AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಕಾಳಿಮಾತೆಗೆ ಸಮ -ಜೈಲಿನ 4 ಗೋಡೆಯ ಮಧ್ಯೆ 144 ದಿನ ಕಳೆದು, ಬದಲಾದ್ರಾ ರಾಗಿಣಿ?

ಹೆಣ್ಣಿನ ಶಕ್ತಿಯ ಬಗ್ಗೆ ಉಲ್ಲೇಖಿಸುವ ಪೋಸ್ಟ್ ಒಂದನ್ನು ನಟಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ.

ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಕಾಳಿಮಾತೆಗೆ ಸಮ -ಜೈಲಿನ 4 ಗೋಡೆಯ ಮಧ್ಯೆ 144 ದಿನ ಕಳೆದು, ಬದಲಾದ್ರಾ ರಾಗಿಣಿ?
‘ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಕಾಳಿಮಾತೆಗೆ ಸಮ’
KUSHAL V
|

Updated on: Jan 26, 2021 | 7:38 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್​ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಕೋಣೆಯಲ್ಲಿ ಸತತ 144 ದಿನ ಕಳೆದ ನಟಿ ರಾಗಿಣಿ ದ್ವಿವೇದಿ ನಿನ್ನೆಯಷ್ಟೇ ಜಾಮೀನಿನ ಮೇಲೆ ಹೊರಬಂದರು. ಕಾರಾಗೃಹವಾಸದಲ್ಲಿ ತಾವು ಅನುಭವಿಸಿದ ನೋವು, ಯಾತನೆಯ ಬಗ್ಗೆ ಮತ್ತೊಂದು ದಿನ ಮಾತನಾಡುತ್ತೇನೆ ಎಂದು ಹೇಳಿ ಹೊರಟು ಹೋಗಿದ್ದರು.

ಆದರೆ ಇದೀಗ, ನಾಲ್ಕು ಗೋಡೆಯ ಮಧ್ಯೆ 144ದಿನಗಳನ್ನು ಕಳೆದ ನಟಿ ತಮ್ಮ ಬಾಳಿನ ಹಾದಿಯಲ್ಲಿ ಯಾವುದಾದರು ಪರಿವರ್ತನೆ ಕಾಣಲು ಮುಂದಾಗಿದ್ದಾರಾ ಎಂಬ ಮಾತು ಕೇಳಿಬಂದಿದೆ. ಜೊತೆಗೆ, ರಾಗಿಣಿ ತನ್ನೊಳಗಿನ ಶಕ್ತಿಯನ್ನು ಏನಾದರು ಅರಿತರಾ ಎಂಬ ಮಾತು ಸಹ ಕೇಳಿಬಂದಿದೆ.

ಇವೆಲ್ಲಾ ಮಾತುಗಳಿಗೆ ಪುಷ್ಟಿ ನೀಡುವಂತಿದೆ ನಟಿಯ WhatsApp ಡಿ.ಪಿ ಪೋಸ್ಟ್‌. ಹೌದು, ಹೆಣ್ಣಿನ ಶಕ್ತಿಯ ಬಗ್ಗೆ ಉಲ್ಲೇಖಿಸುವ ಪೋಸ್ಟ್ ಒಂದನ್ನು ನಟಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ.

ತನ್ನೊಳಗಿನ ಧೈರ್ಯವನ್ನು ಎಚ್ಚರಗೊಳಿಸುವ ಪ್ರತಿಯೊಬ್ಬ ಹೆಣ್ಣು ದುರ್ಗಾ ಮಾತೆಗೆ ಸಮ. ತನ್ನೊಳಗಿನ ಪರಿವರ್ತನೆಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣು ಕಾಳಿ ಮಾತೆಗೆ ಸಮ. ತನ್ನೊಳಗಿನ ಭಕ್ತಿಯನ್ನು ಜಾಗೃತಗೊಳಿಸುವ ಪ್ರತಿ ಹೆಣ್ಣೂ ಪಾರ್ವತಿಗೆ ಸಮ. ಪ್ರತಿ ಹೆಣ್ಣಲೂ ಆ ಶಕ್ತಿ ದೇವತೆ ಇದ್ದಾಳೆ ಎಂಬ ಪೋಸ್ಟ್​ನ ರಾಗಿಣಿ ತಮ್ಮ WhatsApp ಡಿ.ಪಿ ಪೋಸ್ಟ್‌ಗೆ ಹಾಕಿಕೊಂಡಿದ್ದಾರೆ. ಈ ಮೂಲಕ, ಜೈಲಿನಲ್ಲಿ ತನ್ನೊಳಗಿನ ಶಕ್ತಿಯನ್ನು ನಟಿ ಅರಿತಿರಬೇಕು ಎಂಬ ಮಾತು ಕೇಳಿಬಂದಿದೆ.

ಮಾತಾಡಲು ಇನ್ನೂ ಹಲವಾರು ವಿಷಯಗಳಿವೆ; ಸದ್ಯಕ್ಕೆ ಸತ್ಯಮೇವ ಜಯತೆ ಎಂದು ಹೇಳಲು ಬಯಸ್ತೇನೆ -ರಾಗಿಣಿ ದ್ವಿವೇದಿ

ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಆಟೋ ಚಾಲಕನಿಗೆ ಬಿಜೆಪಿ ಶಾಸಕನಿಂದ ಕಪಾಳಮೋಕ್ಷ; ವೈರಲ್ ವಿಡಿಯೋಗೆ ಆಕ್ರೋಶ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಅಯೋಧ್ಯೆಗೆ ಹೊರಟ ಸಚ್ಚಿದಾನಂದ ಸ್ವಾಮೀಜಿಗೆ ರೈಲಿನಲ್ಲಿ ವಿಶೇಷ ಸೌಲಭ್ಯ
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ