ಮಟನ್ ಅಂಗಡಿಗೆ ಬಂದವ ಮಾಂಸ ಕತ್ತರಿಸುವ ಚಾಕು ತಗೊಂಡು.. ಇಬ್ಬರ ಜೀವವನ್ನೇ ತೆಗೆದ
ಬೆಂಗಳೂರು:ಬೆಳಗ್ಗೆ ಬಿರಿಯಾನಿ.. ಮಧ್ಯಾಹ್ನ ಮಟನ್.. ಬಾಡೂಟ ಇಲ್ಲದೆ ಭಾನುವಾರ ಕಂಪ್ಲೀಟ್ ಆಗಲ್ಲ. ಸಂಡೇ ಸ್ಪೆಷಲ್ಗೆ ಮಸಾಲೆ ಇರಲೇಬೇಕು. ಹೀಗಂತಲೇ ಅವನು ಮಟನ್ ಅಂಗಡಿ ಹತ್ರ ಹೋಗಿದ್ದ. ಆದ್ರೆ, ನಂತರ ನಡೆದಿದ್ದೇ ಭಯಾನಕ. ಮಾಂಸ ಕತ್ತರಿಸುತ್ತಿದ್ದ ಚಾಕುವಿನಲ್ಲಿ ಸಿಕ್ಕಸಿಕ್ಕವ್ರಿಗೆ ದಾಳಿ! ಪೊಲೀಸ್ರಂತ ಪೊಲೀಸ್ರೇ ಬೆಚ್ಚಿ ಬಿದಿದ್ರೆ, ರಸ್ತೆಯಲ್ಲಿ ಹೋಗುತ್ತಿದ್ದವ್ರೂ ಭಯಗೊಂಡಿದ್ದಾರೆ. ಬಿನ್ನಿ ಮಿಲ್ ಬಳಿಯ ಬಕ್ಷಿ ಗಾರ್ಡನ್ ಬಳಿ ಗಣೇಶ್ ಎಂಬಾತ ಸಿಕ್ಕ ಸಿಕ್ಕವರಿಗೆ ಚಾಕು ಇರಿದಿದ್ದಾನೆ. ಇವನು ಆಡಿರೋ ಆಟಕ್ಕೆ ಇಬ್ಬರ ಪ್ರಾಣವೇ ಹೋಗಿದೆ. 6 ಮಂದಿ […]

ಬೆಂಗಳೂರು:ಬೆಳಗ್ಗೆ ಬಿರಿಯಾನಿ.. ಮಧ್ಯಾಹ್ನ ಮಟನ್.. ಬಾಡೂಟ ಇಲ್ಲದೆ ಭಾನುವಾರ ಕಂಪ್ಲೀಟ್ ಆಗಲ್ಲ. ಸಂಡೇ ಸ್ಪೆಷಲ್ಗೆ ಮಸಾಲೆ ಇರಲೇಬೇಕು. ಹೀಗಂತಲೇ ಅವನು ಮಟನ್ ಅಂಗಡಿ ಹತ್ರ ಹೋಗಿದ್ದ. ಆದ್ರೆ, ನಂತರ ನಡೆದಿದ್ದೇ ಭಯಾನಕ.
ಮಾಂಸ ಕತ್ತರಿಸುತ್ತಿದ್ದ ಚಾಕುವಿನಲ್ಲಿ ಸಿಕ್ಕಸಿಕ್ಕವ್ರಿಗೆ ದಾಳಿ! ಪೊಲೀಸ್ರಂತ ಪೊಲೀಸ್ರೇ ಬೆಚ್ಚಿ ಬಿದಿದ್ರೆ, ರಸ್ತೆಯಲ್ಲಿ ಹೋಗುತ್ತಿದ್ದವ್ರೂ ಭಯಗೊಂಡಿದ್ದಾರೆ. ಬಿನ್ನಿ ಮಿಲ್ ಬಳಿಯ ಬಕ್ಷಿ ಗಾರ್ಡನ್ ಬಳಿ ಗಣೇಶ್ ಎಂಬಾತ ಸಿಕ್ಕ ಸಿಕ್ಕವರಿಗೆ ಚಾಕು ಇರಿದಿದ್ದಾನೆ. ಇವನು ಆಡಿರೋ ಆಟಕ್ಕೆ ಇಬ್ಬರ ಪ್ರಾಣವೇ ಹೋಗಿದೆ. 6 ಮಂದಿ ಆಸ್ಪತ್ರೆ ಪಾಲಾಗಿದ್ದಾರೆ. ಈತ ಸುಮಾರು ಒಂದೂವರೆ ಕಿಲೋ ಮೀಟರ್ ಉದ್ದಕ್ಕೂ ರಾಕ್ಷಸನಂತೆ ಹಾರಾಡಿದ್ದ.
ವಿಷ್ಯ ಏನಂದ್ರೆ, ಭಕ್ಷಿ ಗಾರ್ಡನ್ನ ಗಣೇಶ ಭಾನುವಾರ ಆಗಿದ್ರಿಂದ ಮಟನ್ ಖರೀದಿಗಾಗಿ ಮೈಸೂರು ರಸ್ತೆಯ ಮಟನ್ ಶಾಪ್ಗೆ ಹೋಗಿದ್ದ. ಆದ್ರೆ, ಅಲ್ಲಿ ಅದೇನಾಯ್ತೋ ಏನೋ.. ಏಕಾಏಕಿ ಮಟನ್ ಶಾಪ್ನಲ್ಲಿದ್ದ ಚಾಕು ಕೈಗೆತ್ತಿಕೊಂಡಿದ್ದ. ಬಳಿಕ ದಾರಿಯುದ್ದಕ್ಕೂ ಸಿಕ್ಕ ಸಿಕ್ಕವ್ರ ಮೇಲೆ ಅಟ್ಯಾಕ್ ಮಾಡಿದ್ದ.
ಬಿನ್ನಿ ಮಿಲ್ ಬಳಿ ರಸ್ತೆಯಲ್ಲಿ ಮಾರಿ ಎಂಬ ಯುವಕನ ಎದೆಗೆ ಇರಿದುಬಿಟ್ಟಿದ್ದ. ನಂತರ, ವೇಲಾಯುಧನ್, ಸುರೇಶ್ ಸೇರಿದಂತೆ ಒಟ್ಟು 8 ಮಂದಿ ಮೇಲೆ ದಾಳಿ ನಡೆಸಿದ್ದ. ದುರಂತ ಏನಂದ್ರೆ, ಕಿರಾತಕನ ಏಟಿನಿಂದ ತೀವ್ರ ರಕ್ತಸ್ರಾವವಾಗಿ ಮಾರಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ. ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ರಾಜೇಶ್(28) ಮೃತಪಟ್ಟಿದ್ದಾನೆ.
ಗಣೇಶನ ಹುಚ್ಚಾಟ ಗೊತ್ತಾಗ್ತಿದ್ದಂತೆ ಕಾಟನ್ ಪೇಟೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ರಸ್ತೆಯಲ್ಲಿ ಚಾಕು ಹಿಡಿದು ಓಡಾಡುತ್ತಿದ್ದ ಗಣೇಶನನ್ನು ಪಿಎಸ್ಐ ಮೂರ್ತಿ ಅಂಡ್ ಟೀಂ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು. ಆರೋಪಿಯು ಮಾನಸಿಕ ಅಸ್ವಸ್ಥ ಅಂತ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇವನು ಸೈಕೋ ಗಣೇಶನ: ಆರೋಪಿ ಗಣೇಶ್ ಥೇಟ್ ಮೆಂಟಲ್ ರೀತಿ ವರ್ತಿಸುತ್ತಿದ್ದಾನೆ. ಈತನನ್ನು ನೋಡಿಕೊಳ್ಳಲು ನಾಲ್ಕು ಜನ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ರಾತ್ರಿ ಇಡೀ ಕಾಟನ್ ಪೇಟೆ ಪೊಲೀಸರಿಗೆ ಟಾರ್ಚರ್ ಕೊಟ್ಟಿದ್ದಾನೆ. ಪೊಲೀಸರ ಮೇಲೆಯೇ ಎಗರಿ, ಸೈಕೋ ರೀತಿ ವರ್ತಿಸಿದ್ದಾನೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಸಿಕ್ಕ ಸಿಕ್ಕವರಿಗೆ ಚಾಕು ಇರಿತ, ಯಾರು ಈ ಕಿರಾತಕ?
Published On - 10:55 am, Mon, 19 October 20