ಮನೆ ಕಾಂಪೌಂಡ್ ನಿರ್ಮಾಣ ವಿಚಾರ: ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ದಾಯಾದಿಗಳು
ಮನೆಯ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ದಾಯಾದಿಗಳು ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ಪೆರ್ದೆನಹಳ್ಳಿಯಲ್ಲಿ ನಡೆದಿದೆ.

ಮನೆ ಕಾಂಪೌಂಡ್ ವಿಷಯಕ್ಕೆ ಗಲಾಟೆ
ಕೋಲಾರ: ಮನೆಯ ಕಾಂಪೌಂಡ್ ನಿರ್ಮಾಣ ವಿಚಾರವಾಗಿ ದಾಯಾದಿಗಳು ಕಲ್ಲು, ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ಪೆರ್ದೆನಹಳ್ಳಿಯಲ್ಲಿ ನಡೆದಿದೆ.
ಶ್ರೀರಾಮಪ್ಪ ಮಕ್ಕಳಾದ ಮಂಜುನಾಥ್, ಶಿವರಾಜ್ ಹಾಗೂ ಚಿಕ್ಕ ಕೆಂಪಣ್ಣ ಮಕ್ಕಳಾದ ರವಿ ಮತ್ತು ಪುಟ್ಟರಾಜು ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ವೇಮಗಲ್ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ಬಾಬು ಎದುರು ಗಲಾಟೆ ನಡೆದಿದ್ದು, ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





