ಪ್ರೇಮ ವೈಫಲ್ಯ: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕುವಿನಿಂದ ಇರಿದ ಪಾಗಲ್​ ಪ್ರೇಮಿ..

ಪ್ರೇಮ ವೈಫಲ್ಯ: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕುವಿನಿಂದ ಇರಿದ ಪಾಗಲ್​ ಪ್ರೇಮಿ..

ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದಿರುವ ಘಟನೆ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿ ನಡೆದಿದೆ. ಪ್ರೇಮ ವೈಫಲ್ಯದಿಂದ ಯುವಕ ಯುವತಿಗೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ. ಅಶ್ವಿನಿ (19) ಚಾಕು ಇರಿತಕ್ಕೆ ಒಳಗಾದ ಯುವತಿಯಾಗಿದ್ದು, ಗಗನ್ ಅಲಿಯಾಸ್ ಕೆಂಚ ಇಂಬ ಯುವಕನಿಂದ ಈ ಕೃತ್ಯ ಜರುಗಿದೆ. ಬಾಲ್ಯದಿಂದ ಈ ಇಬ್ಬರು ಸ್ನೇಹಿತರಾಗಿದ್ದರು. ಅಲ್ಲದೆ ಗಗನ್‌ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಗಗನ್​ಗೆ ಜೀವನದಲ್ಲಿ ಜವಾಬ್ದಾರಿ ಎಂಬುವುದೇ ಇಲ್ಲ ಎಂದು ಅಶ್ವಿನಿ ಪ್ರೀತಿ ನಿರಾಕರಿಸಿದ್ದಳು. ಇದರಿಂದ […]

pruthvi Shankar

| Edited By: Ayesha Banu

Nov 15, 2020 | 12:27 PM

ಮೈಸೂರು: ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದಿರುವ ಘಟನೆ ಮೈಸೂರಿನ ದಿವಾನ್ಸ್ ರಸ್ತೆಯಲ್ಲಿ ನಡೆದಿದೆ. ಪ್ರೇಮ ವೈಫಲ್ಯದಿಂದ ಯುವಕ ಯುವತಿಗೆ ಚಾಕು ಇರಿದಿರುವ ಶಂಕೆ ವ್ಯಕ್ತವಾಗಿದೆ.

ಅಶ್ವಿನಿ (19) ಚಾಕು ಇರಿತಕ್ಕೆ ಒಳಗಾದ ಯುವತಿಯಾಗಿದ್ದು, ಗಗನ್ ಅಲಿಯಾಸ್ ಕೆಂಚ ಇಂಬ ಯುವಕನಿಂದ ಈ ಕೃತ್ಯ ಜರುಗಿದೆ. ಬಾಲ್ಯದಿಂದ ಈ ಇಬ್ಬರು ಸ್ನೇಹಿತರಾಗಿದ್ದರು. ಅಲ್ಲದೆ ಗಗನ್‌ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಹೀಗಾಗಿ ಗಗನ್​ಗೆ ಜೀವನದಲ್ಲಿ ಜವಾಬ್ದಾರಿ ಎಂಬುವುದೇ ಇಲ್ಲ ಎಂದು ಅಶ್ವಿನಿ ಪ್ರೀತಿ ನಿರಾಕರಿಸಿದ್ದಳು.

ಇದರಿಂದ ಕೋಪಗೊಂಡ ಗಗನ್​ ನನಗೆ ಸಿಗದಿರುವ ಹುಡಗಿ ಯಾರಿಗೂ ಸಿಗಬಾರದು ಎಂದು ತೀರ್ಮಾನಿಸಿ ಮನೆ ಮುಂದೆ ನಿಂತಿದ್ದ ಯುವತಿಗೆ ಚಾಕು ಇರಿದಿದ್ದಾನೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಲಕ್ಷ್ಮೀಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada