ದಾವಣಗೆರೆ: ಕುರಿದೊಡ್ಡಿಗೆ ನುಗ್ಗಿದ ಚಿರತೆ ದಾಳಿಯಿಂದ 30 ಕುರಿಗಳ ಸಾವು
ತಡರಾತ್ರಿ ಗ್ರಾಮದ ಕುರಿದೊಡ್ಡಿಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ಮಾಡಿದೆ. ಪರಿಣಾಮವಾಗಿ 30 ಕುರಿಗಳು ಸಾವನ್ನಪ್ಪಿವೆ. ದಡಗಾರನಹಳ್ಳಿಯ ಮೈಲಾರಪ್ಪ, ರಾಜಪ್ಪ ಹಾಗೂ ಆಕಾಶ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ.

ದಾವಣಗೆರೆ: ಚಿರತೆ ದಾಳಿಯಲ್ಲಿ 30 ಕುರಿಗಳು ಸಾವನ್ನಪ್ಪಿ, ಏಳು ಕುರಿಗಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದಡಗಾರನಹಳ್ಳಿಯಲ್ಲಿ ನಡೆದಿದೆ.
ತಡರಾತ್ರಿ ಗ್ರಾಮದ ಕುರಿದೊಡ್ಡಿಗೆ ನುಗ್ಗಿದ ಚಿರತೆ ಕುರಿಗಳ ಮೇಲೆ ದಾಳಿ ಮಾಡಿದೆ. ಪರಿಣಾಮವಾಗಿ 30 ಕುರಿಗಳು ಸಾವನ್ನಪ್ಪಿವೆ. ದಡಗಾರನಹಳ್ಳಿಯ ಮೈಲಾರಪ್ಪ, ರಾಜಪ್ಪ ಹಾಗೂ ಆಕಾಶ ಎಂಬುವರಿಗೆ ಸೇರಿದ ಕುರಿಗಳು ಎಂದು ತಿಳಿದುಬಂದಿದೆ.
ಚಿರತೆಯ ದಾಳಿಯಿಂದಾಗಿ ಜೀವನಕ್ಕೆ ಆಸರೆಯಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳನ್ನ ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ. ಅದೃಷ್ಟವಶಾತ್ ಕುರಿದೊಡ್ಡಿಯಿಂದ ಸ್ವಲ್ಪ ದೂರದಲ್ಲಿ ಮಲಗಿದ್ದ ಕುರಿ ಮಾಲೀಕರು ಚಿರತೆ ದಾಲಿಯಿಂದ ತಪ್ಪಿಸಿಕೊಂಡಿದ್ದಾರೆ. ಅರಣ್ಯದಿಂದ ಬಂದ ಚಿರತೆ ಕುರಿಗಳ ಮೇಲೆ ದಾಳಿ ಮಾಡಿ, ನಂತರ ಸ್ಥಳದಿಂದ ಪರಾರಿಯಾಗಿದೆ.
Published On - 8:02 am, Sat, 28 November 20