ದೇವಸ್ಥಾನದ ಕಾಣಿಕೆ ಡಬ್ಬಿ ಕದ್ದಿದ್ದ ವಿಶ್ವ ಹಿಂದೂ ಪರಿಷತ್ ಸಂಚಾಲಕ ಮಧ್ಯರಾತ್ರಿ ಅರೆಸ್ಟ್
ತಾರಾನಾಥ್ ಮೋಹನ್ ಮಂಗಳೂರು ಹೊರವಲಯದ ಮಂಜನಾಡಿ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕದ್ದು ಬಳಿಕ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕೂಡ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರು: ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕದ್ದಿದ್ದ ಹಿನ್ನೆಲೆಯಲ್ಲಿ VHP ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ. ತಾರಾನಾಥ್ ಮೋಹನ್ ಬಂಧಿತ ಆರೋಪಿ. ಮಂಗಳೂರು ಹೊರವಲಯದ ಮೊಂಟೆಪದವು ನಿವಾಸಿಯಾಗಿರುವ ಹಾಗೂ ವಿಶ್ವ ಹಿಂದೂ ಪರಿಷತ್ ಉಳ್ಳಾಲ ಗ್ರಾಮಾಂತರ ಪ್ರಖಂಡ ಸಂಚಾಲಕ ತಾರಾನಾಥ್ ಮೋಹನ್ನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
VHP ಸಂಘಟನೆ ಜವಾಬ್ದಾರಿಯಿಂದ ಹೊರಕ್ಕೆ ತಾರಾನಾಥ್ ಮೋಹನ್ ಮಂಗಳೂರು ಹೊರವಲಯದ ಮಂಜನಾಡಿ ದೇವಸ್ಥಾನದಲ್ಲಿ ಕಾಣಿಕೆ ಡಬ್ಬಿ ಕದ್ದು ಬಳಿಕ ಮೊಂಟೆಪದವು ಬಳಿಯ ಮನೆಯೊಂದರಿಂದ ಬೈಕ್ ಕೂಡ ಕದ್ದು ಪರಾರಿಯಾಗಿದ್ದ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೂರು ಸಂಬಂಧ ತನಿಖೆ ಬೆನ್ನಟ್ಟಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ತಾರಾನಾಥ್ನನ್ನು ನಿನ್ನೆ ಮಧ್ಯರಾತ್ರಿ ಬಂಧಿಸಿದ್ದಾರೆ. ಇನ್ನು ತಾರಾನಾಥ್ನನ್ನು VHP ಸಂಘಟನೆ ಜವಾಬ್ದಾರಿಯಿಂದ ಹೊರ ಹಾಕಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಮಂಗಳೂರಿನ ಉಗ್ರ ಗೋಡೆ ಬರಹ ಪ್ರಕರಣ: NIA ಕಚೇರಿ ತೆರೆಯಲು ವಿಶ್ವ ಹಿಂದೂ ಪರಿಷತ್ನಿಂದ ಆಗ್ರಹ