ಪ್ರಶಾಂತ್ ನೀಲ್ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳೋ ಸಲಾರ್‌ಗೆ ಇಂದು ಅದ್ಧೂರಿ ಮುಹೂರ್ತ

ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಸ್ಯಾಂಡಲ್​ವುಡ್ ನಿರ್ದೇಶಕನ ಸಿನಿಮಾದಲ್ಲಿ ನಟಿಸ್ತಾರೆ ಅಂದಾಗಿಂದ ಸಿನಿಮಾದ ಬಗ್ಗೆ ದೊಡ್ಡ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಪ್ರಭಾಸ್ ಅಭಿನಯದ ಸಲಾರ್​ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳೋದು ಪಕ್ಕಾ ಆಗಿದೆ. ಸಂಕ್ರಾಂತಿ ಶುಭ ಘಳಿಗೆಯಲ್ಲಿ ಸಲಾರ್‌ಗೆ ಮೂಹೂರ್ತ ಕೂಡ ಫಿಕ್ಸ್ ಆಗಿದೆ. ಹಾಗಾದ್ರೆ ಸಲಾರ್ ಅದ್ಧೂರಿ ಮುಹೂರ್ತ ಹೇಗಿರಲಿದೆ? ಶೂಟಿಂಗ್ ಪ್ಲಾನ್ ಏನು ಅನ್ನೋದರ ಡಿಟೇಲ್ಸ್‌ ಇಲ್ಲಿದೆ.

ಪ್ರಶಾಂತ್ ನೀಲ್ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳೋ ಸಲಾರ್‌ಗೆ ಇಂದು ಅದ್ಧೂರಿ ಮುಹೂರ್ತ
ನಟ ಪ್ರಭಾಸ್
Follow us
ಆಯೇಷಾ ಬಾನು
|

Updated on:Jan 15, 2021 | 7:22 AM

ಸಲಾರ್.. ಸೌತ್ ಸಿನಿದುನಿಯಾದಲ್ಲಿ ಸಂಚಲನ ಮೂಡಿಸಿರೋ ಸಿನಿಮಾ. ಸದ್ಯಕ್ಕಂತೂ ಟಾಲಿವುಡ್ ಸ್ಟಾರ್ ಪ್ರಭಾಸ್‌ಗೆ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಾರೆ ಅಂದಾಗಿನಿಂದ ಬಹುದೊಡ್ಡ ನಿರೀಕ್ಷೆ ಶರುವಾಗಿದೆ. ಒಂದು ಕಡೆ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿ ಅಭಿಮಾನಿಗಳನ್ನ ಸೆಳೆಯುತ್ತಿದೆ. ಪ್ರಶಾಂತ್ ನೀಲ್, ರಾಕಿಂಗ್ ಸ್ಟಾರ್ ಯಶ್ ಮೋಡಿಗೆ ಸಿನಿಮಾ ಮಂದಿ ಫಿದಾ ಆಗಿದ್ದಾರೆ.

ಸದ್ಯ ಬಹು ದೊಡ್ಡ ಸಕ್ಸಸ್‌ನ ಅಲೆಯಲ್ಲಿ ತೇಲುತ್ತಿರೋ ಹೊಂಬಾಳೆ ಪ್ರೊಡಕ್ಷನ್ಸ್ ಹಾಗೂ ಕೆಜಿಎಫ್ ತಂಡ ಸಲಾರ್ ಮುಹೂರ್ತದಲ್ಲಿ ಭಾಗಿಯಾಗಲಿದೆ. ಪ್ರಶಾಂತ್ ನೀಲ್ ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳೋ ಘಳಿಗೆಗೆ ಮೂಹೂರ್ತ ಕೂಡ ಕೂಡಿ ಬಂದಿದೆ. ಸದ್ಯಕ್ಕಂತೂ ಸಂಕ್ರಾಂತಿ ಶುಭ ಘಳಿಗೆಯಲ್ಲೇ ಸಲಾರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಜನವರಿ 15 ಅಂದ್ರೆ ಇಂದು ಹೈದರಾಬಾದ್‌ನಲ್ಲಿ ಅದ್ಧೂರಿ ಮುಹೂರ್ತ ನೆರವೇರಲಿದೆ.

ಸಲಾರ್ ಚಿತ್ರತಂಡದ ಪ್ಲಾನ್ ಪ್ರಕಾರ ಜನವರಿ 20 ರಿಂದ ಶೂಟಿಂಗ್ ಕೂಡ ಶುರುವಾಗಲಿದೆ ಅನ್ನೋ ಮಾಹಿತಿ ಇದೆ. ಇನ್ನು ನಿರ್ದೇಶಕ ರಾಜಮೌಳಿ.. ನಟ ಯಶ್, ಪ್ರಭಾಸ್ ಸೇರಿದಂತೆ ಹಲವು ಗಣ್ಯರು ಮುಹೂರ್ತದಲ್ಲಿ ಭಾಗಿಯಾಗಲಿದ್ದಾರಂತೆ.

ಸಲಾರ್ ಸಿನಿಮಾದ ಮುಹೂರ್ತ ಹಾಗೂ ಶೂಟಿಂಗ್‌ನಲ್ಲಿ ಭಾಗಿಯಾಗೋದಕ್ಕೆ ಕೌತುಕನಾಗಿದ್ದೇನೆ. ನನ್ನ ಲುಕ್ ಹೇಗಿರಲಿದೆ ಅನ್ನೋದನ್ನ ಅಭಿಮಾನಿಗಳಿಗೆ ತೋರಿಸಲು ಉತ್ಸುಕನಾಗಿದ್ದೇನೆ ಅಂತ ಟ್ವೀಟ್ ಮಾಡಿರೋದು ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಾಗುವಂತೆ ಮಾಡಿದೆ. ಒಟ್ಟಿನಲ್ಲಿ ಬಾಹುಬಲಿಯಂಥಾ ಸೂಪರ್ ಹಿಟ್ ಸಿನಿಮಾಗಳನ್ನ ಮಾಡಿರೋ ಪ್ರಬಾಸ್‌ಗೆ ಇಷ್ಟು ಕುತೂಹಲ ಇರುವಂಥಾ ಕಥೆ/ನ್ನ ಪ್ರಶಾಂತ್ ನೀಲ್ ಹೇಗೆ ಹೆಣೆದಿದ್ದಾರೆ ಅನ್ನೋದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.

ಪ್ರಭಾಸ್​ ಬೆನ್ನಲ್ಲೇ ಮತ್ತೋರ್ವ ತೆಲುಗು ಸ್ಟಾರ್​ ನಟನಿಗೆ ಪ್ರಶಾಂತ್​ ನೀಲ್​ ಡೈರೆಕ್ಷನ್​?

Published On - 7:22 am, Fri, 15 January 21