
ಬೆಂಗಳೂರು: ಕೊರೊನಾ ವಾರಿಯರ್ಸ್ ಮೇಲೆ ಪಾದರಾಯನಪುರ ಪುಂಡರ ಗೂಂಡಾಗಿರಿ ಪ್ರಕರಣ ಸಂಬಂಧ 126 ಆರೋಪಿಗಳಿಗೆ ಕಾರ್ಪೊರೇಟರ್ ಇಮ್ರಾನ್ ಪಾಷಾ ಶ್ಯೂರಿಟಿ ನೀಡಿದ್ದಾರೆ. ಅಲ್ಲದೆ, ಆರೋಪಿಗಳು ಜೈಲಿನಲ್ಲಿದ್ದ ವೇಳೆ ಕುಟುಂಬಸ್ಥರಿಗೆ ಇಮ್ರಾನ್ ಪಾಷಾ ಆರ್ಥಿಕ ನೆರವು ಸಹ ನೀಡಿದ್ದಾರೆ.
ನಿನ್ನೆ ಪಾದರಾಯನಪುರದ126 ಜನ ಪುಂಡರು ರಿಲೀಸ್ ಆಗಿದ್ದಾರೆ. ನಿಮ್ಮ ಮಕ್ಕಳನ್ನ ನಾನು ಬಿಡಿಸಿಕೊಂಡು ಬರ್ತೇನೆ. ಅಲ್ಲಿಯವರೆಗೂ ದುಡ್ಡು ತಗೊಂಡು ಜೀವನ ನಡೆಸಿ ಎಂದು ಹೇಳಿದ್ದಾರೆ. ಪುಂಡರ ಬೆನ್ನಿಗೆ ನಿಂತು ಅವರ ಕುಟುಂಬಕ್ಕೆ ದುಡ್ಡು, ದಿನಸಿ ಕೊಟ್ಟು ಅಭಯ ಹಸ್ತ ನೀಡಿದ್ದ ವಿಡಿಯೋ ವೈರಲ್ ಆಗಿದೆ.
ಅಮಾಯಕರಿಗೆ ಶ್ಯೂರಿಟಿಯನ್ನ ನೀಡಿದ್ದೇನೆ:
ಪಾದರಾಯನಪುರದಲ್ಲಿ 15-20 ಜನ ಮಾತ್ರ ಗಲಾಟೆ ಮಾಡಿದ್ರು. 100ಕ್ಕಿಂತ ಹೆಚ್ಚು ಜನರು ಅಮಾಯಕರಾಗಿದ್ದಾರೆ. ಹೀಗಾಗಿ ಅಮಾಯಕರಿಗೆ ನಾನು ಶ್ಯೂರಿಟಿಯನ್ನ ನೀಡಿದ್ದೇನೆ. ಅಮಾಯಕರು ಕೆಲವರು ಬಡವರಿದ್ದಾರೆ ಹೀಗಾಗಿ ಕಷ್ಟವಾಗುತ್ತೆ. ಆರೋಪಿಗಳ ಕುಟುಂಬಸ್ಥರಿಗೆ ಕಷ್ಟವಾಗುತ್ತೆ ಎಂದು ಸಹಾಯ ಮಾಡಿದ್ದೇನೆ. ಅವರಲ್ಲಿ ಕೆಲವರು ಆರೋಪಿಗಳು ಸಹ ಬಿಡುಗಡೆ ಆಗಿದ್ದಾರೆ.
ನಮ್ಮ ಜನರ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. 100ಕ್ಕೂ ಹೆಚ್ಚು ಜನರು ನಿಜವಾಗಿ ಗಲಾಟೆ ಮಾಡೇ ಇಲ್ಲ. ರಾತ್ರೋರಾತ್ರಿ ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ. ಬಂಧಿಸಿದ ಬಳಿಕ ಅವರು ಅಮಾಯಕರೆಂದು ತಿಳಿಯಿತು. ಹೀಗಾಗಿ ಪೊಲೀಸರ ಬಳಿ ನಾನು ಮನವಿ ಮಾಡಿದೆ. ಬಂಧಿತರಲ್ಲಿ ಕೆಲವರು ಅಮಾಯಕರು ಇದ್ದಾರೆಂದು ಹೇಳಿದೆ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದು ನಾನು ಪೊಲೀಸರಿಗೆ ಹೇಳಿದ್ದೆ. ಆದರೆ ಅಮಾಯಕರನ್ನು ಬಿಡುವಂತೆ ಮನವಿ ಮಾಡಿದ್ದೇನೆ ಎಂದು ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಹೇಳಿದ್ದಾರೆ.
Published On - 11:33 am, Thu, 4 June 20