UPSC Civil Service Exam: ವಯೋಮಿತಿ ಮೀರಿದವರಿಗೆ UPSC ಪರೀಕ್ಷೆ ಬರೆಯಲು ಹೆಚ್ಚುವರಿ ಅವಕಾಶವಿಲ್ಲ: ಕೇಂದ್ರ ಸರ್ಕಾರ

UPSC Civil Service Exam: ನಿಗದಿತ ವಯೋಮಾನ ಮೀರಿದ ಅಭ್ಯರ್ಥಿಗಳಿಗೆ ಪರೀಕ್ಷೆ ಎದುರಿಸಲು ಹೆಚ್ಚುವರಿ ಅವಕಾಶವಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮಾಹಿತಿ ನೀಡಿದೆ.

UPSC Civil Service Exam: ವಯೋಮಿತಿ ಮೀರಿದವರಿಗೆ UPSC ಪರೀಕ್ಷೆ ಬರೆಯಲು ಹೆಚ್ಚುವರಿ ಅವಕಾಶವಿಲ್ಲ: ಕೇಂದ್ರ ಸರ್ಕಾರ
ಸುಪ್ರೀಂ ಕೋರ್ಟ್​
Follow us
TV9 Web
| Updated By: ganapathi bhat

Updated on:Apr 06, 2022 | 8:03 PM

ದೆಹಲಿ: ನಿಗದಿತ ವಯೋಮಾನ ಮೀರಿದ, ಯುಪಿಎಸ್​ಸಿ ನಾಗರಿಕ ಸೇವಾ (UPSC Civil Service Examination) ಅಭ್ಯರ್ಥಿಗಳಿಗೆ ಪರೀಕ್ಷೆ ಎದುರಿಸಲು ಹೆಚ್ಚುವರಿ ಅವಕಾಶ ನೀಡುವ ವಿಚಾರವನ್ನು ಕೇಂದ್ರ ಸರ್ಕಾರ ವಿರೋಧಿಸುತ್ತದೆ ಎಂದು ಸುಪ್ರೀಂ ಕೋರ್ಟ್​ಗೆ ಮಂಗಳವಾರ (ಫೆ. 9) ಹೇಳಿಕೆ ನೀಡಿದೆ. 2020ರಲ್ಲಿ ಕೊವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ ಕೊನೆಯ ಬಾರಿ ಪರೀಕ್ಷೆ ಎದುರಿಸಲು ವಿಫಲರಾದವರು ಕೂಡ ವಯಸ್ಸು ಮೀರಿದ್ದರೆ ಪರೀಕ್ಷೆಗೆ ಹಾಜರಾಗುವ ಅವಕಾಶ ನೀಡಲು ಬಯಸುವುದಿಲ್ಲ ಎಂದು ಸರ್ಕಾರ ಕೋರ್ಟ್​ಗೆ ತಿಳಿಸಿದೆ.

ಒಂದು ವೇಳೆ, UPSC Civil Service ಪರೀಕ್ಷೆ ಬರೆಯಲು ಅರ್ಹ ವಯಸ್ಸಿನ ಮಿತಿಯೊಳಗೆ ಅಭ್ಯರ್ಥಿ ಇದ್ದಾರೆ ಎಂದಾದರೆ ಅಂಥವರಿಗೆ ಈ ಬಾರಿ ಪರೀಕ್ಷೆ ಬರೆಯುವ ಅವಕಾಶ ನೀಡಬಹುದು ಎಂದು ಹೇಳಿದೆ. ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿ ಎ.ಎಮ್. ಖನ್ವಿಲ್ಕರ್ ನೇತೃತ್ವದ ನ್ಯಾಯಪೀಠಕ್ಕೆ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.

ಕೊರೊನಾ ಕಾರಣದಿಂದ ಕಳೆದ ಬಾರಿಯ UPSC Civil Service ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದವರಿಗೆ, ಮತ್ತೊಂದು ಅವಕಾಶ ಕೋರಿ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿ ಸರ್ಕಾರ ಈ ರೀತಿ ತಿಳಿಸಿದೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು, ಇದು ಕೊನೆಯ ಕ್ಷಣದಲ್ಲಿ ತಯಾರಾಗಿ ಬರೆಯುವ ಪರೀಕ್ಷೆ ಅಲ್ಲ. ಅಭ್ಯರ್ಥಿಗಳು ವರ್ಷಾನುಗಟ್ಟಲೆ ಈ ಪರೀಕ್ಷೆಗೆ ತಯಾರಾಗುತ್ತಾರೆ. ಹಾಗಾಗಿ, ಬದಲಾವಣೆಯ ಅವಕಾಶ ಇರುವುದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ (Union Public Service Commission – UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (Civil Service Examination – CSE) ಪಾಲ್ಗೊಳ್ಳಲು 2020 ಕೊನೆಯ ಅವಕಾಶವಾಗಿದ್ದ, ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅನುಮತಿ ನೀಡಲು ಕೇಂದ್ರ ಸರ್ಕಾರ ಶುಕ್ರವಾರ (ಫೆ.5) ಒಪ್ಪಿಕೊಂಡಿತ್ತು. ಕೋವಿಡ್-19 ಪಿಡುಗಿನಿಂದಾಗಿ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದ ಸಾವಿರಾರು ಮಂದಿಯ ಉತ್ತಮ ನೌಕರಿ ಕನಸಿಗೆ ಇದರಿಂದ ಮರುಜೀವ ಬಂದಂತೆ ಆಗಿತ್ತು.

ಈ ನಿಯಮ ಸಡಿಲಿಕೆಯು ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ಒದಗಿಸಲು ಮಾತ್ರ ಸೀಮಿತವಾಗಿರುತ್ತದೆ. CSE-2021ಕ್ಕೆ ಮಾತ್ರ ಈ ಸಡಿಲಿಕೆ ಊರ್ಜಿತದಲ್ಲಿರುತ್ತದೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು 2020 ಕೊನೆಯ ಅವಕಾಶವಾಗಿದ್ದ ಮತ್ತು ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಮಾತ್ರ ಈ ವಿನಾಯ್ತಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್​ ನೇತೃತ್ವದ ನ್ಯಾಯಪೀಠಕ್ಕೆ ಮಾಹಿತಿ ನೀಡಿತ್ತು.

UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ

Published On - 11:50 am, Wed, 10 February 21