ಪಿತೃದೋಷ ಎಂದರೇನು? ಇದು ಹೇಗೆ ಪ್ರಭಾವ ಬೀರುತ್ತದೆ ಮತ್ತು ಪರಿಹಾರಗಳೇನು?

ಪಿತೃದೋಷ ಎಂದರೇನು? ಇದು ಹೇಗೆ ಪ್ರಭಾವ ಬೀರುತ್ತದೆ ಮತ್ತು ಪರಿಹಾರಗಳೇನು?
ಸಾಂದರ್ಭಿಕ ಚಿತ್ರ

ಮಗ/ಮಗಳ ಬಗ್ಗೆ ತಂದೆ ತೃಪ್ತಿ ಇಲ್ಲದೆ ಸತ್ತರೆ ಅಂಥವರಿಗೆ ಪಿತೃದೋಷ ಸುತ್ತಿಕೊಳ್ಳುತ್ತದೆ. ಹಾಗಾದರೆ, ಪಿತೃದೋಷ ಎಂದರೇನು? ಇದಕ್ಕೆ ಪರಿಹಾರಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

Rajesh Duggumane

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 26, 2021 | 7:25 PM

ಕುಟುಂಬ ಸದಸ್ಯರೊಡನೆ ನಿರಂತರ ಘರ್ಷಣೆ ಮತ್ತು ವೈವಾಹಿಕ ಜೀವನದಲ್ಲಿ ತೊಂದರೆಗಳನ್ನು ಎದುರಿಸುತ್ತಾ ನೀವು ನಿರಂತರವಾಗಿ ಖಿನ್ನತೆಗೆ ಒಳಗಾಗಿದ್ದೀರಾ? ಅವಧಿಗೂ ಮೊದಲೇ ಮಗು ಹುಟ್ಟುವುದು, ಶಿಶುಗಳ ಸಾವು, ನಿರಂತರವಾಗಿ ಅನಾರೋಗ್ಯಕ್ಕೆ ತುತ್ತಾಗುವುದು ಅಥವಾ ನಿಮ್ಮ ಮಕ್ಕಳಿಗೆ ನಿರಂತರವಾಗಿ ಕಾಯಿಲೆಗಳು ಕಾಡುತ್ತಿದೆಯೇ? ಸಂತಾನೋತ್ಪತ್ತಿಗೆ ಸಂಬಂಧಿತ ಸಮಸ್ಯೆಗಳನ್ನು ನೀವು ಹೊಂದಿದ್ದೀರಾ? ನಿಮ್ಮ ಹೆಂಡತಿ ಗರ್ಭಧರಿಸುತ್ತಿಲ್ಲವೇ? ನಿಮ್ಮ ಮಗು ಹುಟ್ಟುವಾಗಲೇ ದೈಹಿಕವಾಗಿ ವಿಕಾರವಾಗಿದೆಯೇ? ಶಿಕ್ಷಣ, ವೃತ್ತಿ ಅಥವಾ ಹಣಕಾಸು ವಿಚಾರದಲ್ಲಿ ನೀವು ಭಾರೀ ಅಡೆತಡೆಗಳನ್ನು ಎದುರಿಸುತ್ತಿದ್ದೀರಾ? ಈ ಎಲ್ಲಾ ತೊಂದರಗಳಿಗೆ ಪಿತೃದೋಷ ಕಾರಣವಾಗಿರಬಹುದು. ಪುರುಷನಿಗೆ ಪಿತೃದೋಷವಿದ್ದರೆ ಅದಕ್ಕೆ ಹೆಂಡತಿಯೂ ಪಾಲುದಾರಳು.

ಮಗ/ಮಗಳ ಬಗ್ಗೆ ತಂದೆ ತೃಪ್ತಿ ಇಲ್ಲದೆ ಸತ್ತರೆ ಅಂಥವರಿಗೆ ಪಿತೃದೋಷ ಸುತ್ತಿಕೊಳ್ಳುತ್ತದೆ. ಹಾಗಾದರೆ, ಪಿತೃದೋಷ ಎಂದರೇನು? ಇದಕ್ಕೆ ಪರಿಹಾರಗಳೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹಿಂದೂ ಶಾಸ್ತ್ರಗಳ ಪ್ರಕಾರ ನಿಮ್ಮ ಕುಟುಂಬದ ಹಿಂದಿನ ತಲೆಮಾರಿನವರು ಸತ್ತ ನಂತರ ಮೋಕ್ಷ ಸಿಗದಿದ್ದರೆ ಅಂಥವರಿಗೆ ಪಿತೃದೋಷ ಸುತ್ತಿಕೊಳ್ಳುತ್ತದೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಕ್ಕಿಲ್ಲ ಎಂದರೆ ಅಥವಾ ನಾವು ಹಿಂದಿನ ಜನ್ಮ ಅಥವಾ ಭೂತಕಾಲದಲ್ಲಿ ತಿಳಿದೋ ಅಥವಾ ತಿಳಿಯದೆಯೋ ಕೆಟ್ಟ ಕಾರ್ಯಗಳು ಮಾಡಿದ್ದರೂ ಪಿತೃದೋಷ ಸುತ್ತಿಕೊಳ್ಳುತ್ತದೆ. ಇದೊಂದು ರೀತಿಯಲ್ಲಿ ಸಾಲದಂತೆ. ನಾವು ಅದನ್ನು ಆ ಸಾಲವನ್ನು ತೀರಿಸಲೇಬೇಕು.

ನಿಮ್ಮ ಕುಟುಂಬದಲ್ಲಿ ಯಾರೋ ಒಬ್ಬರು ತೀರಿ ಹೋಗಿರುತ್ತಾರೆ. ಆದರೆ, ಸಾಯುವುದಕ್ಕೂ ಮೊದಲು ಅವರಲ್ಲಿ ಏನೋ ಒಂದು ಆಸೆ ಇರುತ್ತದೆ. ಆ ಆಸೆ ಈಡೇರದೆ ಮೃತಪಟ್ಟಿದ್ದರೆ ನಿಮಗೆ ತೊಂದರೆ ಉಂಟಾಗುತ್ತದೆ. ಇದರಿಂದ ಅವರಿಗೆ ಮೋಕ್ಷ ಸಿಗುವುದಿಲ್ಲ ಎನ್ನುವುದು ಹಿಂದೂ ಶಾಸ್ತ್ರದಲ್ಲಿದೆ. ಇಂಥ ಸಮಯದಲ್ಲೂ ಪಿತೃದೋಷ ಸುತ್ತಿಕೊಳ್ಳುತ್ತದೆ.

ಯಾವುದೇ ಕಾರಣದಿಂದಾಗಿ ವ್ಯಕ್ತಿಯು ಮೃತ ದೇಹವನ್ನು ಶವಸಂಸ್ಕಾರ ಮಾಡಲು ಸಾಧ್ಯವಾಗದಿದ್ದರೆ, ಅಂತಹ ಆತ್ಮವು ಮೋಕ್ಷವಿಲ್ಲದೆ ತಿರುಗಾಡುತ್ತದೆ ಎನ್ನುವ ನಂಬಿಕೆ ಇದೆ.

ಪಿತೃದೋಷದಿಂದ ನೀವು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಈ ಸಮಸ್ಯೆಗೆ ಪರಿಹಾರವಿದೆ. ಪಿತೃದೋಷ ಕಾಯಂ ಆಗಿ ಉಳಿದುಕೊಳ್ಳುವಂಥದ್ದಲ್ಲ. ಶಾಸ್ತ್ರದಲ್ಲಿ ಇದಕ್ಕೆ ಪರಿಹಾರಗಳನ್ನು ಸೂಚಿಸಿದ್ದಾರೆ. ನಿಮ್ಮ ಜಾತಕ ಫಲವನ್ನು ಕಂಡುಕೊಂಡು ತಕ್ಕ ಶಾಂತಿ ಕರ್ಮಗಳನ್ನು ಮಾಡಿಸುವುದರಿಂದಲೂ ಪಿತೃದೋಷದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು ಮತ್ತು ಸಂತೋಷದ ಜೀವನವನ್ನು ನಡೆಸಬಹುದಾಗಿದೆ.

ಪಿತೃದೋಷದ ದುಷ್ಪರಿಣಾಮಗಳಿಂದ ಮುಕ್ತರಾಗಲು ಬಯಸಿದರೆ, ಅಗಲಿದ ಪೂರ್ವಜರು ಮತ್ತು ಪೂರ್ವಜರ ಆತ್ಮವನ್ನು ಸಮಾಧಾನಪಡಿಸಲು ಅವರ ಶ್ರಾದ್ಧ ಪೂಜೆಯನ್ನು ಮಾಡಬೇಕಾಗುತ್ತದೆ. ಪಿತೃ ಪಕ್ಷದ ಸಮಯದಲ್ಲಿ ಶ್ರಾದ್ಧ ಪೂಜೆಯನ್ನು ಮಾಡುವುದು ಅಗಲಿದ ಪೂರ್ವಜರ ಆತ್ಮವನ್ನು ಸಮಾಧಾನಪಡಿಸಲು ಒಳ್ಳೆಯ ಮಾರ್ಗ ಎಂದು ನಂಬಲಾಗಿದೆ. ಇದರ ಜತೆಗೆ ಹಿರಿಯರಿಗೆ ಗೌರವ ನೀಡುವ ಮೂಲಕವೂ ಪಿತೃದೋಷದ ಪರಿಣಾಮವನ್ನು ಕಡಿಮೆ ಮಾಡಬಹುದು.

ಇದನ್ನೂ ಓದಿ: ಶಿವನಿಗೆ ಬಿಲ್ವಪತ್ರೆ ಶ್ರೇಷ್ಠವೇಕೆ? ಈ ಮರ ಹುಟ್ಟಿದ್ದು ಹೇಗೆ? ಇಲ್ಲಿದೆ ಪುರಾಣದ ಕಥೆ

Follow us on

Related Stories

Most Read Stories

Click on your DTH Provider to Add TV9 Kannada