ಕೊರೊನಾ ರಜಾ ಸಮಯದಲ್ಲಿ ಮಕ್ಕಳಿಗಾಗಿ ಶಿಕ್ಷಕರು ಮಾಡಿದ್ದೇನು ಗೊತ್ತಾ.?

ಹಾವೇರಿ: ಕೊರೊನಾ ಆರ್ಭಟ ಶುರುವಾದ ಮೇಲೆ ಶಾಲೆಗೆ ರಜೆ‌ ಇದೆ. ಶಾಲೆಗೆ ಮಕ್ಕಳು ಬರುತ್ತಿಲ್ಲ. ಶಿಕ್ಷಕರು ಶಾಲೆಗೆ ಬಂದು ಹೋಗುತ್ತಿದ್ದಾರೆ. ಆದರೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿರುವ ಸರಕಾರಿ ಶಾಲೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. 3೦೦ಕ್ಕೂ ಅಧಿಕ ಮಕ್ಕಳಿದ್ದ ಶಾಲೆಗೆ ಕುಡಿಯುವ ನೀರಿಗೆ ಟ್ಯಾಂಕ್‌ ಇರಲಿಲ್ಲ. ಕೊರೊನಾ ರಜೆ ಸಮಯವನ್ನೆ ಸದುಪಯೋಗ ಮಾಡಿಕೊಂಡ ಈ ಶಾಲೆ ಶಿಕ್ಷಕರು ಮಕ್ಕಳಿಗಾಗಿ 10 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿದ್ದಾರೆ. ಬಿಸಿಯೂಟದ ನಂತರ ಮಕ್ಕಳು,ನೀರಿಗಾಗಿ ಪಕ್ಕದ‌ […]

ಕೊರೊನಾ ರಜಾ ಸಮಯದಲ್ಲಿ ಮಕ್ಕಳಿಗಾಗಿ ಶಿಕ್ಷಕರು ಮಾಡಿದ್ದೇನು ಗೊತ್ತಾ.?
sadhu srinath

| Edited By: Ayesha Banu

Aug 16, 2020 | 11:18 AM

ಹಾವೇರಿ: ಕೊರೊನಾ ಆರ್ಭಟ ಶುರುವಾದ ಮೇಲೆ ಶಾಲೆಗೆ ರಜೆ‌ ಇದೆ. ಶಾಲೆಗೆ ಮಕ್ಕಳು ಬರುತ್ತಿಲ್ಲ. ಶಿಕ್ಷಕರು ಶಾಲೆಗೆ ಬಂದು ಹೋಗುತ್ತಿದ್ದಾರೆ. ಆದರೆ ಹಾವೇರಿ ನಗರದ ನಾಗೇಂದ್ರಮಟ್ಟಿಯಲ್ಲಿರುವ ಸರಕಾರಿ ಶಾಲೆ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. 3೦೦ಕ್ಕೂ ಅಧಿಕ ಮಕ್ಕಳಿದ್ದ ಶಾಲೆಗೆ ಕುಡಿಯುವ ನೀರಿಗೆ ಟ್ಯಾಂಕ್‌ ಇರಲಿಲ್ಲ. ಕೊರೊನಾ ರಜೆ ಸಮಯವನ್ನೆ ಸದುಪಯೋಗ ಮಾಡಿಕೊಂಡ ಈ ಶಾಲೆ ಶಿಕ್ಷಕರು ಮಕ್ಕಳಿಗಾಗಿ 10 ಸಾವಿರ ಲೀಟರ್ ಸಾಮರ್ಥ್ಯದ ಕುಡಿಯುವ ನೀರಿನ ಟ್ಯಾಂಕ್ ಕಟ್ಟಿದ್ದಾರೆ.

ಬಿಸಿಯೂಟದ ನಂತರ ಮಕ್ಕಳು,ನೀರಿಗಾಗಿ ಪಕ್ಕದ‌ ಮನೆಗಳಿಗೆ ಸುತ್ತಾಡುವ ಪರಿಸ್ಥಿತಿ ಇತ್ತು.. ನಗರದ ನಾಗೇಂದ್ರನಮಟ್ಟಿಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂಬರ್ 8ರಲ್ಲಿ ಒಂದರಿಂದ ಎಂಟನೆ ತರಗತಿಯವರೆಗೆ ಕಲಿಸಲಾಗುತ್ತಿದೆ. 360 ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಶಾಲೆಗೆ ಬರುವ ಮಕ್ಕಳಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಬಿಸಿಯೂಟ ಸೇವಿಸಿದ ನಂತರ ಶಾಲೆ ಮಕ್ಕಳು ಕುಡಿಯುವ ನೀರಿಗಾಗಿ ಶಾಲೆ ಪಕ್ಕದ‌ ಮನೆಗಳಿಗೆ ಸುತ್ತಾಡುವ ಪರಿಸ್ಥಿತಿ ಇತ್ತು.

ಶಾಲೆ ಶಿಕ್ಷಕರು ನಗರಸಭೆ ಸೇರಿದಂತೆ‌ ಅನೇಕರಿಗೆ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಹೇಳಿದ್ದರು. ಆದರೆ ಯಾರೂ ಶಾಲಾ‌ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಕೆಲಸಕ್ಕೆ ಕೈ ಹಾಕಿರಲಿಲ್ಲ. ಈಗ ಎಲ್ಲೆಲ್ಲೂ ಕೊರೊನಾ ಆರ್ಭಟವಿದೆ. ಶಾಲೆಗೂ ರಜೆ ಇದೆ. ಕೊರೊನಾ ರಜೆ ಸಮಯವನ್ನೆ ಶಾಲೆ ಶಿಕ್ಷಕರು ಸದುಪಯೋಗ ಮಾಡಿಕೊಂಡಿದ್ದಾರೆ. ತಾವೇ ಸ್ವತಃ ಸಲಿಕೆ, ಗುದ್ದಲಿ ಹಿಡಿದು ಕಲ್ಲು, ಮಣ್ಣು, ಮರಳು, ಸಿಮೆಂಟ್‌ ಖರೀದಿಸಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ.

ಶಾಲಾ ಶಿಕ್ಷಕರೆ ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ.. ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಗಾರೆ ಕೆಲಸ‌ ಮಾಡುತ್ತಿರುವುದರಿಂದ ಅವರ ಸಹಕಾರದಿಂದ ಶಾಲೆಯ ಐದು ಜನ ಶಿಕ್ಷಕರು ಸೇರಿಕೊಂಡು ನೀರಿನ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಏಪ್ರೀಲ್ ತಿಂಗಳಲ್ಲಿ ಕೆಲಸ ಆರಂಭಿಸಿ ಮೂರರಿಂದ ಮೂರೂವರೆ ತಿಂಗಳ ಕಾಲ ಶ್ರಮವಹಿಸಿ ಮಕ್ಕಳಿಗಾಗಿ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸಿದ್ದಾರೆ. ಸುಮಾರು ಹತ್ತು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ ನಿರ್ಮಿಸಿದ್ದಾರೆ.

ಶಾಲಾ‌ ಶಿಕ್ಷಕರು ಶಾಲಾ ಆವರಣದಲ್ಲಿ ಸಿಕ್ಕ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ತಮ್ಮ ಕೈಲಾದಷ್ಟು ಸ್ವಂತ ಹಣ ಸೇರಿಸಿ ಈ ಕೆಲಸ ಮಾಡಿದ್ದಾರೆ. ಶಾಲೆಯ ಮೇಲೆ ಪ್ರೀತಿ ಹೊಂದಿದ ಕೆಲವರು ಅಲ್ಪಸ್ವಲ್ಪ ಹಣಕಾಸಿನ ನೆರವು ಸಹ ನೀಡಿದ್ದಾರೆ. ಅದನ್ನೆಲ್ಲ ಬಳಸಿಕೊಂಡು ಶಿಕ್ಷಕರು ಮರಳು, ಸಿಮೆಂಟ್,‌ ಕಡಿ, ಇಟ್ಟಿಗೆ ಖರೀದಿಸಿ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಶಾಲೆಯಲ್ಲಿ 360 ವಿದ್ಯಾರ್ಥಿಗಳು ಇರುವುದರಿಂದ ನೀರು ಕುಡಿಯುವುದಕ್ಕೆ ಮುಗಿಬೀಳುವುದು ತಪ್ಪಲಿ ಎಂದು ಟ್ಯಾಂಕಿಗೆ ಏಳು ನಲ್ಲಿಗಳನ್ನು ಅಳವಡಿಸಿದ್ದಾರೆ. ನೀರಿನ ಟ್ಯಾಂಕ್‌ ಇರುವ ಜಾಗಕ್ಕೆ ದೊಡ್ಡದಾದ ಗೇಟ್ ಅಳವಡಿಸಿದ್ದಾರೆ.

ಒಂದು ವೇಳೆ‌ ನಲ್ಲಿ ನೀರು ಕೆಳಕ್ಕೆ ಬಿದ್ರೆ ವೇಸ್ಟ್ ಆಗಿ ಹರಿದು ಹೋಗದಂತೆ ವ್ಯವಸ್ಥೆ ಮಾಡಿದ್ದಾರೆ. ಶಾಲಾ ಮಕ್ಕಳು ಕುಡಿಯುವ ನೀರಿಗೆ ಪರಿತಪಿಸಿ, ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಾಲೆ ಶಿಕ್ಷಕರೆ ಕೊರೊನಾ ರಜೆ ಸಮಯದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ್ದಾರೆ. ಶಾಲಾ ಮಕ್ಕಳಿಗೆ ಆಗುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಿಕ್ಷಕರೆ ಟ್ಯಾಂಕ್ ನಿರ್ಮಿಸಿದ್ದಾರೆ.

ಮೂವತ್ತು ಸಾವಿರ ರುಪಾಯಿಗೂ ಅಧಿಕ ಹಣ ಖರ್ಚು ಮಾಡಿ ಹತ್ತು ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್‌ ನಿರ್ಮಿಸಿದ್ದಾರೆ. ಕೊರೊನಾ ರಜೆ‌ ಸಮಯವನ್ನೆ ಉಪಯೋಗ ಮಾಡಿಕೊಂಡು ಶಾಲೆ ಶಿಕ್ಷಕರು ಮಕ್ಕಳ‌ ಕುಡಿಯುವ ನೀರಿನ ದಾಹ ನೀಗಿಸಲು ಮಾಡಿರುವ ಕೆಲಸ ನಿಜಕ್ಕೂ ಮಾದರಿ.-ಪ್ರಭುಗೌಡ.ಎನ್.ಪಾಟೀಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada