ಯಾದಗಿರಿ: ಜಿಲ್ಲೆಯು ಸಹ ಕೊರೊನಾ ಸುಳಿಯಲ್ಲಿ ಸಿಲುಕಿದೆ. ದಿನೇ ದಿನೆ ಪತ್ತೆಯಾಗುತ್ತಿರುವ ಹೊಸ ಕೇಸ್ಗಳಿಂದ ಜನ ನಲುಗಿ ಹೋಗಿದ್ದಾರೆ. ಆದರೆ, ಈ ನಡುವೆ ನಿವೃತ್ತಿ ಹೊಂದಿದ ನೆಚ್ಚಿನ ಮುಖ್ಯ ಶಿಕ್ಷಕರಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿದ ಸನ್ನಿವೇಶ ಜಿಲ್ಲೆಯ ವಡಗೇರ ತಾಲೂಕಿನ ನೀಲಹಳ್ಳಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕಳೆದ 2 ದಿನಗಳ ಹಿಂದೆ ನೀಲಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಶರಣಪ್ಪ ನಡುವಿನಕೇರೆ ಕರ್ತವ್ಯದಿಂದ ನಿವೃತ್ತರಾದರು. ನೆಚ್ಚಿನ ಶಿಕ್ಷಕರಾಗಿದ್ದ ಶರಣಪ್ಪರಿಗೆ ಅವರ ಶಿಷ್ಯವೃಂದ ಹಾಗೂ ಗ್ರಾಮಸ್ಥರು ಅದ್ಧೂರಿಯಾದ ಬೀಳ್ಕೊಡುಗೆ ಕಾರ್ಯಕ್ರಮವನ್ನ ಆಯೋಜಿಸಿದ್ದರು.
ವಿದ್ಯಾರ್ಥಿಗಳು Present ಸರ್, ಸಾಮಾಜಿಕ ಅಂತರ Absent ಸರ್!
ಶರಣಪ್ಪರಿಗೆ ಅದ್ಧೂರಿ ಸನ್ಮಾನ ನೀಡುವುದರ ಜೊತೆಗೆ ರಥದಲ್ಲಿ ಕೂರಿಸಿ ಗ್ರಾಮದೆಲ್ಲೆಲ್ಲಾ ಮೆರವಣಿಗೆ ಸಹ ಮಾಡಿದರು. ಮೆರವಣಿಗೆಯಲ್ಲಿ ನೂರಾರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸಹ ಭಾಗಿಯಾದರು. ಈ ನಡುವೆ ಸಾಮಾಜಿಕ ಅಂತರ ಪಾಲಿಸೋದು ಏನಾಯ್ತು ಅಂತಾ ಕೇಳೋದೂ ಬೇಡ. ಗುಂಪುಗುಂಪಾಗಿ ಮೆರವಣಿಗೆ ನಡೆಸಿದ ನೀಲಹಳ್ಳಿಯ ಗ್ರಾಮಸ್ಥರೇ ಇದಕ್ಕೆ ಉತ್ತರ ನೀಡಬೇಕು. ಒಟ್ನಲ್ಲಿ ಮೇಷ್ಟ್ರ ಕ್ಲಾಸ್ನಲ್ಲಿ ಓದಿದ್ದ ಎಲ್ಲಾ ವಿದ್ಯಾರ್ಥಿಗಳು Present ಸರ್ ಎಂದು ಹಾಜರಿ ಕೂಗಿದ್ರೂ ಸಾಮಾಜಿಕ ಅಂತರ ಮಾತ್ರ Absent ಸರ್ ಎಂಬುವಂತೆ ಇತ್ತು.
Published On - 7:14 pm, Thu, 16 July 20