Petrol Price: ದೂರದ ಪ್ರಯಾಣಕ್ಕೆ ಪ್ಲಾನ್ ಮಾಡಿದ್ದೀರಾ? ಒಮ್ಮೆ ಗಮನಿಸಿ ಪೆಟ್ರೋಲ್, ಡೀಸೆಲ್ ದರದ ಮಾಹಿತಿ ಇಲ್ಲಿದೆ
Petrol Diesel Rate: ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ 70 ಪೈಸೆ ಹೆಚ್ಚಳದ ನಂತರ ಈಗೆ ಪ್ರತಿ ಲೀ.ಗೆ ₹90.53 ಹಾಗೂ ಡೀಸೆಲ್ ಬೆಲೆ ಲೀ.ಗೆ ₹82.40 ಆಗಿದೆ.
ಬೆಂಗಳೂರು: ಇಂದು ಪೆಟ್ರೋಲ್ ಬೆಲೆಯಲ್ಲಿ 70 ಪೈಸೆ ಹೆಚ್ಚಳವಾಗಿದೆ. ಹಾಗೂ ಡೀಸೆಲ್ ಬೆಲೆ 27 ಪೈಸೆ ಏರಿಕೆಯಾಗಿದೆ. ಇಂಧನಗಳ ಬೆಲೆ ಪ್ರತಿದಿನ ಸಾಗುತ್ತಿದ್ದಂತೇ ಏರಿಕೆ ಮಟ್ಟವನ್ನು ಕಾಣುತ್ತಿದೆ. ಬೆಂಗಳೂರಿನಲ್ಲಿ 70 ಪೈಸೆ ಹೆಚ್ಚಳದ ನಂತರ ಇದೀಗ ಪ್ರತಿ ಲೀ.ಗೆ ₹90.53 ಹಾಗೂ ಡೀಸೆಲ್ ಬೆಲೆ ಒಂದು ಲೀ.ಗೆ ₹82.40 ಆಗಿದೆ.
ಭಾರತದ ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಷ್ಟು ಏರಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ. ದೆಹಲಿಯಲ್ಲಿ ಈಗ ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ ₹87.60 ಹಾಗೂ ಡೀಸೆಲ್ ಲೀ. ₹77.73 ಆಗಿದೆ. ಹಾಗೂ ಮುಂಬೈನಲ್ಲಿ ಪ್ರತಿ ಲೀ.ಗೆ ಪೆಟ್ರೋಲ್ ಬೆಲೆ ₹94.12, ಡೀಸೆಲ್ ಪ್ರತಿ ಲೀ.ಗೆ ₹84.63 ಇದೆ.
ಕಳೆದ ಮೂರು ದಿನಗಳಿಂದ ಸ್ಥಿರವಾಗಿದ್ದ ಪೆಟ್ರೋಲ್ ಬೆಲೆ ನಿನ್ನೆ ಮಂಗಳವಾರ(ಫೆ.09)ರಂದು 35 ಪೈಸೆ ಏರಿಕೆಯಾಗಿತ್ತು. ಇದೀಗ ಇಂದು(ಫೆ.10) 70 ಪೈಸೆ ಏರಿಕೆ ಕಂಡಿದೆ. ದಿನೇ ದಿನೇ ಸಾಗುತ್ತಲೇ ತೈಲಗಳ ದರ ಏರುತ್ತಲಿದೆ. ದೂರದ ಪ್ರಯಾಣ ಸಾಗುತ್ತಿರುವವರು ಒಮ್ಮೆ ಯೋಚಿಸುವುದು ಅತ್ಯಗತ್ಯ ಎಂಬಂತಾಗಿದೆ.
Published On - 8:37 am, Wed, 10 February 21