ವಾಟ್ಸ್ಆ್ಯಪ್ ಇಲ್ಲದೆ ಬದುಕಬಹುದೇ..?: ಇದನ್ನು ಓದಿ ನೀವೇ ಕಂಡುಕೊಳ್ಳಿ ಉತ್ತರ
ಅತಿ ಚಿಕ್ಕ ವಿಷಯದಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳವರೆಗೂ ವಾಟ್ಸ್ಆ್ಯಪ್ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಭಾರತೀಯರ ಪಾಲಿಗಂತೂ ದಿನನಿತ್ಯದ ಅವಶ್ಯಕತೆಯಾಗಿದೆ. ಹೀಗಾಗಿ, ವಾಟ್ಸ್ಆ್ಯಪ್ನ್ನು ಬಹಳ ದಿನ ದೂರವಿಟ್ಟು ಬದುಕಲಾಗದು ಎನ್ನುತ್ತಿದ್ದಾರೆ ವಾಟ್ಸ್ಆ್ಯಪ್ ವಾದಿಗಳು!

ವಾಟ್ಸಾಪ್ ಪ್ರೈವಸಿ ನಿಯಮಗಳಲ್ಲಿ ಅಪ್ಡೇಟ್ ತರುತ್ತಿದ್ದಂತೆ ಭಾರತದಲ್ಲಿ ಆದ ಗಲಾಟೆಗಳಿಗೆ ಬರವಿಲ್ಲ. ವಾಟ್ಸ್ಆ್ಯಪ್ ಬಳಕೆ ನಿಲ್ಲಿಸುತ್ತೇವೆ, ಇನ್ಮುಂದೆ ಸಿಗ್ನಲ್ ಬಳಸುತ್ತೇವೆ..ನಮಗೆ ವಾಟ್ಸ್ಆ್ಯಪ್ ಬೇಡವೇ ಬೇಡ..ನಮ್ಮ ಡಾಟಾ ಸುರಕ್ಷಿತವಾಗಿರಲಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದವರೆಷ್ಟೋ..ಇನ್ಮುಂದೆ ವಾಟ್ಸ್ಆ್ಯಪ್ ಗೋಜಿಗೇ ಹೋಗಲ್ಲ ಎಂದು ಅನ್ ಇನ್ಸ್ಟಾಲ್ ಮಾಡಿದವರೂ ಇದ್ದಾರೆ. ಆದರೆ ಸದ್ಯದ ಪರಿಸ್ಥಿತಿ ವಾಟ್ಸ್ಆ್ಯಪ್ನಿಂದ ಹೆಚ್ಚು ದಿನ ದೂರವುಳಿಯಲು ಅವಕಾಶ ನೀಡುವಂತಿಲ್ಲ..ಏಕೆ ಗೊತ್ತೇ? ಇಲ್ಲಿದೆ ನೋಡಿ ವಿವರ..
1. ನೀವು ಜಿಯೋಮಾರ್ಟ್ನ ಗ್ರಾಹಕರು ಅಥವಾ ವ್ಯಾಪಾರಿ ಆಗಿದ್ದರೆ ವಾಟ್ಸಾಪ್ ತೊರೆಯೋಕೆ ಸಾಧ್ಯವಾಗುವುದಿಲ್ಲ. ಏಕೆಂದರೆ, ವಾಟ್ಸಾಪ್ ಇಲ್ಲದೆ, ಜಿಯೋ ಮಾರ್ಟ್ ಕೆಲಸ ಮಾಡದು!
2. ಕೊರೊನಾ ಪಿಡುಗಿನಲ್ಲಿ ಎಷ್ಟೋ ಅಂಗಡಿಗಳು ವಾಟ್ಸ್ಆ್ಯಪ್ ಮೂಲಕವೇ ಸಾಮಾಗ್ರಿಗಳನ್ನು ಕಾಯ್ದಿರಿಸುವ ಮತ್ತು ಖರೀದಿಸುವ ಅವಕಾಶ ಒದಗಿಸಿವೆ. ನಮ್ಮಲ್ಲಿ ಅನೇಕರು ವಾಟ್ಸ್ಆ್ಯಪ್ ಮೆಸೇಜ್ ಮೂಲಕವೇ ಅಗತ್ಯ ಸಾಮಾಗ್ರಿಗಳನ್ನು ಕಾದಿರಿಸುತ್ತಾರೆ. ಅಂಥವರಿಗೆ ವಾಟ್ಸಾಪ್ ಬಳಕೆ ಬೀಡೋಕೆ ಸಾಧ್ಯವಾಗದು.
3. ಶೇ. 90 ಜನರು ಕರೆ ಮಾಡಲು ಬಳಸುವ ನಂಬರ್ ಮತ್ತು ವಾಟ್ಸ್ಆ್ಯಪ್ ಸಂಖ್ಯೆ ಒಂದೇ ಆಗಿರುತ್ತದೆ.
4. ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ತನ್ನದೇ ಆದ ಡಿಜಿಟಲ್ ಹಣ Diem ನ್ನು ಜಾರಿಗೆ ತರುವ ಯೋಜನೆ ಹೊಂದಿದೆ. ನೀವು ಫೇಸ್ಬುಕ್ ಮತ್ತು ವಾಟ್ಸ್ಆ್ಯಪ್ ಬಳಕೆದಾರರಾಗಿದ್ದರೆ ಈ ಡಿಜಿಟಲ್ ಹಣ ಯೋಜನೆಯ ಭಾಗವಾಗುತ್ತೀರಿ.
5. ವಾಟ್ಸಾಪ್ ಬಳಸುತ್ತಿರುವವರೆಲ್ಲರ ಮಾಹಿತಿಯೂ ಈಗಾಗಲೇ ಫೇಸ್ಬುಕ್ ಬಳಿಯಿದೆ.
6. ವಾಟ್ಸ್ಆ್ಯಪ್ನ್ನು ಜಿಯೋ ನಂಬರ್ನಲ್ಲಿ ಬಳಸುತ್ತಿದ್ದರೆ, ನಿಮ್ಮ ಡಾಟಾ ವಾಟ್ಸ್ಆ್ಯಪ್ ಬಳಿಯಿದೆ ಎಂದರ್ಥ.
ಹೀಗೆ, ಅತಿ ಚಿಕ್ಕ ವಿಷಯದಿಂದ ಹಿಡಿದು ದೊಡ್ಡ ದೊಡ್ಡ ವಿಷಯಗಳವರೆಗೂ ವಾಟ್ಸ್ಆ್ಯಪ್ ತನ್ನ ಕಬಂದ ಬಾಹುಗಳನ್ನು ಚಾಚಿದೆ. ಭಾರತೀಯರ ಪಾಲಿಗಂತೂ ದಿನನಿತ್ಯದ ಅವಶ್ಯಕತೆಯಾಗಿದೆ. ಹೀಗಾಗಿ, ವಾಟ್ಸ್ಆ್ಯಪ್ನ್ನು ಬಹಳ ದಿನ ದೂರವಿಟ್ಟು ಬದುಕಲಾಗದು ಎನ್ನುತ್ತಿದ್ದಾರೆ ವಾಟ್ಸ್ಆ್ಯಪ್ ವಾದಿಗಳು!
ಇನ್ಮುಂದೆ ಡೆಸ್ಕ್ಟಾಪ್ನಲ್ಲೂ ಸಿಗಲಿದೆ ವಾಟ್ಸ್ಆ್ಯಪ್ ಕಾಲ್ ಸೌಲಭ್ಯ; ಆದ್ರೆ ಸದ್ಯಕ್ಕೆ ಎಲ್ಲ ಬಳಕೆದಾರರಿಗೂ ಅಲ್ಲ!



