- Kannada News Photo gallery ರೋಹಿತ್ ಶರ್ಮಾ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಕೇಳಿದ್ರೆ ಅಚ್ಚರಿ ಪಡ್ತೀರಾ! ಚಿತ್ರಗಳಲ್ಲಿ ನೋಡಿ..
ರೋಹಿತ್ ಶರ್ಮಾ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಕೇಳಿದ್ರೆ ಅಚ್ಚರಿ ಪಡ್ತೀರಾ! ಚಿತ್ರಗಳಲ್ಲಿ ನೋಡಿ..
ರೋಹಿತ್ ಹೆಸರಲ್ಲಿ ಸಾಕಷ್ಟು ದಾಖಲೆಗಳಿವೆ. ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಹೆಚ್ಚಗಾರಿಕೆ ರೋಹಿತ್ ಅವರದ್ದು. ಹಾಗಾದರೆ ರೋಹಿತ್ ಆಸ್ತಿ ಎಷ್ಟು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
Updated on: Jan 07, 2021 | 1:58 PM

ರೋಹಿತ್ ಶರ್ಮಾ ಭಾರತದ ಪ್ರಮುಖ ಆಟಗಾರರಲ್ಲೊಬ್ಬರು. ಟೀಂ ಇಂಡಿಯಾದ ಓಪನರ್ ಆಗಿ ಕಣಕ್ಕೆ ಇಳಿಯೋ ರೋಹಿತ್, ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.

ಹಾಗೆಯೇ ಸಂಪೂರ್ಣ ಫಿಟ್ನೆಸ್ನೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಏಕೆಂದರೆ ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿರಿಸಿ ಯಾವುದೇ ಗಾಯ ಉಲ್ಬಣಗೊಳ್ಳದಂತೆ ಮುನ್ನೆಚ್ಚರಿಕೆವಹಿಸಬೇಕಾಗುತ್ತದೆ. ಹೀಗಾಗಿ ಮೊದಲ ಪಂದ್ಯದಿಂದ ಹೊರಗುಳಿದು ಹಿಟ್ಮ್ಯಾನ್ 2ನೇ ಪಂದ್ಯದ ವೇಳೆ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ರೋಹಿತ್ ಬಿಸಿಸಿಐ ಪಟ್ಟಿಯಲ್ಲಿ ಎ+ ಆಟಗಾರರ ಸಾಲಿನಲ್ಲಿ ನಿಲ್ಲುತ್ತಾರೆ. ಪ್ರತಿ ವರ್ಷ ಬರೋಬ್ಬರಿ 7 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಅವರು. ಇನ್ನು, ಬಿಸಿಸಿಐ ರೋಹಿತ್ಗೆ ಮ್ಯಾಚ್ ಶುಲ್ಕ ಕೂಡ ಪಾವತಿಸುತ್ತದೆ. ಟೆಸ್ಟ್ಗೆ 15 ಲಕ್ಷ ರೂಪಾಯಿ , ಏಕದಿನಕ್ಕೆ 6 ಲಕ್ಷ ರೂಪಾಯಿ ಹಾಗೂ ಟಿ20ಗೆ 3 ಲಕ್ಷ ರೂಪಾಯಿ ನೀಡುತ್ತಿದೆ.

ರೋಹಿತ್ ಶರ್ಮಾ ಐಪಿಎಲ್ ನಲ್ಲಿ ಕೂಡ ಉತ್ತಮ ಪ್ರದರ್ಶನ ನೀಡುವ ಆಟಗಾರರಲ್ಲಿ ಮುಂದಿದ್ದಾರೆ. ಇವರಿಗೆ ಪ್ರತಿ ವರ್ಷ ಮುಂಬೈ ಇಂಡಿಯನ್ಸ್ 15 ಕೋಟಿ ರೂಪಾಯಿ ಪಾವತಿಸುತ್ತದೆ.

CEAT ಟಾಯರ್ಸ್, ನಾಯ್ಸ್, ಹಬ್ಲಾಟ್, ಟ್ರುಸಾಕ್ಸ್ ಮತ್ತು ಡ್ರೀಮ್ 11 ಸೇರಿ ಸಾಕಷ್ಟು ಬ್ರ್ಯಾಂಡ್ಗಳ ರಾಯಭಾರಿ ಆಗಿದ್ದಾರೆ ರೋಹಿತ್. ಇದರಿಂದ ರೋಹಿತ್ 60-70 ಕೋಟಿ ರೂಪಾಯಿ ಗಳಿಸುತ್ತಾರೆ. ಇನ್ನು, ಬ್ರ್ಯಾಂಡ್ಗಳ ಶೂಟ್ಗೆ ಒಂದು ದಿನಕ್ಕೆ ರೋಹಿತ್ ಚಾರ್ಜ್ ಮಾಡೋದು ಬರೋಬ್ಬರಿ ಒಂದು ಕೋಟಿ ರೂಪಾಯಿ.

ಇವರ ಆಸ್ತಿ ಮೌಲ್ಯ ಬರೋಬ್ಬರಿ 130 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರತಿ ವರ್ಷ ಇವರ ಆಸ್ತಿ ಮೌಲ್ಯ ಹೆಚ್ಚುತ್ತಲೇ ಇದೆ.




