ನಾಯಕ ಕಿರಣ್ ರಜಪೂತ, ಭರಮಾ ಧೂಪದಾಳೆ ಮೇಲೆ ಫೈರಿಂಗ್ ನಡೆದಿದೆ.
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಇಬ್ಬರು ‘ಕೈ’ ಕಾರ್ಯಕರ್ತರ ಮೇಲೆ ಅಪರಿಚಿತನಿಂದ ಗುಂಡಿನ ದಾಳಿ ನಡೆದಿದೆ. ಗ್ರಾ.ಪಂ. ಚುನಾವಣೆ ವೈಷಮ್ಯ ಹಿನ್ನೆಲೆಯಲ್ಲಿ ಈ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಅಪರಿಚಿತರು ಮಾಸ್ಕ್ ಧರಿಸಿ 7 ಅಡಿ ದೂರದಿಂದ ಕಿರಣ್ ರಜಪೂತ, ಭರಮಾ ಧೂಪದಾಳೆ ಮೇಲೆ ಫೈರಿಂಗ್ ನಡೆಸಿದ್ದಾರೆ. ಈ ಘಟನೆಯಲ್ಲಿ ಭರಮಾ ಧೂಪದಾಳೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತ ಕಿರಣ್ ರಜಪೂತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪತ್ ರಾಜ್ ವಿರುದ್ಧ ಕೊನೆಗೂ ಬಾಯ್ಬಿಟ್ಟ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್! ಏನು ಕ್ರಮ?
Published On - 12:53 pm, Thu, 17 December 20