ಮಸಣ ಜಲಾವೃತವಾಗಿದ್ದಕ್ಕೆ ರಸ್ತೆ ಬದಿಯಲ್ಲೇ ಅಂತ್ಯಕ್ರಿಯೆ ನೆರವೇರಿಸಿದ ಸಂಬಂಧಿಕರು
ಗದಗ: ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ರಿಲೀಸ್ ಆದ ಹಿನ್ನೆಲೆಯಲ್ಲಿ ಮಲಪ್ರಭೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ. ಇದರ ಪರಿಣಾಮ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಸ್ಮಶಾನವು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹಾಗಾಗಿ, ಮೃತನೊಬ್ಬನ ಅಂತ್ಯಕ್ರಿಯೆ ನೆರೆವೇರಿಸಲು ಸ್ಮಶಾನಕ್ಕೆ ಬಂದ ಆತನ ಸಂಬಂಧಿಕರು ಬೇರೆ ದಾರಿ ಕಾಣದೆ ಮಸಣದ ರಸ್ತೆ ಬದಿಯಲ್ಲೇ ಅಂತ್ಯ ಅಂಸ್ಕಾರ ನೆರವೇರಿಸಿರುವ ಘಟನೆ ಎದುರಾಗಿದೆ. ಅಂದ ಹಾಗೆ, ಸ್ಮಶಾನವು ಕಳೆದ ವಾರವಷ್ಟೇ ಮಲಪ್ರಭಾ ನದಿಯ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಇದೀಗ ಈ ಬಾರಿಯೂ […]

ಗದಗ: ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ರಿಲೀಸ್ ಆದ ಹಿನ್ನೆಲೆಯಲ್ಲಿ ಮಲಪ್ರಭೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ.

ಇದರ ಪರಿಣಾಮ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರು ಗ್ರಾಮದ ಸ್ಮಶಾನವು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಹಾಗಾಗಿ, ಮೃತನೊಬ್ಬನ ಅಂತ್ಯಕ್ರಿಯೆ ನೆರೆವೇರಿಸಲು ಸ್ಮಶಾನಕ್ಕೆ ಬಂದ ಆತನ ಸಂಬಂಧಿಕರು ಬೇರೆ ದಾರಿ ಕಾಣದೆ ಮಸಣದ ರಸ್ತೆ ಬದಿಯಲ್ಲೇ ಅಂತ್ಯ ಅಂಸ್ಕಾರ ನೆರವೇರಿಸಿರುವ ಘಟನೆ ಎದುರಾಗಿದೆ.
ಅಂದ ಹಾಗೆ, ಸ್ಮಶಾನವು ಕಳೆದ ವಾರವಷ್ಟೇ ಮಲಪ್ರಭಾ ನದಿಯ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಇದೀಗ ಈ ಬಾರಿಯೂ ಜಲಾವೃತಗೊಂಡಿದೆ. ಹಾಗಾಗಿ, ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಏನು ಮಾಡೋದು ಅನ್ನೋ ಪ್ರಶ್ನೆ ಗ್ರಾಮಸ್ಥರನ್ನ ಕಾಡುತ್ತಿದೆ.




