Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗನ್ ಹಿಡಿದಿದ್ದ ಕೈಗಳು ನುಡಿಸುತ್ತಿವೆ ಮ್ಯೂಸಿಕ್.. ರಿಟೈರ್ಡ್ ಆದ್ಮೇಲೆ ಈ ಮಾಜಿ ಯೋಧನಿಗೆ ಸಂಗೀತವೇ ಜೀವನ, ಮಕ್ಕಳಿಗೆ ಹೇಳಿಕೊಡ್ತಿದ್ದಾರೆ ಸಂಗೀತ ಪಾಠ

ಹಲವಾರು ವರ್ಷ ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನೆಯ ದಾರಿ ಹಿಡಿದಿದ್ದಾರೆ. ಅವರ ಕೈಯಲ್ಲಿ ಎಂಟು ವಾದನಗಳಲ್ಲಿ ಸುಮಧುರ ಸಂಗೀತ ಅರಳುತ್ತದೆ. ಯಾರವರು..? ಏನವರ ಸಂಗೀತ ಸಾಧನೆ ಅನ್ನೋದನ್ನ ಇಲ್ಲಿ ತಿಳಿಯಿರಿ.

ಗನ್ ಹಿಡಿದಿದ್ದ ಕೈಗಳು ನುಡಿಸುತ್ತಿವೆ ಮ್ಯೂಸಿಕ್.. ರಿಟೈರ್ಡ್ ಆದ್ಮೇಲೆ ಈ ಮಾಜಿ ಯೋಧನಿಗೆ ಸಂಗೀತವೇ ಜೀವನ, ಮಕ್ಕಳಿಗೆ ಹೇಳಿಕೊಡ್ತಿದ್ದಾರೆ ಸಂಗೀತ ಪಾಠ
ತಬಲಾ ಬಾರಿಸುತ್ತಿರುವ ಶಂಕರ್ ಲಮಾಣಿ
Follow us
ಆಯೇಷಾ ಬಾನು
|

Updated on: Mar 17, 2021 | 7:16 AM

ಬಾಗಲಕೋಟೆ: ಹಲವಾರು ವರ್ಷ ಗನ್ ಹಿಡಿದು ಹೋರಾಡಿದ ವೀರಯೋಧ, ಈಗ ಸಂಗೀತ ಸಾಧನೆಯ ದಾರಿ ಹಿಡಿದಿದ್ದಾರೆ. ಅವರ ಕೈಯಲ್ಲಿ ಎಂಟು ವಾದನಗಳಲ್ಲಿ ಸುಮಧುರ ಸಂಗೀತ ಅರಳುತ್ತದೆ. ಯಾರವರು..? ಏನವರ ಸಂಗೀತ ಸಾಧನೆ ಅನ್ನೋದನ್ನ ಇಲ್ಲಿ ತಿಳಿಯಿರಿ.

ತಬಲಾ.. ಕ್ಯಾಸಿಯೊ.. ಡ್ರಮ್.. ಗಿಟಾರ್.. ಹೀಗೆ ವಿವಿಧ ವಾದ್ಯ ನುಡಿಸುವ ಮಾಜಿ ಯೋಧನ ಹೆಸರು ಶಂಕರ್ ಲಮಾಣಿ. ಸಿಆರ್​ಪಿಎಫ್​ನಲ್ಲಿ ದೇಶ ಸೇವೆ ಮಾಡಿದ ವೀರಯೋಧ. ಸೇನೆಯಲ್ಲಿದ್ದಾಗಲೂ.. ಸಂಗೀತ ಸಾಧನ ಕೈ ಬಿಡದ ಇವರು, ಈಗ ಸುಮಧುರ ಸಂಗೀತ ಹೊರಡಿಸುತ್ತಿದ್ದಾರೆ. 23 ವರ್ಷ ಸಿಆರ್​ಪಿಎಫ್​ನಲ್ಲಿ ಸೇವೆ ಸಲ್ಲಿಸಿ, ಬಳಿಕ ಊರಿಗೆ ವಾಪಸ್ ಬಂದ ಶಂಕರ್ ಲಮಾಣಿ ಸಂಗೀತ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಅನೇಕ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದು, ಸಂಗೀತ ಲೋಕವನ್ನೇ ಸೃಷ್ಟಿ ಮಾಡಿದ್ದಾರೆ.

Retired CRPF teaching music

ಶಂಕರ್ ಲಮಾಣಿ

ಬಾಲ್ಯದಿಂದಲೂ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದ ಶಂಕರ್ ಲಮಾಣಿ, ಗದಗದ ಪುಟ್ಟರಾಜ ಗವಾಯಿಗಳ ಮಠ, ಗುಳೇದಗುಡ್ಡ ಪಂಚಾಕ್ಷರಿ ಸಂಗೀತ ವಿದ್ಯಾಲಯದಲ್ಲಿ ಸಂಗೀತಾಭ್ಯಾಸ ಮಾಡಿದ್ರು. 1994 ರಲ್ಲಿ ಸಿಆರ್​ಪಿಎಫ್ ಸೇರಿ ದೇಶದ ವಿವಿಧ ಭಾಗದಲ್ಲಿ ಕೆಲಸ ಮಾಡಿದ್ರು. ಆಗ ಸಿಆರ್​ಪಿಎಫ್ ಮ್ಯೂಜಿಕ್ ಬ್ಯಾಂಡ್​ನಲ್ಲಿ ಹತ್ತು ವರ್ಷಸೇವೆ ಸಲ್ಲಿಸಿದ್ದಾರೆ. 2016 ರಲ್ಲಿ ನಿವೃತ್ತರಾದ ಶಂಕರ್ ಲಮಾಣಿ, ಪ್ರತಿನಿತ್ಯ ಮಕ್ಕಳಿಗೆ ಸಂಗೀತ ಹೇಳಿಕೊಡುತ್ತಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು, ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಒಬ್ಬ ಯೋಧ ಇಂದು ಸಂಗೀತ ವಾದ್ಯ ಹಿಡಿದು ಸಂಗೀತ ಪಾಠ ಹೇಳುತ್ತಿದ್ದಾರೆ. ಇವರ ಗರಡಿಯಲ್ಲಿ ಅನೇಕ ವಿದ್ಯಾರ್ಥಿಗಳು ಪಳಗುತ್ತಿದ್ದು, ಮಾಜಿ ಯೋಧನ ಕಾರ್ಯವನ್ನ ಜನ ಶ್ಲಾಘಿಸ್ತಿದ್ದಾರೆ.

Retired CRPF teaching music

ಶಂಕರ್ ಲಮಾಣಿ

Retired CRPF teaching music

ಶಂಕರ್ ಲಮಾಣಿ

ಇದನ್ನೂ ಓದಿ: International Women’s Day 2021: ಕೊರೊನಾ ವಿರುದ್ಧ ದಿಟ್ಟ ಹೋರಾಟ; ಊಟ-ನಿದ್ದೆಯೂ ಇರಲಿಲ್ಲ, ಸಂಗೀತವೇ ಕೈ ಹಿಡಿಯಿತು ಎನ್ನುತ್ತಾರೆ ಈ ವೈದ್ಯೆ

ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
ಧನ್ವೀರ್ ಮದುವೆಗೆ ಯಾವ ಬಟ್ಟೆ ಧರಿಸಬೇಕು? ಪ್ಲ್ಯಾನ್ ರಿವೀಲ್ ಮಾಡಿದ ದಾಸ
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
VIDEO: ರಶೀದ್ ಖಾನ್ ವಿಚಿತ್ರ ಶಾಟ್, ಯಶಸ್ವಿ ಜೈಸ್ವಾಲ್ ಅದ್ಭುತ ಕ್ಯಾಚ್
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
ಅತಿಥಿಗಳಿಗೆ ನೀಡುವ ಆಹಾರದ ಪುಣ್ಯ ಹೇಗೆ ಸಿಗುತ್ತೆ ಗೊತ್ತಾ?
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
Daily Horoscope: ಈ ರಾಶಿಯವರಿಗೆ ವಿವಾಹ ಯೋಗ ಕೂಡಿಬರಲಿದೆ
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ