ದಕ್ಷಿಣ ಆಫ್ರಿಕಾ ಸೋಂಕು ಎಂದು ರಾಂಗ್​ ರಿಪೋರ್ಟ್​.. ಆರೋಗ್ಯ ಇಲಾಖೆ ವಿರುದ್ಧ ಶಿವಮೊಗ್ಗ ವ್ಯಾಪಾರಿ ಆಕ್ರೋಶ

ಕೊವಿಡ್​ ಟೆಸ್ಟ್​ ವರದಿ ನೀಡುವುದು ವಿಳಂಬ ಮಾಡಿ ಎಡವಟ್ಟು ಮಾಡಲಾಗಿದೆ. ಅನಗತ್ಯವಾಗಿ ರೂಪಾಂತರಿ ವೈರಸ್​ ತಗುಲಿದೆ ಎಂದು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿನಾಕಾರಣ ನನಗೆ, ನನ್ನ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದಾರೆ ಎಂದು ಶಿವಮೊಗ್ಗ ವ್ಯಕ್ತಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ದಕ್ಷಿಣ ಆಫ್ರಿಕಾ ಸೋಂಕು ಎಂದು ರಾಂಗ್​ ರಿಪೋರ್ಟ್​.. ಆರೋಗ್ಯ ಇಲಾಖೆ ವಿರುದ್ಧ ಶಿವಮೊಗ್ಗ ವ್ಯಾಪಾರಿ ಆಕ್ರೋಶ
ನೊಂದ ಕುಟುಂಬದಿಂದ ಅಧಿಕಾರಿಗಳಿಗೆ ತರಾಟೆ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on:Mar 12, 2021 | 2:51 PM

ಶಿವಮೊಗ್ಗ: ಕೆಲ ದಿನಗಳ ಹಿಂದೆ ದುಬೈನಿಂದ ಬಂದಿದ್ದ ಶಿವಮೊಗ್ಗ ಮೂಲಕದ ವ್ಯಕ್ತಿಯಲ್ಲಿ ದಕ್ಷಿಣ ಆಫ್ರಿಕಾದ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿತ್ತು. ಬಳಿಕ ವ್ಯಕ್ತಿಯ ಕುಟುಂಬ ಸೇರಿ ಏರಿಯಾದ ಜನರಿಗೆಲ್ಲ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಸದ್ಯ ಈಗ ವ್ಯಕ್ತಿಯ ಕೊರೊನಾ ವರದಿ ನೆಗೆಟಿವ್ ಬಂದಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಆದ್ರೆ ಇಲ್ಲೊಂದು ದೊಡ್ಡ ಎಡವಟ್ಟು ಸಂಭವಿಸಿದ್ದು ನನ್ನ ಬಾಳು ಅತಂತ್ರವಾಗಿದೆ ಎಂದು ಶಿವಮೊಗ್ಗದ ವ್ಯಕ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಕೊವಿಡ್​ ಟೆಸ್ಟ್​ ವರದಿ ನೀಡುವುದು ವಿಳಂಬ ಮಾಡಿ ಎಡವಟ್ಟು ಮಾಡಲಾಗಿದೆ. ಅನಗತ್ಯವಾಗಿ ರೂಪಾಂತರಿ ವೈರಸ್​ ತಗುಲಿದೆ ಎಂದು ನನ್ನನ್ನು ಮತ್ತು ನನ್ನ ಕುಟುಂಬಸ್ಥರನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿನಾಕಾರಣ ನನಗೆ, ನನ್ನ ಕುಟುಂಬಕ್ಕೆ ತೊಂದರೆ ಕೊಟ್ಟಿದ್ದಾರೆ ಎಂದು ಶಿವಮೊಗ್ಗ ವ್ಯಕ್ತಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಫೆಬ್ರವರಿ 22ರಂದು ಸ್ಯಾಂಪಲ್ ಪಡೆದು ಮಾರ್ಚ್ 10ರಂದು ವರದಿ ನೀಡಲಾಗಿದೆ. ಅಂದು ದಕ್ಷಿಣ ಆಫ್ರಿಕಾ ರೂಪಾಂತರಿ ವೈರಸ್​ ಎಂದು ರಿಪೋರ್ಟ್ ನೀಡಿದ್ದಾರೆ. ಆದ್ರೆ ನಿನ್ನೆ(ಮಾರ್ಚ್ 11) ಬಂದಿರುವ ಕೊವಿಡ್​ ರಿಪೋರ್ಟ್​ನಲ್ಲಿ ನೆಗೆಟಿವ್​ ಇದೆ. ವಿನಾಕಾರಣ ನನ್ನ, ಕುಟುಂಬದ ತೇಜೋವಧೆ ಮಾಡಿದ್ದಾರೆ ಎಂದು ಕೊರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಏರಿಯಾ ಜನ ನಮ್ಮನೆ ಬಳಿ ಯಾರೂ ಸುಳಿಯುತ್ತಿಲ್ಲ. ದಿನಸಿ ಅಂಗಡಿ ಇಟ್ಟುಕೊಂಡು ಬದುಕ್ತಿದ್ದ ಕುಟುಂಬ ಅತಂತ್ರವಾಗಿದೆ. ನಾವು ಬದುಕುವುದು ಹೇಗೆಂದು ಕುಟುಂಬ ಕಣ್ಣೀರಿಡುತ್ತಿದೆ. ಮನೆ ಬಳಿ ಬಂದಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೊಂದ ಕುಟುಂಬಸ್ಥರು ಮತ್ತು ಸಂಬಂಧಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ನಿರ್ಲಕ್ಷ್ಯದಿಂದ ನಮ್ಮ ಕುಟುಂಬಕ್ಕೆ ಹಾನಿಯಾಗಿದೆ. ನಾವು ಮಾನಸಿಕವಾಗಿ ನೋವು ಅನುಭವಿಸುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಸ್ವಲ್ಪದರಲ್ಲಿ ತಪ್ಪಿತು ಭಾರಿ ಗಂಡಾಂತರ: ಶಿವಮೊಗ್ಗದಿಂದ ತೊಲಗಿತು ದಕ್ಷಿಣ ಆಫ್ರಿಕಾ ರೂಪಾಂತರ

ಮಲೆನಾಡಿನಲ್ಲಿ ಸೌತ್ ಆಫ್ರಿಕಾ ವೈರಸ್.. ದುಬೈನಿಂದ ಮರಳಿದ ಶಿವಮೊಗ್ಗದ ವ್ಯಕ್ತಿಗೆ ಸೋಂಕು

Published On - 2:49 pm, Fri, 12 March 21

156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಆಟವೆಲ್ಲ ರಂಪಾಟವಾದಾಗ; ಹದ್ದುಮೀರಿ ನಡೆದುಕೊಂಡ ಸ್ಪರ್ಧಿಗಳು
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ಕೈ ತುತ್ತಿನ ಹಿಂದಿರುವ ಮಹತ್ವದ ಬಗ್ಗೆ ನಿಮಗೆ ಗೊತ್ತಾ?
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
ವಿಷ್ಣು, ಗಣೇಶನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
2025ರ ಸರ್ಕಾರಿ ಕ್ಯಾಲೆಂಡರ್ ಹೇಗಿರುತ್ತದೆ? ಇಲ್ಲಿದೆ ನೋಡಿ ವಿಡಿಯೋ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ಹಿಮದಿಂದ ತುಂಬಿದ ಕಣಿವೆಯಲ್ಲಿ ಚಿರತೆಗಳ ಕುಣಿದಾಟ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್