AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆಯಂತೇ ಇಂದೂ ಮಳೆಯ ಆರ್ಭಟ, ಅರಣ್ಯ ಭವನ ಎದುರೇ ಉರುಳಿದ ಮರ!

ಬೆಂಗಳೂರು: ರಾಜಧಾನಿಯಲ್ಲಿ ಇಂದೂ ಮಳೆಯ ಆರ್ಭಟ ಶುರುವಾಗಿದೆ. ದಿನದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇದ್ದಾಗ ಮಳೆ ಸುರಿಯತೊಡಗಿದ್ದು, ದಿಢೀರನೆ ವಾತಾವರಣ ತಂಪು ತಂಪಾಗಿದೆ. ನಿನ್ನೆ ಸಂಜೆ ಇನ್ನೇನು ಕೆಲಸ ಮುಗಿಸಿ ಮನೆಗೆ ಮರಳಬೇಕು ಅನ್ನುವಾಗ ಮಳೆ ಧೋ ಅಂತಾ ಒಂದೆರಡು ಗಂಟೆ ಕಾಲ ಸುರಿದಿತ್ತು. ಆದ್ರೆ ಇಂದು ಸ್ವಲ್ಪ ಮುಂಚಿತವಾಗಿಯೆ ಬಂದಿರುವ ಮಳೆ ಅದಾಗಲೇ ಮಹಾನಗರವನ್ನು ಕತ್ತಲೆಯಾಗಿಸಿದೆ. ಮಳೆಯ ಕರಿಮೋಡಗಳು ಬೆಂಗಳೂರನ್ನು ಆವರಿಸಿಕೊಂಡಿದೆ. ಉತ್ತರ ಭಾರತದಲ್ಲಿ ಕೆಂಡದಂತಹ ಬೇಸಿಗೆ ಮನೆ ಮಾಡಿದೆ. ದಕ್ಷಿಣ ಭಾರತದಲ್ಲಿಯೂ […]

ನಿನ್ನೆಯಂತೇ ಇಂದೂ ಮಳೆಯ ಆರ್ಭಟ, ಅರಣ್ಯ ಭವನ ಎದುರೇ ಉರುಳಿದ ಮರ!
ಸಾಧು ಶ್ರೀನಾಥ್​
| Edited By: |

Updated on:May 27, 2020 | 8:10 PM

Share

ಬೆಂಗಳೂರು: ರಾಜಧಾನಿಯಲ್ಲಿ ಇಂದೂ ಮಳೆಯ ಆರ್ಭಟ ಶುರುವಾಗಿದೆ. ದಿನದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇದ್ದಾಗ ಮಳೆ ಸುರಿಯತೊಡಗಿದ್ದು, ದಿಢೀರನೆ ವಾತಾವರಣ ತಂಪು ತಂಪಾಗಿದೆ. ನಿನ್ನೆ ಸಂಜೆ ಇನ್ನೇನು ಕೆಲಸ ಮುಗಿಸಿ ಮನೆಗೆ ಮರಳಬೇಕು ಅನ್ನುವಾಗ ಮಳೆ ಧೋ ಅಂತಾ ಒಂದೆರಡು ಗಂಟೆ ಕಾಲ ಸುರಿದಿತ್ತು. ಆದ್ರೆ ಇಂದು ಸ್ವಲ್ಪ ಮುಂಚಿತವಾಗಿಯೆ ಬಂದಿರುವ ಮಳೆ ಅದಾಗಲೇ ಮಹಾನಗರವನ್ನು ಕತ್ತಲೆಯಾಗಿಸಿದೆ. ಮಳೆಯ ಕರಿಮೋಡಗಳು ಬೆಂಗಳೂರನ್ನು ಆವರಿಸಿಕೊಂಡಿದೆ.

ಉತ್ತರ ಭಾರತದಲ್ಲಿ ಕೆಂಡದಂತಹ ಬೇಸಿಗೆ ಮನೆ ಮಾಡಿದೆ. ದಕ್ಷಿಣ ಭಾರತದಲ್ಲಿಯೂ ಬಹುತೇಕ ಕಡೆ ಬಿಸಿಲು ಜೋರಾಗಿದೆಯಾದರೂ ಬೆಂಗಳೂರು ಸೇರಿದಂತೆ ಒಳನಾಡು ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದೆ. ಇದರಿಂದ ಕೊಂಚ ತಂಪು ವಾತಾವರಣ ಮೂಡಿದೆ.

ಬೆಂಗಳೂರು ನಗರದ ಹಲವೆಡೆ ಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ಶಿವಾಜಿನಗರ, ಕೆ.ಆರ್​.ಮಾರುಕಟ್ಟೆ, ಮೆಜೆಸ್ಟಿಕ್, ಕಾರ್ಪೊರೇಷನ್​, ಪೀಣ್ಯ, ದಾಸರಹಳ್ಳಿ, ನಾಗಸಂದ್ರ, ಬಾಗಲಗುಂಟೆ, ಮಲ್ಲಸಂದ್ರ, ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ನಾಯಂಡಹಳ್ಳಿ, ಬನಶಂಕರಿ, ನಾಗರಬಾವಿ ಸೇರಿದಂತೆ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆ ಬೀಳುತ್ತಿದೆ. ದಿಢೀರ್ ಮಳೆಗೆ ವಾಹನ ಸವಾರರು ಚೆಲ್ಲಾಪಿಲ್ಲಿಯಾಗಿದ್ದಾರೆ. ಕೆ.ಆರ್.ಮಾರುಕಟ್ಟೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಸ್ಥಿತಿ ಅತಂತ್ರವಾಗಿದೆ. ಮಳೆ ನೀರಲ್ಲಿ ಸೊಪ್ಪು, ತರಕಾರಿಗಳು ಕೊಚ್ಚಿ ಹೋಗ್ತಿದೆ.

ಮರ ಬಿದ್ದು ಆಟೋ ಜಖಂ: ಗುಡುಗು ಸಹಿತ ಭಾರೀ ಮಳೆ ಶುರುವಾಗುತ್ತಿದ್ದಂತೆ ಮಲ್ಲೇಶ್ವರದಲ್ಲಿರುವ ಅರಣ್ಯ ಭವನದ ಎದುರಿಗೇ ದೊಡ್ಡ ಮರವೊಂದು ಸೀದಾ ಆಟೋ ಮೇಲೆ ಬಿದ್ದಿದೆ. ಆಟೋ ಜಖಂ ಆಗಿದ್ದು, ಮರ ಬಿದ್ದ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ​ಬಳಿ ಟ್ರಾಫಿಕ್​ ಜಾಮ್​ ಆಗಿದೆ.

ಮಲ್ಲೇಶ್ವರಂನಲ್ಲಿ ಕಾರು ಜಖಂ: ಮೆಜೆಸ್ಟಿಕ್​ನಿಂದ ಯಶವಂತಪುರಕ್ಕೆ ಹೋಗುವ ಮಾರ್ಗದಲ್ಲಿ ಮಲ್ಲೇಶ್ವರಂ ಕಾಡು ಮಲ್ಲಿಕಾರ್ಜುನ ದೇವಸ್ಥಾನದ ಹತ್ತಿರ ಮರ ಬಿದ್ದ ಪರಿಣಾಮ ಒಂದು ಕಾರು ಜಖಂ ಆಗಿದೆ. ಬಿಎಂಟಿಸಿ ಬಸ್​ಗೆ ಅಡ್ಡಲಾಗಿ ಮರದ ಕೊಂಬೆಗಳು ಬಿದ್ದಿವೆ. ಇದಿರಂದ ಕಿಲೋ ಮೀಟರ್​ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.

ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ‌ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಮಳೆಯಾಗುತ್ತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 30 ರಿಂದ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ.

Published On - 4:08 pm, Wed, 27 May 20