ವಿರುಷ್ಕಾ ದಂಪತಿಗೆ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!

ವಿರುಷ್ಕಾ ಜೋಡಿ ಇಂದು ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಕುರಿತು ವಿರಾಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ವಿರುಷ್ಕಾ ದಂಪತಿಗೆ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ!
ವಿರಾಟ್ ಮತ್ತು ಅನುಷ್ಕಾ
preethi shettigar

| Edited By: KUSHAL V

Dec 11, 2020 | 1:04 PM

ಮುಂಬೈ: ನಟಿ ಅನುಷ್ಕಾ ಶರ್ಮಾ ಮತ್ತು ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಒಂದಲ್ಲಾ ಒಂದು ವಿಷಯಕ್ಕೆ ಟ್ರೆಂಡ್ ಆಗುತ್ತಲೇ ಇರುತ್ತಾರೆ. ಸದ್ಯ ವಿರುಷ್ಕಾ ಜೋಡಿ ಇಂದು ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಕುರಿತು ವಿರಾಟ್ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಸದ್ಯ, ಪುಟ್ಟ ಕಂದಮ್ಮನ ಆಗಮನದ ನಿರೀಕ್ಷೆಯಲ್ಲಿರುವ ಈ ಸೆಲೆಬ್ರಿಟಿ ದಂಪತಿ, ತಮ್ಮ ವಿವಾಹ ವಾರ್ಷಿಕೋತ್ಸವದ ದಿನದಂದು ಮದುವೆಯ ಫೋಟೊವೊಂದನ್ನು ಟ್ವಿಟರ್​ನಲ್ಲಿ ಪೊಸ್ಟ್ ಮಾಡಿ ದಾಂಪತ್ಯ ಜೀವನದ ಹಾದಿಯಲ್ಲಿ 3 ವರ್ಷಗಳನ್ನು ಪೂರೈಸಿದ್ದೇವೆ. ಜೀವನ ಪೂರ್ತಿ ನಿನ್ನ ಜೊತೆಗಿರುವೆ ಎಂದು ವಿರಾಟ್​ ಬರೆದುಕೊಂಡಿದ್ದಾರೆ.

ಅನುಷ್ಕಾ ಕೂಡ ಇನ್​ಸ್ಟಾಗ್ರಾಂ​ನಲ್ಲಿ ವಿರಾಟ್​ಗೆ ಶುಭಾಶಯ ಕೋರಿದ್ದು ಮದುವೆಯಾಗಿ ಮೂರು ವರ್ಷಗಳಾಗಿದ್ದು, ಶೀಘ್ರದಲ್ಲಿ ನಾವು ಕೂಡ ಮೂರು ಮಂದಿಯಾಗುತ್ತಿದ್ದೇವೆ ಎಂದು ಹೇಳಿ.. ಮಿಸ್​ ಯು ಎಂದು ಬರೆದುಕೊಂಡಿದ್ದಾರೆ.

2017ರಲ್ಲಿ ವಿರಾಟ್ ಮತ್ತು ಅನುಷ್ಕಾ ಇಟಲಿಯಲ್ಲಿ ವಿವಾಹವಾಗಿದ್ದರು. ಸದ್ಯ, ವಿರಾಟ್ ಕೊಹ್ಲಿ ಭಾರತ ಕ್ರಿಕೆಟ್ ತಂಡದೊಂದಿಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 17ರಂದು ಅಡಿಲೇಡ್​ನಲ್ಲಿ ನಡೆಯುವ ಮೊದಲ ಟೆಸ್ಟ್ ಪಂದ್ಯದ ನಂತರವಷ್ಟೇ ಭಾರತಕ್ಕೆ ಮರಳಿದ್ದಾರೆ.

ನಾವಿಬ್ಬರು.. ನಮಗೊಬ್ಬರು ಎಂದು ಘೋಷಿಸಿದ ವಿರುಷ್ಕಾ ದಂಪತಿ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada