AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ ನಗರಸಭೆ ಯಡವಟ್ಟು, ಜೀವಂತವಾಗಿದ್ದರೂ ಬಡ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ, ಪೊಲೀಸರಿಂದಲೂ ಕಿರುಕುಳದ ಆರೋಪ 

ತಮ್ಮದೇ ಮರಣ ಪ್ರಮಾಣ ಪತ್ರವನ್ನು ಕೈಯಲ್ಲಿ ಹಿಡಿದು ಅಲೆಯುತ್ತಿರೋ ಬಡ ಕುಟುಂಬ.. ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳ ಮಹಾ ಯಡವಟ್ಟಿನಿಂದ ಆ ಬಡ ಕುಟುಂಬ ಕಂಗಾಲು.. ಮನೆ ಯಜಮಾನನ ಕಿಲಾಡಿ ಬುದ್ದಿಗೆ ನಲುಗಿದ ಬಡ ಕುಟುಂಬ ಸದಸ್ಯರು.  ಹೌದು ಈ ಎಲ್ಲಾ ವಿದ್ಯಮಾನಗಳು ಕಾಣಸಿಗೋದು ಗದಗ ನಗರದ  ಖಾನತೋಟದಲ್ಲಿ...

ಗದಗ ನಗರಸಭೆ ಯಡವಟ್ಟು, ಜೀವಂತವಾಗಿದ್ದರೂ ಬಡ ಕುಟುಂಬದವರಿಗೆ  ಮರಣ ಪ್ರಮಾಣ ಪತ್ರ, ಪೊಲೀಸರಿಂದಲೂ ಕಿರುಕುಳದ ಆರೋಪ 
ಗದಗ: ಜೀವಂತವಾಗಿಯೇ ಇದ್ದರೂ ದಾಖಲೆಗಳಲ್ಲಿ ಸಾವನ್ನಪ್ಪಿರುವ ಬಡ ಕುಟುಂಬ!
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: ಸಾಧು ಶ್ರೀನಾಥ್​|

Updated on:Feb 23, 2024 | 5:38 PM

Share
ಆ ಮನೆಯ ಯಜಮಾನ ಮಾಡಿರುವ ಘನಂದಾರಿ ಕೆಲಸಕ್ಕೆ ಇಡೀ ಕುಟುಂಬ ವಿಲವಿಲ ಅಂತಿದೆ. ಹೌದು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡು, 12 ವರ್ಷಗಳಿಂದ ನಾಪತ್ತೆಯಾಗಿದ್ದಾನೆ ಪತಿರಾಯ. ಇದಕ್ಕೆ ಗದಗ ಬೆಟಗೇರಿ ನಗರಸಭೆಯೂ ಸಾಥ್​ ನೀಡಿದ್ದು, ಜೀವಂತವಿರುವವರಿಗೇ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಮಹಾ ಯಡವಟ್ಟು ಮಾಡಿಟ್ಟಿದೆ. ಹೀಗಾಗಿ ಜೀವಂತವಾಗಿಯೇ ಇದ್ದರು ಕೂಡಾ ದಾಖಲೆಗಳಲ್ಲಿ ಸಾವನ್ನಪ್ಪಿರುವ ಬಡ ಕುಟುಂಬ ಪರದಾಟ ನಡೆಸಿದೆ.

ಗದಗ ನಗರದ  ಖಾನತೋಟ ನಿವಾಸಿಯಾದ ತಿಪ್ಪಣ್ಣ ಲಕ್ಕುಂಡಿ ತನ್ನ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಹುಟ್ಟು ಹಾಕಿದ್ದಾನೆ. ವಿಚಿತ್ರ ಅಂದ್ರೆ, ಈ ತಿಪ್ಪಣ್ಣ ಲಕ್ಕುಂಡಿ 12 ವರ್ಷಗಳಿಂದ ಪತ್ನಿ ಮಕ್ಕಳನ್ನು ಬಿಟ್ಟು ನಾ ಪತ್ತೆಯಾಗಿಬಿಟ್ಟಿದ್ದಾನೆ. ತಿಪ್ಪಣ್ಣ ಪತ್ನಿ ದ್ರಾಕ್ಷಾಯಣಿ 2004 ರಲ್ಲಿ ಸಾವನ್ನಪ್ಪಿದ್ದಾಳೆ ಎಂದು ಮರಣ ಪ್ರಮಾಣ ಪತ್ರವನ್ನು ಹುಟ್ಟು ಹಾಕಲಾಗಿದೆ. ಹಾಗೆಯೇ ಇಬ್ಬರು ಮಕ್ಕಳಾದ ಅಶೋಕ ಹಾಗೂ ಕಲ್ಲಪ್ಪ ಎನ್ನುವವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಅವರ ಹೆಸರಿನಲ್ಲಿಯೂ ಕೂಡಾ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಲಾಗಿದೆ. ಈ ಮಧ್ಯೆ ಮನೆ ಜಪ್ತಿ ಮಾಡುತ್ತೇವೆ ಎಂದು ಪೊಲೀಸರು ಮನೆಗೆ ಬರ್ತಾರಂತೆ. ಹೀಗಾಗಿ ನೊಂದ ಕುಟುಂಬ ಕಂಗಾಲಾಗಿದೆ.

Also Read: ಸತ್ತವರ ಬ್ಯಾಂಕ್ ಖಾತೆಗೂ ಗೃಹಲಕ್ಷ್ಮಿ ಹಣ ಜಮೆ; ಯೋಜನೆಯ ಹಣ ಪಡೆಯಲು ಕುಟುಂಬಸ್ಥರ ಪರದಾಟ

ಇನ್ನು ಗದಗ ನಗರದಲ್ಲಿ ಮನೆಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಭಾಗದಲ್ಲಿ ಮನೆಗಳು ಕೋಟ್ಯಾಂತರ ರೂಪಾಯಿ ಮೌಲ್ಯದಲ್ಲಿ ಮಾರಾಟ ಆಗುತ್ತವೆ. ಹಾಗಅಗಿ ಈ ಅನಕ್ಷರಸ್ಥ ಹಾಗೂ ಬಡ ಕುಟುಂಬ ಸದಸ್ಯರಿಗೆ ಮೋಸ ಮಾಡಲು ಯಾರಾದರೂ ಹುನ್ನಾರ ನಡೆಸಿದ್ದಾರೆಯಾ ಎನ್ನುವ ಅನುಮಾನ ಕೂಡಾ ಕಾಡ್ತಾಯಿದೆ. ಇನ್ನು ಒಂದು ಕಡೆ ಮರಣ ಪ್ರಮಾಣ ಪತ್ರವನ್ನು ನೀಡಿರುವ ಸರ್ಕಾರ, ಈ ಕುಟುಂಬಕ್ಕೆ ಪಡಿತರ ಚೀಟಿ, ವೋಟರ್ ಐಡಿ ಕೂಡಾ ದಯಪಾಲಿಸಿದೆ‌. ಗದಗ ಶಹರ ಪೊಲೀಸರು ಮನೆಗೆ ಬಂದಾಗ ವಾಸ್ತವ ಅರಿವಾಗಿದೆ. ತಕ್ಷಣ ಮನೆಯವರು ನಗರಸಭೆಗೆ ಹೋಗಿ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ, ಈ ವಿಚಾರ ಬೆಳೆಕಿಗೆ ಬಂದಿದೆ. ನಗರಸಭೆ ಯಡವಟ್ಟಿನಿಂದ ನಾವು ಬದುಕಿದ್ದರೂ, ದಾಖಲೆಗಳಲ್ಲಿ ಸಾವನ್ನಪ್ಪಿರುವುದಾಗಿ ಮರಣ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆ ಸಂಸಾರಸ್ಥರು ಗೋಳಾಟ ನಡೆಸಿದ್ದಾರೆ. ಇನ್ನಾದ್ರು ಹಿರಿಯ ಅಧಿಕಾರಿಗಳು ನಗರಸಭೆ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Fri, 23 February 24

Follow Us
ಸಂಜೀವ ಕುಮಾರ್​ ಪಾಂಡ್ರೆ, ಗದಗ
ಸಂಜೀವ ಕುಮಾರ್​ ಪಾಂಡ್ರೆ, ಗದಗ

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ