ಬೆಂಗಳೂರು: ನನ್ನ ಕುಟುಂಬಕ್ಕೆ ನಾನು ಧನ್ಯವಾದ ಹೇಳುತ್ತೇನೆ. ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಬಳಿಕ ನಟಿ ರಾಗಿಣಿ ಪ್ರತಿಕ್ರಿಯೆ ನೀಡಿದರು.
ಕಾನೂನಿನ ಮೇಲೆ ನನಗೆ ನಂಬಿಕೆ ಇತ್ತು. ನನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ. ಮಾತನಾಡಲು ಇನ್ನೂ ಹಲವಾರು ವಿಷಯಗಳಿವೆ. ಒಂದು ದಿನ ಸುದ್ದಿಗೋಷ್ಠಿ ನಡೆಸಿ ಎಲ್ಲಾ ಹೇಳುತ್ತೇನೆ. ಸದ್ಯಕ್ಕೆ, ಸತ್ಯಮೇವ ಜಯತೆ ಎಂದು ಹೇಳಲು ಬಯಸ್ತೇನೆ. ಈಗ ನನ್ನ ಕುಟುಂಬದ ಜತೆ ಸಮಯ ಕಳೆಯುತ್ತೇನೆ. ಬಳಿಕ ಮುಂದಿನದನ್ನು ಯೋಚನೆ ಮಾಡುತ್ತೇನೆ ಎಂದು ರಾಗಿಣಿ ಹೇಳಿದರು.
ಕೊನೆಗೂ ಪಂಜರದಿಂದ ಹೊರಬಂದ ಅರಗಿಣಿ: ಜೈಲಿನಿಂದ ನಟಿ ರಾಗಿಣಿ ದ್ವಿವೇದಿ ಬಿಡುಗಡೆ