ಭಕ್ತಿಯ ಪರಾಕಾಷ್ಠೆ.. ದೇವಸ್ಥಾನದ ದಾರಿಗಾಗಿ ತಮ್ಮ ಮನೆಗಳನ್ನೇ ಒಡೆದುಹಾಕಿದ ಗ್ರಾಮಸ್ಥರು!
ಬಾಗಲಕೋಟೆ: ಗ್ರಾಮದ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನದ ದಾರಿಗಾಗಿ ಗ್ರಾಮಸ್ಥರು ತಮ್ಮ ಮನೆಗಳನ್ನೆ ಒಡೆದು ಹಾಕಿದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಕಂಡಿ ಗ್ರಾಮದಲ್ಲಿ ನಡೆದಿದೆ. ಮಧುರಖಂಡಿ ಗ್ರಾಮದ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಇಕ್ಕಟ್ಟಾದ ಗಲ್ಲಿಯ ಮೂಲಕ ತೆರಳುವಂತ ಸ್ಥಿತಿ ಇತ್ತು. ಪ್ರತಿ ವರ್ಷ ದವನದ ಹುಣ್ಣಿಮೆ ನಂತರ ನಡೆಯುವ ಫಲ್ಲಕ್ಕಿ ಉತ್ಸವಕ್ಕೆ 8ರಿಂದ 10 ಸಾವಿರಕ್ಕೂ ಅಧಿಕ ಜನರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ. ಮನೆಗಳನ್ನೇ ಬಿಟ್ಟುಕೊಟ್ಟು ಭಕ್ತಿ ಮೆರೆದ ಭಕ್ತರು: ಆದರೆ ಈ ಉತ್ಸವಕ್ಕೆ […]
ಬಾಗಲಕೋಟೆ: ಗ್ರಾಮದ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನದ ದಾರಿಗಾಗಿ ಗ್ರಾಮಸ್ಥರು ತಮ್ಮ ಮನೆಗಳನ್ನೆ ಒಡೆದು ಹಾಕಿದ ಅಪರೂಪದ ಘಟನೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಕಂಡಿ ಗ್ರಾಮದಲ್ಲಿ ನಡೆದಿದೆ. ಮಧುರಖಂಡಿ ಗ್ರಾಮದ ಐತಿಹಾಸಿಕ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಇಕ್ಕಟ್ಟಾದ ಗಲ್ಲಿಯ ಮೂಲಕ ತೆರಳುವಂತ ಸ್ಥಿತಿ ಇತ್ತು. ಪ್ರತಿ ವರ್ಷ ದವನದ ಹುಣ್ಣಿಮೆ ನಂತರ ನಡೆಯುವ ಫಲ್ಲಕ್ಕಿ ಉತ್ಸವಕ್ಕೆ 8ರಿಂದ 10 ಸಾವಿರಕ್ಕೂ ಅಧಿಕ ಜನರು ದೇವಿ ದರ್ಶನಕ್ಕೆ ಆಗಮಿಸುತ್ತಾರೆ.
ಮನೆಗಳನ್ನೇ ಬಿಟ್ಟುಕೊಟ್ಟು ಭಕ್ತಿ ಮೆರೆದ ಭಕ್ತರು: ಆದರೆ ಈ ಉತ್ಸವಕ್ಕೆ ದೇವಸ್ಥಾನಕ್ಕೆ ಹೋಗಲು ಸೂಕ್ತ ದಾರಿ ಇರಲಿಲ್ಲ. ಇದರಿಂದ ದೇವಸ್ಥಾನಕ್ಕೆ ನೇರವಾಗಿ ತೆರಳಲು ಗ್ರಾಮದ ಜನರು ತಮ್ಮ ಮನೆಗಳನ್ನೇ ದೇವಸ್ಥಾನ ದಾರಿಗೆ ಬಿಟ್ಟುಕೊಟ್ಟು ಭಕ್ತಿ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖರು ಸೇರಿ ದೇವಸ್ಥಾನಕ್ಕೆ ಹೊಸದಾಗಿ ದಾರಿ ಮಾಡುವ ಸಂಕಲ್ಪ ತೊಟ್ಟು ದೇವಸ್ಥಾನಕ್ಕೆ ನೇರವಾಗುವಂತೆ ಯೋಜನೆ ರೂಪಿಸಿ ಈಗಾಗಲೇ 20ಕ್ಕೂ ಹೆಚ್ಚು ಮನೆಗಳನ್ನು ತೆರವುಗೊಳಿಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಜಾಗ ದಾನ ನೀಡಿದ ಜನ: ಗ್ರಾಮದ ಮನೆ ಮಾಲೀಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮನೆಗಳನ್ನು ಬಿಟ್ಟುಕೊಟ್ಟಿದ್ದಾರೆ. ಕೆಲವರು ಆಶ್ರಯ ಮನೆಗಳಿಗೆ ಶಿಫ್ಟ್ ಆಗಿ ಸಹಕಾರ ನೀಡಿದ್ದಾರೆ. ದೇವಸ್ಥಾನದ ದಾರಿಗೆ ಮನೆಗಳನ್ನ ಬಿಟ್ಟುಕೊಟ್ಟವರಿಗೆ ಗ್ರಾಮದ ಕೆಲ ಪ್ರಮುಖರು ತಮ್ಮ ಜಾಗೆಗಗಳನ್ನೇ ಉಚಿತವಾಗಿ ನೀಡಿ ತ್ಯಾಗ ಮಾಡುವುದರೊಂದಿಗೆ ಮಾದರಿಯಾಗಿದ್ದಾರೆ. ಗ್ರಾಮದಲ್ಲಿನ 5-6 ಗಲ್ಲಿಗಳಲ್ಲಿನ ಎಲ್ಲ ಸಮಾಜದವರು ಒಂದೊಂದು ದಿನ ನೇಮಿಸಿಕೊಂಡು ಟ್ಯಾಂಕರ್, ಜೆಸಿಬಿಗಳನ್ನು ಬಳಸಿಕೊಂಡು ಶ್ರಮದಾನದಿಂದ ಕೇವಲ 8 ದಿನಗಳಲ್ಲಿ 23 ಅಡಿ ಅಗಲ, 550 ಅಡಿ ಉದ್ದದ ರಸ್ತೆಯನ್ನು ನಿರ್ಮಿಸಿ ಶ್ರಮದಾನದ ಮಹತ್ವ ಸಾರಿದ್ದಾರೆ.
Published On - 12:14 pm, Sat, 29 February 20