ಸಿಎಂ BSY ರಾಜಕೀಯ ಕಾರ್ಯದರ್ಶಿ NR ಸಂತೋಷ್ ಆತ್ಮಹತ್ಯೆ ಯತ್ನ, ರಾಜಕೀಯ ಒತ್ತಡ ಎಂದ ಕುಟುಂಬಸ್ಥರು
ಸಂತೋಷ್ ಆರೋಗ್ಯ ವಿಚಾರಿಸಿದ ಬಳಿಕ ಸಿಎಂ ಹೇಳಿಕೆ ನೀಡಿದ್ದು, ಸಂತೋಷ್ ಚೆನ್ನಾಗಿ ಮಾತಾಡುತ್ತಿದ್ದಾನೆ. ಹಾಗೂ ಅವರ ಕುಟುಂಬಸ್ಥರ ಜೊತೆ ಮಾತನಾಡಿದ್ದೇನೆ. ಬೆಳಗ್ಗೆ ನನ್ನ ಜೊತೆ ಮುಕ್ಕಾಲು ಘಂಟೆ ವಾಕ್ ಮಾಡ್ದ. ಖುಷ್ ಖುಷಿ ಆಗಿನೇ ಚೆನ್ನಾಗಿ ಇದ್ದ ಆದರೆ ಈಗ ಹೀಗಾಗಿದೆ.

ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ N.R. ಸಂತೋಷ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಿಎಂ ಬಿಎಸ್ವೈ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ N.R.ಸಂತೋಷ್ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೀಗಾಗಿ ಅವರನ್ನು ಕುಟುಂಬಸ್ಥರು M.S.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.ವಿಚಾರ ತಿಳಿದು ಕೂಡಲೇ ಆಸ್ಪತ್ರೆಗೆ ದಾವಿಸಿದ ಸಿಎಂ ಬಿ.ಎಸ್ ಯಡಿಯೂರಪ್ಪನವರು ಸಂತೋಷ್ ಅವರ ಆರೋಗ್ಯ ವಿಚಾರಿಸಿದ್ದಾರೆ.
ಸಂತೋಷ್ ಆರೋಗ್ಯ ವಿಚಾರಿಸಿದ ಬಳಿಕ ಸಿಎಂ ಹೇಳಿಕೆ ನೀಡಿದ್ದು, ಸಂತೋಷ್ ಚೆನ್ನಾಗಿ ಮಾತಾಡುತ್ತಿದ್ದಾನೆ. ಹಾಗೂ ಅವರ ಕುಟುಂಬಸ್ಥರ ಜೊತೆ ಮಾತನಾಡಿದ್ದೇನೆ. ಬೆಳಗ್ಗೆ ನನ್ನ ಜೊತೆ ಮುಕ್ಕಾಲು ಘಂಟೆ ವಾಕ್ ಮಾಡ್ದ. ಖುಷ್ ಖುಷಿ ಆಗಿನೇ ಚೆನ್ನಾಗಿ ಇದ್ದ ಆದರೆ ಈಗ ಹೀಗಾಗಿದೆ. ಬೆಳಗ್ಗೆ ಎದ್ದು ಒಡಾಡ್ತಾನೆ ಎಂದು M.S.ರಾಮಯ್ಯ ಆಸ್ಪತ್ರೆ ಬಳಿ ಸಿಎಂ ಬಿಎಸ್ವೈ ಹೇಳಿಕೆ ನೀಡಿದರು.
ಇನ್ನು ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕುಟುಂಬಸ್ಥರು, ರಾಜಕೀಯ ಒತ್ತಡದಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕವಾಗಿ ಯಾವುದೇ ಸಮಸ್ಯೆ ಇರಲಿಲ್ಲ. ಜೊತೆಗೆ ಆತ್ಮಹತ್ಯೆ ಯತ್ನಕ್ಕೂ ಮುನ್ನ ಸಂತೋಷ ಖಿನ್ನತೆಗೊಳಗಾಗಿದ್ದರು. ಕೆಲಸಕ್ಕೆ ಹೋಗಿ ಬಂದಾಗನಿಂದಲೂ ಬೇಸರದಲ್ಲಿದ್ದರು ಎಂದು ಕುಟುಂಬಸ್ಥರು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ: CM ರಾಜಕೀಯ ಕಾರ್ಯದರ್ಶಿ ಸಂತೋಷ್ ಆತ್ಮಹತ್ಯೆ ಯತ್ನಕ್ಕೆ ಕಾರಣವಾಯ್ತಾ.. ಆ ಪರ್ಸನಲ್ ವಿಡಿಯೋ?
Published On - 6:54 am, Sat, 28 November 20




