KIAB ಆವರಣದಲ್ಲಿ ವರ್ಲ್ಡ್​ ಬುಕ್ ಆಫ್ ರೆಕಾರ್ಡ್ಸ್​ ಸೇರಿದ ಕೆಂಪೇಗೌಡರ ಪ್ರತಿಮೆ: ಇದು ಕನ್ನಡಿಗರ ಹೆಮ್ಮೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2022 | 8:11 PM

ವಿಶ್ವದ ಮೊದಲ ಮತ್ತು ಅತ್ಯಂತ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ವರ್ಲ್ಡ್​ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. 64 ಕೋಟಿ ರೂ. ವೆಚ್ಚದ 108 ಅಡಿಯ ಬೃಹತ್ ಕಂಚಿನ ಪ್ರತಿಮೆ ಇದಾಗಿದೆ.

KIAB ಆವರಣದಲ್ಲಿ ವರ್ಲ್ಡ್​ ಬುಕ್ ಆಫ್ ರೆಕಾರ್ಡ್ಸ್​ ಸೇರಿದ ಕೆಂಪೇಗೌಡರ ಪ್ರತಿಮೆ: ಇದು ಕನ್ನಡಿಗರ ಹೆಮ್ಮೆ
ವರ್ಲ್ಡ್​ ಬುಕ್ ಆಫ್ ರೆಕಾರ್ಡ್ಸ್​ ಸೇರಿದ ಕೆಂಪೇಗೌಡರ ಪ್ರಗತಿ ಪ್ರತಿಮೆ
Follow us on

ಬೆಂಗಳೂರು: ವಿಶ್ವದ ಮೊದಲ ಮತ್ತು ಅತ್ಯಂತ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ವರ್ಲ್ಡ್​ ಬುಕ್ ಆಫ್ ರೆಕಾರ್ಡ್ಸ್ ಸೇರಿದೆ. 84 ಕೋಟಿ ರೂ. ವೆಚ್ಚದ 108 ಅಡಿಯ ಬೃಹತ್ ಕಂಚಿನ ಪ್ರತಿಮೆ ಇದಾಗಿದೆ. KIAB ಆವರಣದಲ್ಲಿ ಸ್ಥಾಪಿಸಲಾಗಿದೆ. ನ. 11ರಂದು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್​ಪೋರ್ಟ್​​​ನಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ (Kempegowda statue) ಅನಾವರಣಗೊಳ್ಳಲಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಲಿದ್ದಾರೆ. ಜೊತೆಗೆ ಪ್ರತಿಮೆಯ ಮುಂಭಾಗದಲ್ಲಿ 3 ಎಕರೆ ಜಾಗದಲ್ಲಿ 20 ಕೋಟಿ ವೆಚ್ಚದಲ್ಲಿ ಥೀಮ್ ಪಾರ್ಕ್ ಸಹ ತಲೆ ಎತ್ತಲಿದ್ದು, ಕೆಂಪೇಗೌಡರ ಜೀವನ ಚರಿತ್ರೆ ಆಡಳಿತದ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಮಹತ್ವದ  ಕಾರ್ಯವನ್ನು ಸರ್ಕಾರ ಮಾಡುತ್ತಿದೆ.


ಇನ್ನು ಏಕತೆ ಪ್ರತಿಮೆ ನಿರ್ಮಾಣ ಮಾಡಿದ ರಾಮ್​ ಸುತಾರ್ ಕ್ರಿಯೇಷನ್ಸ್​ ಅವರಿಂದ ಪ್ರತಿಮೆಯ ವಿನ್ಯಾಸ ಹಾಗೂ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡರ ಕೈಯಲ್ಲಿರುವ ಖಡ್ಗ 4000 ಕೆ.ಜಿ, ಉಕ್ಕು 120 ಟನ್​, ಕಂಚು 98 ಟನ್​ ಇದ್ದು, ಒಟ್ಟು ಮೊತ್ತ 84 ಕೋಟಿ ವೆಚ್ಚವಾಗಿದೆ.


ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣದ ಅಂಗವಾಗಿ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹಕ್ಕಾಗಿ ಅಕ್ಟೋಬರ್‌ 21 ರಂದು ವಿಧಾನ ಸೌಧದಿಂದ ಕೆಂಪೇಗೌಡ ರಥಗಳು ತೆರಳಿದ್ದವು. ವಿವಿಧ ಪುಣ್ಯ ಭೂಮಿಯ ಪವಿತ್ರ ಮೃತ್ತಿಕೆಯ ಸಮೇತವಾಗಿ ಇಂದು ಪ್ರತಿಮೆಯ ಸ್ಥಳಕ್ಕೆ ಆಗಮಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:06 pm, Wed, 9 November 22