ವಿಮಾನದ ಮೇಲೆ ಸೋನು ಸೂದ್​ಗೆ ವಿಶೇಷ ಗೌರವ! ತಂದೆ-ತಾಯಿಯೇ ಇಲ್ಲ ಎಂದು ಮರುಗಿದ ನಟ

ಲಾಕ್​ಡೌನ್​ ವೇಳೆ ವಿದೇಶದಲ್ಲಿ ಸಿಲುಕುಕೊಂಡಿದ್ದ ಸಾವಿರಾರು ಭಾರತೀಯರನ್ನು ಕರೆತರು ಸೋನು ಸೂದ್​ ಮುಂದಾಗಿದ್ದರು. ಅವರ ಸಾಹಸಕ್ಕೆ ಸ್ಪೈಸ್​ ಜೆಟ್​ ಸಂಸ್ಥೆ ಕೈ ಜೋಡಿಸಿತ್ತು. ಅದನ್ನು ಈ ಸಂಸ್ಥೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ.

ವಿಮಾನದ ಮೇಲೆ ಸೋನು ಸೂದ್​ಗೆ ವಿಶೇಷ ಗೌರವ! ತಂದೆ-ತಾಯಿಯೇ ಇಲ್ಲ ಎಂದು ಮರುಗಿದ ನಟ
ಸೋನು ಸೂದ್​
Edited By:

Updated on: Mar 22, 2021 | 7:51 PM

ಬಹುಭಾಷಾ ನಟ ಸೋನು ಸೂದ್​ ಅವರು ಅನೇಕರ ಪಾಲಿಗೆ ರಿಯಲ್​ ಹೀರೋ. ಲಾಕ್​ಡೌನ್​ ಸಂದರ್ಭದಲ್ಲಿ ಅವರು ಬಡವರಿಗೆ ಮಾಡಿದ ಸಹಾಯ ಒಂದೆರಡಲ್ಲ. ಸಾರಿಗೆ ವ್ಯವಸ್ಥೆ ಇಲ್ಲದೇ ಇದ್ದಾಗ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ಜವಾಬ್ದಾರಿಯನ್ನು ಸೋನು ಹೊತ್ತುಕೊಂಡಿದ್ದರು. ಅಲ್ಲದೆ, ಲಾಕ್​ಡೌನ್​ ಬಳಿಕವೂ ಅವರು ಬಡವರಿಗೆ ಸಹಾಯ ಮಾಡುವುದನ್ನು ನಿಲ್ಲಿಸಲಿಲ್ಲ. ಅದಕ್ಕಾಗಿ ಅವರಿಗೆ ಈಗಲೂ ಎಲ್ಲರಿಂದ ಗೌರವ ಸಂದಾಯ ಆಗುತ್ತಲೇ ಇದೆ.

ಹೋದಲ್ಲೆಲ್ಲ ಸೋನುಗೆ ಸನ್ಮಾನ ಮಾಡಲಾಗುತ್ತಿದೆ. ಈಗ ಮತ್ತೊಂದು ವಿಶೇಷ ಗೌರವ ಅವರಿಗೆ ಸಿಕ್ಕಿದೆ. ಸ್ಪೈಸ್​ ಜೆಟ್​ ವಿಮಾನದ ಮೇಲೆ ಸೋನು ಫೋಟೋವನ್ನು ದೊಡ್ಡದಾಗಿ ಹಾಕಲಾಗಿದೆ. ದೇಶಾದ್ಯಂತ ಈ ವಿಮಾನಗಳು ಹಾರಾಡುತ್ತಿವೆ. ಆ ಮೂಲಕ ಬಡವರ ಪಾಲಿನ ರಿಯಲ್​ ಹೀರೋಗೆ ಗೌರವ ಸಲ್ಲಿಕೆ ಆಗುತ್ತಿದೆ. ಅದನ್ನು ಕಂಡು ಸೋನು ಫ್ಯಾನ್ಸ್​ ಖುಷಿ ಆಗಿದ್ದಾರೆ.

ಸ್ವತಃ ಸೋನು ಕೂಡ ಈ ಬಗ್ಗೆ ಸಂತಸದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಲಾಕ್​ಡೌನ್​ ವೇಳೆ ವಿದೇಶದಲ್ಲಿ ಸಿಲುಕುಕೊಂಡಿದ್ದ ಸಾವಿರಾರು ಭಾರತೀಯರನ್ನು ಕರೆತರಲು ಸೋನು ಸೂದ್​ ಮುಂದಾಗಿದ್ದರು. ಅವರ ಸಾಹಸಕ್ಕೆ ಸ್ಪೈಸ್​ ಜೆಟ್​ ಸಂಸ್ಥೆ ಕೈ ಜೋಡಿಸಿತ್ತು. ಅದನ್ನು ಈ ಸಂಸ್ಥೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದೆ. ತಮ್ಮ ಜೊತೆ ಒಳ್ಳೆಯ ಕಾರ್ಯದಲ್ಲಿ ಭಾಗಿ ಆದ ಸೋನುಗೆ ಈಗ ಇಂಥ ವಿಶೇಷ ರೀತಿಯಲ್ಲಿ ಗೌರವ ಸೂಚಿಸಿದೆ.

‘ಈ ಫೋಟೋಗಳನ್ನು ನೋಡಿದಾಗ ನನಗೆ ನಿಜಕ್ಕೂ ಹೆಮ್ಮೆ ಎನಿಸುತ್ತದೆ. ದೇಶದ ಹಲವಾರು ಏರ್​ಪೋರ್ಟ್​ಗಳಲ್ಲಿ ಈ ವಿಮಾನಗಳಿವೆ. ಲೇಹ್​, ಪಂಜಾಬ್​​, ಹೈದರಾಬಾದ್​, ದೆಹಲಿ ಮುಂತಾದ ಕಡೆಗಳಿಂದ ಜನರು ಅದರ ಫೋಟೋ ತೆಗೆದು ನನಗೆ ಕಳಿಸುತ್ತಿದ್ದಾರೆ. ನಾನು ಧನ್ಯ. ಆದರೆ ಈ ಸಂದರ್ಭದಲ್ಲಿ ಇದನ್ನೆಲ್ಲ ನನ್ನ ತಂದೆ-ತಾಯಿ ನೋಡಲು ಸಾಧ್ಯವಾಗಲಿಲ್ಲ’ ಎಂದು ಸೋನು ಎಮೋಷನಲ್​ ಆಗಿದ್ದಾರೆ.

ಮೊದಲೆಲ್ಲ ವಿಲನ್​ ಆಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಸೋನುಗೆ ಈಗ ಹೀರೋ ಪಾತ್ರಗಳು ಅರಸಿ ಬರುತ್ತಿವೆ. ಅಷ್ಟರಮಟ್ಟಿಗೆ ಅವರ ರಿಯಲ್​ ಲೈಫ್​ ಇಮೇಜ್​ ಬದಲಾಗಿದೆ.

YouTube video player

ಇದನ್ನೂ ಓದಿ: ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದ್ದರು ನಟ ಸೋನು ಸೂದ್

ಸೋನು ಸೂದ್ ಢಾಬಾದಲ್ಲಿ ತಯಾರಾಗ್ತಿದೆ ಬಿಸಿಬಿಸಿ ತಂದೂರಿ ರೋಟಿ: ವಿಡಿಯೊ ವೈರಲ್

Published On - 8:30 am, Mon, 22 March 21

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us