ಹೈಟೆಕ್ ವಿದೇಶಿ ಕಳ್ಳರ ಬಂಧನ, ಅ ಮೂವರ ಬಳಿ ದೊರೆತ ಚಿನ್ನ ಎಷ್ಟು ಗೊತ್ತಾ?
ಬೆಂಗಳೂರು: ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಕಳ್ಳತನ ನಡೆಸಿ, ವಿಲಾಸಿ ಜೀವನ ನಡೆಸುತ್ತಿದ್ದ ಮೂವರು ಕುಖ್ಯಾತ ವಿದೇಶಿ ಕಳ್ಳರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ವಿಲಿಯನ್ ಪಡಿಲ್ಲಾ ಮಾರ್ಟಿನ್ , ಸ್ಪೆಫನಿಯಾ ಮುನೋಜ್ ಮೋನ್ ಸಾಲ್ವೆ, ಕ್ರಿಶ್ಚಿಯನ್ ಯೀನೀಸ್ ನವರೋ ಒಲಾರ್ಥೆ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮೆಕ್ಸಿಕೋದ ನಕಲಿ ಪಾಸ್ ಪೋರ್ಟ್ ಅನ್ನು ಹೊಂದಿದ್ದು, ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬರುತ್ತಿದ್ದರು. ನಂತರ ಕೊಲಂಬಿಯಾದ ದಿಂದ ಖರೀದಿಸಿ ತಂದಿದ್ದ ಜಾಮರ್ ಬಳಸಿ ಕಳ್ಳತನ ಮಾಡುತ್ತಿದ್ದ ಈ ಕಳ್ಳರು, ಕಳ್ಳತನ ಮಾಡುವಾಗ […]
ಬೆಂಗಳೂರು: ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಕಳ್ಳತನ ನಡೆಸಿ, ವಿಲಾಸಿ ಜೀವನ ನಡೆಸುತ್ತಿದ್ದ ಮೂವರು ಕುಖ್ಯಾತ ವಿದೇಶಿ ಕಳ್ಳರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
ವಿಲಿಯನ್ ಪಡಿಲ್ಲಾ ಮಾರ್ಟಿನ್ , ಸ್ಪೆಫನಿಯಾ ಮುನೋಜ್ ಮೋನ್ ಸಾಲ್ವೆ, ಕ್ರಿಶ್ಚಿಯನ್ ಯೀನೀಸ್ ನವರೋ ಒಲಾರ್ಥೆ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮೆಕ್ಸಿಕೋದ ನಕಲಿ ಪಾಸ್ ಪೋರ್ಟ್ ಅನ್ನು ಹೊಂದಿದ್ದು, ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬರುತ್ತಿದ್ದರು.
ನಂತರ ಕೊಲಂಬಿಯಾದ ದಿಂದ ಖರೀದಿಸಿ ತಂದಿದ್ದ ಜಾಮರ್ ಬಳಸಿ ಕಳ್ಳತನ ಮಾಡುತ್ತಿದ್ದ ಈ ಕಳ್ಳರು, ಕಳ್ಳತನ ಮಾಡುವಾಗ ಸಿಕ್ಕಿಬೀಳುವ ಭೀ ತಿಯಿಂದ ಸಿಸಿಟಿವಿ ಕನೆಕ್ಷನ್ ವೈಯರ್ ಗಳನ್ನು ಕಟ್ ಮಾಡುತ್ತಿದ್ದರು. ಜೊತೆಗೆ ಈ ಗ್ಯಾಂಗ್ ಕಳ್ಳತನದಲ್ಲಿ ವಾಕಿ-ಟಾಕಿ ಯನ್ನು ಬಳಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಬಂಧಿತರಿಂದ 2 ಕೋಟಿ 58 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು, ಈ ಪ್ರಕರಣದ ಕಿಂಗ್ ಪಿನ್ ಆಗಿರುವ, ಗಸ್ತಾವೋ @ ತಾವೋ @ ಮುಸ್ತಾಫನ್ ಬಂಧಿಸಲು ಶೋಧ ಕಾರ್ಯ ಮುಂದುವರಿಸಿದ್ದಾರೆ.